ಶಿ ಯೂಕಿ ಆಲ್ ಇಂಗ್ಲೆಂಡ್ ಚಾಂಪಿಯನ್
ಲಿನ್ ಡಾನ್‌ಗೆ ಆಘಾತ

ಬರ್ಮಿಂಗ್‌ಹ್ಯಾಮ್, ಮಾ.19: ಚೀನಾದ ಬ್ಯಾಡ್ಮಿಂಟನ್ ಸ್ಟಾರ್ ಲಿನ್ ಡಾನ್ ಅವರಿಗೆ ಆಘಾತ ನೀಡುವ ಮೂಲಕ ಯುವ ಆಟಗಾರ ಶಿ ಯೂಕಿ ಮೊದಲ ಬಾರಿ ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇಲ್ಲಿ ನಡೆದ ಫೈನಲ್‌ನಲ್ಲಿ ಲಿನ್ ಡಾನ್ ವಿರುದ್ಧ ಶಿ ಯೂಕಿ ಅವರು 21-19, 16-21, 21-9 ಅಂತರದಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡರು. ಆರು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ ಲಿನ್ ಡಾನ್ ಅವರಿಗೆ ಶಿ ಯೂಕಿ ಏಳನೇ ಬಾರಿ ಪ್ರಶಸ್ತಿ ಎತ್ತಲು ಅವಕಾಶ ನೀಡಲಿಲ್ಲ.
Next Story





