Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶರಣರ ಹೋರಾಟಕ್ಕೆ ಸಂದ ಜಯ

ಶರಣರ ಹೋರಾಟಕ್ಕೆ ಸಂದ ಜಯ

ವಾರ್ತಾಭಾರತಿವಾರ್ತಾಭಾರತಿ20 March 2018 12:13 AM IST
share
ಶರಣರ ಹೋರಾಟಕ್ಕೆ ಸಂದ ಜಯ

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಶಿಫಾರಸು ಮಾಡಿದೆ. ಈ ತೀರ್ಮಾನ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ರಂಗದ ಮೇಲೆ ಭಾರೀ ಪರಿಣಾಮ ಬೀರಲಿರುವುದರಲ್ಲಿ ಸಂಶಯವಿಲ್ಲ. 12ನೇ ಶತಮಾನದ ಬಸವ ತತ್ವ ಮತ್ತೆ ರಾಜ್ಯದಲ್ಲಿ ಜಾಗೃತಗೊಂಡಿರುವ ಸಂಕೇತ ಇದು. ವೈದಿಕ ಚಿಂತನೆಗಳ ವಿರುದ್ಧ ಬಂಡಾಯವೆದ್ದು, ಜಾತಿ ಅಸಮಾನತೆಗಳನ್ನು ಹೋಗಲಾಡಿಸಲು ನಡೆಸಿದ ಕ್ರಾಂತಿಯ ಫಲವಾಗಿ ಲಿಂಗಾಯತ ಧರ್ಮ ಹುಟ್ಟಿಕೊಂಡಿತು. ಇದೇ ಸಂದರ್ಭದಲ್ಲಿ ಬಸವಣ್ಣ ರ ಚಳವಳಿಯ ವಿರುದ್ಧ ವೈದಿಕರಿಂದ ಭಾರೀ ದಾಳಿ ನಡೆದಿತ್ತು. ಬಸವಣ್ಣ ಅರಮನೆಯನ್ನು ತೊರೆಯಬೇಕಾಯಿತು. ಶರಣರನ್ನು ದಮನ ಮಾಡುವಲ್ಲಿ ಅವರು ಯಶಸ್ವಿಯಾದರು. ಆದರೆ ಲಿಂಗಾಯತ ಧರ್ಮ ಮಾತ್ರ ಉಳಿದು ಕೊಂಡಿತ್ತು. ನಿಧಾನಕ್ಕೆ ಕರ್ನಾಟಕದಲ್ಲಿ ಬೆಳೆಯಿತು. ಸಮಾನತೆಯ ಆಶಯದ ತಳಹದಿಯ ಮೇಲೆ ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮ ಲಿಂಗಾಯತ ಧರ್ಮ ಎನ್ನುವ ಹೆಮ್ಮೆ ಕನ್ನಡಿಗರದ್ದು.

ಲಿಂಗಾಯತ ಸ್ವತಂತ್ರ ಧರ್ಮವಾದರೆ, ಈ ಧರ್ಮದ ಚಿಂತನೆಗಳ ಮೂಲಕ ಕನ್ನಡನಾಡು ಜಗದಗಲ ತಲುಪುತ್ತದೆ. ದುರದೃಷ್ಟವಶಾತ್ ಲಿಂಗಾಯತ ಧರ್ಮದ ಸ್ಥಾಪಕರಾದ ಬಸವಣ್ಣನವರನ್ನು ಮುಗಿಸಿದ ವೈದಿಕ ಸಿದ್ಧಾಂತ, ಬಳಿಕ ಲಿಂಗಾಯತ ಧರ್ಮವನ್ನೂ ಆಪೋಶನ ತೆಗೆದುಕೊಂಡದ್ದು ಇತಿಹಾಸ. ವೀರಶೈವ ಧರ್ಮ ನಿಧಾನಕ್ಕೆ ಲಿಂಗಾಯತ ಧರ್ಮದೊಂದಿಗೆ ಬೆಸೆದುಕೊಂಡಿತು. ಲಿಂಗಾಯತರ ಆತ್ಮಲಿಂಗವನ್ನು ಶಿವಲಿಂಗದ ಜೊತೆಗೆ ಜೋಡಿಸಿಕೊಂಡಿತು. ವೀರಶೈವ ಧರ್ಮದ ಸ್ಥಾಪಕ ಬಸವಣ್ಣ ಅಲ್ಲ. ಅದು ಶೈವಪಂಥದ ಒಂದು ಭಾಗವಾಗಿದೆ. ಅದರ ಮೂಲ ಕರ್ನಾಟಕ ಅಲ್ಲ. ಆಂಧ್ರದಿಂದ ಬಂದ ಪಂಥ ಅದು. ಲಿಂಗಾಯತ ಧರ್ಮ ವಿಗ್ರಹಾರಾಧನೆಯನ್ನು ಮಾಡುವುದಿಲ್ಲ. ಅವುಗಳಿಗೆ ಮಠಗಳು, ಪೀಠಗಳು ಇಲ್ಲ. ಆದರೆ ವೀರಶೈವ ಪಂಥ ವಿಗ್ರಹಾರಾಧನೆಯನ್ನು ಮಾಡುತ್ತದೆ. ಅವುಗಳಿಗೆ ಮಠಗಳಿವೆ, ಪೀಠಗಳಿವೆ. ಲಿಂಗಾಯತ ಧರ್ಮವು ವೈದಿಕ ಚಿಂತನೆಗಳನ್ನು ಸಂಪೂರ್ಣ ನಿರಾಕರಿಸುತ್ತದೆ. ಆಗಮ ಶಾಸ್ತ್ರಗಳನ್ನು, ವೇದಗಳನ್ನು ಕಟುವಾಗಿ ಟೀಕಿಸುತ್ತದೆ. ಆದರೆ ವೀರಶೈವ ಪಂಥ ವೈದಿಕ ನಂಬಿಕೆಗಳ ಜೊತೆಗೆ ತಳಕು ಹಾಕಿಕೊಂಡಿದೆ. ಬುದ್ಧನನ್ನೇ ದಶಾವತಾರದ ಒಂದು ಭಾಗವಾಗಿಸಿ ಆತನನ್ನು ಮುಗಿಸಲು ಸಂಚು ನಡೆಸಿದ ವೈದಿಕರು, ಲಿಂಗಾಯತ ಧರ್ಮವನ್ನೂ ಬಿಡಲಿಲ್ಲ. ಅದಕ್ಕಾಗಿ ಅವರು ಬಳಸಿಕೊಂಡದ್ದು ವೀರಶೈವ ಧರ್ಮವನ್ನು. ಇದು ಎಲ್ಲಿಯವರೆಗೆ ತಲುಪಿತೆಂದರೆ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳು ನಿಧಾನಕ್ಕೆ ಬದಿಗೆ ಸರಿದು, ಆ ಜಾಗದಲ್ಲಿ ಮತ್ತೆ ವೈದಿಕ ಚಿಂತನೆಗಳು, ಆರಾಧನಾ ಕ್ರಮಗಳು ಸೇರಿಕೊಂಡವು. ವೀರಶೈವರು ಮತ್ತು ಲಿಂಗಾಯತರ ನಡುವಿನ ಅಂತರ ಕಡಿಮೆಯಾಗುತ್ತಿದ್ದಂತೆಯೇ ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗವಾದರು. ಸ್ವಾಮೀಜಿಗಳು, ಚಿಂತಕರ ಮಟ್ಟದಲ್ಲಿ ಲಿಂಗಾಯತ ಚಿಂತನೆ ಜಾಗೃತವಾಗಿತ್ತಾದರೂ, ಶ್ರೀಸಾಮಾನ್ಯ ಲಿಂಗಾಯತರು ಸುಲಭದಲ್ಲಿ ವೈದಿಕರಿಗೆ ಬಲಿಯಾದರು.

ಲಿಂಗಾಯತ ಧರ್ಮ ‘ವೀರಶೈವ ಲಿಂಗಾಯತ’ವಾಗಿ ಬದಲಾಯಿತು. ಲಿಂಗಾಯತರೂ ಮೂರ್ತಿಪೂಜೆಯಲ್ಲಿ ಭಾಗವಹಿಸಲಾರಂಭಿಸಿದರು. ವಿಪರ್ಯಾಸವೆಂದರೆ, ಬಸವಣ್ಣ ಮತ್ತು ಅವರ ಅನುಯಾಯಿಗಳು ಯಾವ ಮನುವಾದವನ್ನು ವಿರೋಧಿಸಲು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟರೋ ಅದೇ ಮನುವಾದದ ತಳಹದಿಯ ಮೇಲೆ ನಿಂತ ಆರೆಸ್ಸೆಸ್‌ನ ಹಿಂಬಾಲಕರಾದರು ಲಿಂಗಾಯತರು. ನಿಧಾನಕ್ಕೆ ಲಿಂಗಾಯತ ತನ್ನ ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ವೈದಿಕರ ಹಿಡಿತಕ್ಕೆ ಸಿಕ್ಕಿತು. ಜಾತಿ ಭೇದವನ್ನು ಎತ್ತಿಹಿಡಿಯುವ ವೈದಿಕ ಮಠಾಧೀಶರು ಲಿಂಗಾಯತರನ್ನು ನಿಯಂತ್ರಿಸುವ ಮಟ್ಟಕ್ಕೆ ಬಂದರು. ಈ ಸಂದರ್ಭದಲ್ಲಿ ಲಿಂಗಾಯತರಲ್ಲೇ ಒಂದು ದೊಡ್ಡ ವರ್ಗ ಈ ಬಗ್ಗೆ ಜಾಗೃತವಾಯಿತು. ಲಿಂಗಾಯತ ಧರ್ಮವನ್ನು ವೀರಶೈವ ಪಂಥ ದಾರಿಗೆಡಿಸಿರುವುದು ಅವರ ಅರಿವಿಗೆ ಬಂತು. ಆತ್ಮಲಿಂಗದ ಜಾಗದಲ್ಲಿ ಶಿವಲಿಂಗ ಬಂದು ಕೂತಿರುವುದು ಗೊತ್ತಾಯಿತು. ಲಿಂಗಾಯತ ಧರ್ಮ ಎಷ್ಟು ಕಲಸು ಮೇಲೋಗರವಾಗಿತ್ತೆಂದರೆ, ಲಿಂಗಾಯತ ಸ್ವಾಮೀಜಿಗಳೇ ಈ ಬಗ್ಗೆ ಗೊಂದಲಗೊಂಡಿದ್ದರು. ಇಂತಹ ಸಂದರ್ಭದಲ್ಲಿ ಹುಟ್ಟಿದ್ದು ‘ಲಿಂಗಾಯತ ಪ್ರತ್ಯೇಕ ಧರ್ಮ’ ಚಳವಳಿ. ಈ ಚಳವಳಿ ಹುಟ್ಟಿದ್ದು ಇಂದು ನಿನ್ನೆಯಲ್ಲ. ಹಲವು ದಶಕಗಳ ಹಿಂದೆಯೇ ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಕೇಳಿ ಬಂದಿತ್ತು. ಈ ಬಗ್ಗೆ ಅಪಾರ ಸಂಶೋಧನೆ ಮಾಡಿದವರು ದಿವಂಗತ ಎಂ.ಎಂ.ಕಲಬುರ್ಗಿ.

ವೀರಶೈವ ಮತ್ತು ಲಿಂಗಾಯತ ಧರ್ಮ ಹೇಗೆ ಭಿನ್ನ ಮತ್ತು ಲಿಂಗಾಯತ ಧರ್ಮ ಯಾಕೆ ಹಿಂದೂ ಧರ್ಮ ಅಲ್ಲ ಎನ್ನುವುದನ್ನು ಅವರು ಬರೆದಿದ್ದಾರೆ ಮಾತ್ರವಲ್ಲ, ವಿವಿಧೆಡೆ ತಮ್ಮ ಭಾಷಣಗಳಲ್ಲೂ ಇದನ್ನು ಹೇಳಿದ್ದಾರೆ. ಲಿಂಗಾಯತ ಧರ್ಮದ ಬಗ್ಗೆ ಧ್ವನಿಯೆತ್ತಿದ್ದೇ ಕಲಬುರ್ಗಿಯ ಕಗ್ಗೊಲೆಗೆ ಕಾರಣವಾಯಿತು ಎಂಬ ವಾದವೂ ಇದೆ. ಇತ್ತೀಚೆಗೆ ಹತ್ಯೆಗೊಳಗಾದ ಗೌರಿ ಲಂಕೇಶ್ ಕೂಡ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ಲಿಂಗಾಯತ ಸಮುದಾಯದಿಂದ ಬಂದಿದ್ದ ಅವರು, ಲಿಂಗಾಯತ ಚಿಂತನೆ ಹೇಗೆ ಬ್ರಾಹ್ಮಣ ಚಿಂತನೆಗಿಂತ ಭಿನ್ನ ಎನ್ನುವುದನ್ನು ಬರಹಗಳಲ್ಲಿ ಮತ್ತು ಭಾಷಣಗಳಲ್ಲಿ ಪ್ರಕಟಪಡಿಸಿದ್ದರು. ಕ್ಷುದ್ರ ಶಕ್ತಿಗಳು ಗೌರಿ ಲಂಕೇಶರನ್ನೂ ಬಲಿ ತೆಗೆದುಕೊಂಡವು. ಲಿಂಗಾಯತ ಧರ್ಮ ಸ್ವತಂತ್ರವಾಗುವುದಕ್ಕೆ ಎರಡು ಶಕ್ತಿಗಳು ಸವಾಲಾಗಿದ್ದವು. ಒಂದು ಮನುವಾದಿ ಬ್ರಾಹ್ಮಣ ಶಕ್ತಿಗಳು. ಲಿಂಗಾಯತ ಧರ್ಮ ಹಿಂದೂ ಧರ್ಮದ ಒಂದು ಭಾಗವೆಂದು ವೈದಿಕ ಶಕ್ತಿಗಳು ಹಟ ಹಿಡಿದವು. ಇದೇ ಸಂದರ್ಭದಲ್ಲಿ ವೀರಶೈವರು ಇನ್ನೊಂದು ಪ್ರಸ್ತಾವ ಇಟ್ಟರು. ವೀರಶೈವ ಮತ್ತು ಲಿಂಗಾಯತ ಧರ್ಮ ಒಂದೇ. ಆದುದರಿಂದ ‘ವೀರಶೈವ ಲಿಂಗಾಯತ ಧರ್ಮ’ ಸ್ವತಂತ್ರವಾಗಬೇಕು ಎನ್ನುವುದು ಇವರ ಆಗ್ರಹ. ವೀರಶೈವರು ಬೇಕಾದರೆ ಪ್ರತ್ಯೇಕ ಧರ್ಮವನ್ನು ಸ್ವತಂತ್ರವಾಗಿ ಬೇಡಿ ಪಡೆಯಲಿ.

ಲಿಂಗಾಯತರಿಗೂ ವೀರಶೈವರಿಗೂ ಸಂಬಂಧವಿಲ್ಲ ಎನ್ನುವುದು ಲಿಂಗಾಯತ ಸ್ವಾಮೀಜಿಗಳ ವಾದ. ಈ ವಾದದಲ್ಲಿ ಅರ್ಥವೂ ಇತ್ತು. ವೀರಶೈವ ಧರ್ಮದ ಆಚರಣೆ, ನಂಬಿಕೆಗಳಿಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಅದು ವೈದಿಕೆ ನಂಬಿಕೆಗಳ ಒಂದು ಶಾಖೆಯಾಗಿದೆ. ಆದರೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರಧರ್ಮದ ಎಲ್ಲಾ ಲಕ್ಷಣಗಳೂ ಇವೆ. ಇದೀಗ ಕೊನೆಗೂ ಲಿಂಗಾಯತ ಧರ್ಮದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಶಿಫಾರಸು ಮಾಡಿದೆ. ಆದರೆ ಈ ಶಿಫಾರಸನ್ನು ವೈದಿಕ ಧರ್ಮದ ಹಿಡಿತದಲ್ಲಿರುವ ಕೇಂದ್ರ ಸರಕಾರ ಹೇಗೆ ಸ್ವೀಕರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಲಿಂಗಾಯತರು ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸುತ್ತಿದ್ದಾರೆ ಎಂಬ ಆರೋಪವಿದೆ. ಬಸವಣ್ಣನ ತತ್ವ ಸಿದ್ಧಾಂತಗಳಿಗೆ ಬದ್ಧರಾಗುವುದೇ ಲಿಂಗಾಯತ ಸ್ವತಂತ್ರ ಧರ್ಮವಾಗುವುದಕ್ಕಿರುವ ದಾರಿಯಾಗಿದೆ.

ಒಂದು ವೇಳೆ ಕೇಂದ್ರ ಸರಕಾರ ಮಾನ್ಯತೆ ಕೊಡದೇ ಇದ್ದರೂ, ಲಿಂಗಾಯತರು ಬಸವಣ್ಣನ ತತ್ವಕ್ಕೆ ಬದ್ಧರಾಗಿ ಬದುಕು ಕಟ್ಟಿಕೊಳ್ಳತೊಡಗಿದರೆ ವೀರಶೈವರಾಗಲಿ, ವೈದಿಕರಾಗಲಿ ಅಸಹಾಯರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಲಿಂಗಾಯತರಲ್ಲೂ ಜಾತೀಯತೆ, ಮೇಲು-ಕೀಳು ನುಸುಳಿ ಬಿಟ್ಟಿದೆ. ಇವುಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಲಿಂಗಾಯತ ಸ್ವಾಮೀಜಿಗಳು ಇಳಿಯಬೇಕು. ಸರಕಾರ ಮಾನ್ಯತೆ ಕೊಟ್ಟಾಕ್ಷಣ ಲಿಂಗಾಯತ ಸ್ವತಂತ್ರ ಧರ್ಮವಾಗಿ ಬಿಡುವುದಿಲ್ಲ. ಅದರಿಂದ ರಾಜಕೀಯ ಲಾಭವಷ್ಟೇ ಆಗಬಹುದು. ಆಂತರಿಕವಾಗಿ ಅದು ವೈದಿಕ ಧರ್ಮವಾಗಿಯೇ ಮುಂದುವರಿಯಬಹುದು. ಬಸವಣ್ಣ ಹೇಳಿದಂತೆ ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿಗೂ ಲಿಂಗಾಯತ ಸ್ವಾಮೀಜಿಗಳು ಆದ್ಯತೆ ನೀಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X