ರಾಹುಲ್ ಗಾಂಧಿ ಭಾಷಣದಿಂದ ಸ್ಫೂರ್ತಿ: ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ
ಹೊಸದಿಲ್ಲಿ,ಮಾ.20: ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣದಿಂದ ಪ್ರಭಾವಿತಗೊಂಡಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ ನಾಯ್ಕೆ ಅವರು ಮಂಗಳವಾರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಯುವ ಪೀಳಿಗೆಗೆ ನಾಯಕತ್ವ ವಹಿಸಲು ಅವಕಾಶ ನೀಡುವಂತೆ ರಾಹುಲ್ ಪಕ್ಷದಲ್ಲಿನ ಹಿರಿಯರಿಗೆ ಕರೆ ನೀಡಿದ್ದರು.
ರಾಹುಲ್ ಭಾಷಣದಿಂದ ಸ್ಫೂರ್ತಿಗೊಂಡು ಯುವಪೀಳಿಗೆಗೆ ಅವಕಾಶ ಕಲ್ಪಿಸಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಎ.12ರಂದು 72ನೇ ವರ್ಷಕ್ಕೆಕಾಲಿರಿಸಲಿರುವ ನಾಯ್ಕೆ ತಿಳಿಸಿದರು. ಪಕ್ಷದ ಹಿರಿಯಸದಸ್ಯರು ಯುವಪೀಳಿಗೆಗೆ ದಾರಿ ಮಾಡಿಕೊಡಬೇಕಾಗಬಹುದು ಎಂದು ರಾಹುಲ್ ಪೂರ್ಣಾಧಿವೇಶನದಲ್ಲಿ ಸುಳಿವು ನೀಡಿದ್ದರು.
ನಾಯ್ಕೆ ಅವರು 2017, ಜು.7ರಂದು ಗೋವಾ ಪ್ರದೇಶಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
Next Story