ಜಗದೀಶ್ ಶೆಟ್ಟರ್ ಸಹೋದರನಿಗೆ ಬೆದರಿಕೆ ಸಂದೇಶ : ದೂರು

ಹುಬ್ಬಳ್ಳಿ,ಮಾ.21: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಗೆ ಅಪರಿಚಿತನೋರ್ವ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗುವಂತೆ ಮೊಬೈಲ್ ಸಂದೇಶವನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “25 ವರ್ಷದಿಂದ ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಇಂತಹ ಬೆದರಿಕೆ ಬರುತ್ತಿವೆ. ಸಹೋದರ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹುನ್ನಾರದ ಹಿನ್ನೆಲೆ ಬೆದರಿಕೆ ಹಾಕಲಾಗಿದೆ. ಇದು ಸ್ಥಳೀಯ ಪುಡಾರಿಗಳು ಕಳುಹಿಸಿದ ಸಂದೇಶವಾಗಿದೆ” ಎಂದರು.
ಈ ಬಗ್ಗೆ ಅವರು ಹು-ಧಾ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
Next Story





