ಪೆರಿಯಾರ್ ಪ್ರತಿಮೆ ದ್ವಂಸ: ಸಿಆರ್ ಪಿಎಫ್ ಯೋಧನ ಬಂಧನ

ಪುದುಕೋಟೈ, ಮಾ.21: ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸಿದ ಸಿಆರ್ ಪಿಎಫ್ ಸೈನಿಕನೊಬ್ಬನನ್ನು ಬಂಧಿಸಲಾಗಿದೆ. ಈ ಕೃತ್ಯ ಎಸಗುವಾಗ ತಾನು ಪಾನಮತ್ತನಾಗಿದ್ದೆ ಎಂದು ಬಂಧಿತ ಸೆಂಥಿಲ್ ಕುಮಾತ್ ತಿಳಿಸಿದ್ದಾನೆ.
ಪುದುಕೋಟೈಯಲ್ಲಿರುವ ಪೆರಿಯಾರ್ ಪ್ರತಿಮೆಯನ್ನು ನಿನ್ನ ಧ್ವಂಸಗೊಳಿಸಲಾಗಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೂಡಲೇ ದುರಸ್ತಿ ಕಾರ್ಯ ನಡೆಸಿ ಪ್ರತಿಮೆಯನ್ನು ಸರಿ ಪಡಿಸಲಾಗಿತ್ತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Next Story





