ಮಂಗಳೂರು: ಮೃತ ವ್ಯಕ್ತಿಯ ವಾರಸುದಾರರ ಗಮನಕ್ಕೆ
ಮಂಗಳೂರು, ಮಾ. 21: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿ ಅಮಲು ಪದಾರ್ಥ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಾ.18ರಂದು ಪತ್ತೆಯಾಗಿದ್ದ ಸುಮಾರು 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ಸರಕಾರಿ ಆ್ಯಂಬುಲೆನ್ಸ್‌ನ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾ. 20ರಂದು ಈ ವ್ಯಕ್ತಿ ಮೃತಪಟ್ಟಿದ್ದಾರೆ.
ಈ ವ್ಯಕ್ತಿ ಯಾರು, ಎಲ್ಲಿಯವರು? ಎಂಬುದು ಪತ್ತೆಯಾಗಿಲ್ಲ. ಇವರ ವಾರಸುದಾರರು ಇದ್ದಲ್ಲಿ ದೂ.ಸಂ: 0824-2220521ನ್ನು ಸಂಪರ್ಕಿಸಲು ಉರ್ವ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.
Next Story





