ಕಳೆದ ಮೂರು ವರ್ಷಗಳಲ್ಲಿ ಬ್ಯಾಂಕ್, ದೂರಸಂಪರ್ಕ ಇಲಾಖೆಗಳ ವಿರುದ್ಧ ಗರಿಷ್ಠ ದೂರುಗಳು: ಕೇಂದ್ರ

ಹೊಸದಿಲ್ಲಿ, ಮಾ.21: ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಇಲಾಖೆಯ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಸರಕಾರವು ಬುಧವಾರ ಲೋಕಸಭೆಯಲ್ಲಿ ತಿಳಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಆರ್ಥಿಕ ಸೇವಾ ಇಲಾಖೆ (ಬ್ಯಾಂಕಿಂಗ್ ವಿಭಾಗ) ಯು 1,06,299 ಮತ್ತು ದೂರ ಸಂಪರ್ಕ ಇಲಾಖೆಯು 1,21,075 ದೂರುಗಳನ್ನು ಸ್ವೀಕರಿಸಿವೆ ಎಂದು ತಿಳಿಸಿದ್ದಾರೆ. ಬ್ಯಾಂಕಿಂಗ್ ವಿಭಾಗದಲ್ಲಿ 2016 ಮತ್ತು 2015ರಲ್ಲಿ ಕ್ರಮವಾಗಿ 88,850 ಮತ್ತು 53,776 ದೂರುಗಳು ದಾಖಲಾಗಿವೆ. ದೂರಸಂಪರ್ಕ ಇಲಾಖೆಯ ವಿರುದ್ಧ ಇದೇ ಅವಧಿಯಲ್ಲಿ ಕ್ರಮವಾಗಿ 67,551 ಮತ್ತು 63,929 ದೂರುಗಳು ದಾಖಲಾಗಿವೆ ಎಂದು ವೈಯಕ್ತಿಕ, ಸಾರ್ವಜನಿಕ ದೂರು ಮತ್ತು ಪಿಂಚಣಿಗಳ ರಾಜ್ಯ ಸಚಿವರು ತಿಳಿಸಿದ್ದಾರೆ. ಈ ದೂರುಗಳನ್ನು ಕೇಂದ್ರೀಕೃತ ಸಾರ್ವಜನಿಕ ದೂರುಗಳ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಪಿಜಿಆರ್‌ಎಎಂಎಸ್) ಮೂಲಕ ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





