ಮ್ಯಾನ್ಮಾರ್ ಅಧ್ಯಕ್ಷ ರಾಜೀನಾಮೆ

ಯಾಂಗನ್ (ಮ್ಯಾನ್ಮಾರ್), ಮಾ. 21: ರಖೈನ್‌ನ ರೊಹಿಂಗ್ಯಾ ಮುಸ್ಲಿಮ್ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿರುವಂತೆಯೇ, ಮ್ಯಾನ್ಮಾರ್ ಅಧ್ಯಕ್ಷ ಹಟಿನ್ ಕ್ಯಾವ್ ಬುಧವಾರ ದಿಢೀರನೆ ರಾಜೀನಾಮೆ ನೀಡಿದ್ದಾರೆ.
ದೇಶದ ಅನಭಿಷಿಕ್ತ ನಾಯಕಿ ಆಂಗ್ ಸಾನ್ ಸೂ ಕಿಯ ಶಾಲಾ ಸ್ನೇಹಿತರೂ ಆಗಿರುವ ಹಟಿನ್ ಕ್ಯಾವ್, ಸೂ ಕಿಯ ಪ್ರತಿನಿಧಿಯಾಗಿ ಅಧ್ಯಕ್ಷ ಹುದ್ದೆಯಲ್ಲಿದ್ದರು. ಮ್ಯಾನ್ಮಾರ್‌ನ ಸೇನಾ ವಿರಚಿತ ಸಂವಿಧಾನದ ಪ್ರಕಾರ, ಸೂ ಕಿ ಅಧ್ಯಕ್ಷ ಪದವಿಯನ್ನು ವಹಿಸಿಕೊಳ್ಳುವುದು ಅಸಾಧ್ಯವಾಗಿತ್ತು.
ಹಾಗಾಗಿ, ಹಟಿನ್ ಮೂಲಕ ಸೂ ಕಿ ದೇಶವನ್ನು ಆಳುತ್ತಿದ್ದರು. ಅದಕ್ಕೆ ಪೂರಕವೆಂಬಂತೆ ಸರಕಾರಿ ಸಲಹೆಗಾರ್ತಿ ಎಂಬ ವಿಶೇಷ ಹುದ್ದೆಯೊಂದನ್ನು ಅವರು ವಹಿಸಿಕೊಂಡಿದ್ದರು.
72 ವರ್ಷದ ಹಟಿನ್ ಕ್ಯಾವ್‌ರ ಆರೋಗ್ಯದ ಬಗ್ಗೆ ತಿಂಗಳುಗಳಿಂದ ಊಹಾಪೋಹಗಳಿದ್ದವು. ಅವರು ಇತ್ತೀಚೆಗೆ ತೂಕ ಕಳೆದುಕೊಂಡಿದ್ದಾರೆ ಹಾಗೂ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದಾರೆ.
Next Story





