ಹುತಾತ್ಮ ಸೈನಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸಲಿರುವ ಸರಕಾರ
ಹೊಸದಿಲ್ಲಿ, ಮಾ. 22: ಹುತಾತ್ಮ ಸೈನಿಕರ ಮಕ್ಕಳ ಶಿಕ್ಷಣ ವೆಚ್ಚವನ್ನು ಇನ್ನು ಮುಂದೆ ಸರಕಾರವೇ ಸಂಪೂರ್ಣವಾಗಿ ಭರಿಸುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಹಿಂದೆ ಹುತಾತ್ಮ ಸೈನಿಕರ ಮಕ್ಕಳಿಗೆ ಶಿಕ್ಷಣ ವೆಚ್ಚವಾಗಿ ಸರಕಾರ ಮಾಸಿಕ ಕೇವಲ ರೂ 10,000 ಒದಗಿಸುತ್ತಿತ್ತು. ಶೈಕ್ಷಣಿಕ ವಿನಾಯಿತಿ ಎಂಬ ಮಿತಿಯನ್ನು ಈಗ ತೆಗೆದು ಹಾಕಲಾಗಿದೆ.
ಹುತಾತ್ಮರಾದ ಸೇನಾಧಿಕಾರಿಗಳ ಮಕ್ಕಳಿಗೆ, ಆಫೀಸರ್ ಶ್ರೇಣಿಯ ಕೆಳಗಿನ ಹುದ್ದೆಯ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದ ಸಮಯ ನಾಪತ್ತೆಯಾಗಿದ್ದರೆ ಅಥವಾ ಅಂಗ ಊನ ಹೊಂದಿದರೆ ಯಾ ಮೃತಪಟ್ಟರೆ ಅಂತಹವರ ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗುವುದು. ಸದ್ಯ 3400 ಮಕ್ಕಳು ಸರಕಾರದ ಕ್ರಮದಿಂದ ಲಾಭ ಗಳಿಸಲಿದ್ದಾರಲ್ಲದೆ ವಾರ್ಷಿಕ ಸರಕಾರ ಈ ನಿಟ್ಟಿನಲ್ಲಿ 5 ಕೋಟಿ ರೂ. ವೆಚ್ಚ ಮಾಡಲಿದೆ.
ಆದರೆ ಸರಕಾರಿ, ಸರಕಾರಿ ಅನುದಾನಿತ ಶಾಲೆಗಳು, ಸೈನಿಕ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಮತ್ತು ಸರಕಾರದಿಂದ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಹುತಾತ್ಮರ ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರಕುವುದು.
ಬಾಂಗ್ಲಾದೇಶ ವಿಮೋಚನೆಯ 1971 ಯುದ್ಧದ ನಂತರ ಹುತಾತ್ಮರ ಹಾಗೂ ಕರ್ತವ್ಯದಲ್ಲಿದ್ದಾಗ ಅಂಗ ಊನಗೊಂಡ ಸೇನಾ ಸಿಬ್ಬಂದಿಗಳ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವ ಯೋಜನೆ ಆರಂಭಗೊಂಡಿತ್ತು. ನಂತರ ಮೇಘದೂತ್ ಹಾಗೂ ಪವನ್ ಕಾರ್ಯಾಚರಣೆಯ ಸಂದರ್ಭ ಹುತಾತ್ಮರಾದ ಸೇನಾಧಿಕಾರಿಗಳ ಹಾಗೂ ಸೈನಿಕರ ಮಕ್ಕಳಿಗೂ ಈ ಸೌಲಭ್ಯ ವಿಸ್ತರಿಸಲಾಗಿತ್ತು.
#ImportantAnnouncement :
— Raksha Mantri (@DefenceMinIndia) March 22, 2018
Cap on Educational Concession removed for the children of Armed Forces Officers / PBORs, missing/ disabled/ killed in action.@nsitharaman @SpokespersonMoD pic.twitter.com/jkxdEyXjD4