ನಿಮ್ಮದು ರಾತ್ರಿಪಾಳಿಯ ಕೆಲಸವೇ?: ಹಾಗಿದ್ದರೆ ನಿಮ್ಮ ಆರೋಗ್ಯ ಕಾಪಾಡಲು ಸರಳಸೂತ್ರಗಳಿವು…
ಅನಾದಿಕಾಲದಿಂದಲೂ ಮಾನವ ಶರೀರದ ಜೈವಿಕ ಗಡಿಯಾರವು ಪ್ರಕೃತಿಯೊಂದಿಗೆ ಮೇಳೈಸಿಕೊಂಡಿದೆ. ಹೀಗಾಗಿ ನಮ್ಮ ಪೂರ್ವಜರಂತೆ ನಾವೂ ಸೂರ್ಯೋದಯದೊಡನೆ ನಿದ್ರೆಯಿಂದ ಎದ್ದೇಳುತ್ತೇವೆ ಮತ್ತು ದಿನವಿಡೀ ನಮ್ಮ ಚಟುವಟಿಕೆಗಳನ್ನು ನಡೆಸುತ್ತೇವೆ. ಸೂರ್ಯಾಸ್ತ ವಾಗುವುದರೊಂದಿಗೆ ನಾವೂ ನಮ್ಮ ದಿನವನ್ನು ಅಂತ್ಯಗೊಳಿಸುತ್ತೇವೆ ಮತ್ತು ರಾತ್ರಿ ಮುಂದಿನ ದಿನಕ್ಕಾಗಿ ನಮ್ಮ ಶರೀರವನ್ನು ಸಜ್ಜುಗೊಳಿಸಲು ಒಳ್ಳೆಯ ನಿದ್ರೆಗೆ ಜಾರುತ್ತೇವೆ.
ಆದರೆ ಎಲ್ಲರ ವಿಷಯದಲ್ಲಿಯೂ ಹೀಗೆಯೇ ಎಂದು ಹೇಳಲಾಗು ವುದಿಲ್ಲ. ಕಾರ್ಖಾನೆಗಳಲ್ಲಿ, ಇತರ ಕ್ಷೇತ್ರಗಳಲ್ಲಿ ಉದ್ಯೋಗಿಗಳು ರಾತ್ರಿ ಯಲ್ಲಿಯೂ ಕೆಲಸ ಮಾಡುತ್ತಾರೆ. ಜಾಗತೀಕರಣ ಮತ್ತು ತಂತ್ರಜ್ಞಾನ ಸುಧಾರಣೆಯಿಂದಾಗಿ ಭಾರತದಲ್ಲಿಂದು ರಾತ್ರಿಪಾಳಿಯ ಉದ್ಯೋಗ ಗಳು ಹೆಚ್ಚುತ್ತಿವೆ. ವಿವಿಧ ದೇಶಗಳಲ್ಲಿ ವಿಭಿನ್ನ ಕಾಲಮಾನ ಗಳಿರುವುದರಿಂದ ಬಿಪಿಒದಂತಹ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳು ಪಾಶ್ಚಾತ್ಯ ದೇಶಗಳಲ್ಲಿಯ ಗ್ರಾಹಕರೊಂದಿಗೆ ವ್ಯವಹರಿಸಲು ರಾತ್ರಿಪಾಳಿಗಳಲ್ಲಿ ದುಡಿಯುವುದು ಅನಿವಾರ್ಯ ವಾಗಿದೆ.
ರಾತ್ರಿಪಾಳಿಯ ದುಡಿತ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ವನ್ನು ಬೀರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆಯಾಗಿದೆ. ಸ್ವಲ್ಪಮಟ್ಟಿಗೆ ಇದು ನಿಜವಾಗಿದ್ದರೂ ಕೆಲವು ಎಚ್ಚರಿಕೆಗಳನ್ನು ವಹಿಸುವುದರಿಂದ ರಾತ್ರಿಪಾಳಿಯ ಉದ್ಯೋಗದಲ್ಲಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದಾಗಿದೆ. ಅದಕ್ಕಾಗಿ ಕೆಲವು ಸೂತ್ರಗಳು ಇಲ್ಲಿವೆ.....
► ಮೊದಲೇ ಸಿದ್ಧರಾಗಿ
ರಾತ್ರಿಪಾಳಿಯಲ್ಲಿ ದುಡಿಯುವುದು ಹೆಚ್ಚಿನವರು ಭಾವಿಸಿರುವಂತೆ ಅಷ್ಟೇನೂ ಕಠಿಣವಲ್ಲ. ನಿಮ್ಮ ಉದ್ಯೋಗದಲ್ಲಿ ರಾತ್ರಿಪಾಳಿ ಅನಿವಾರ್ಯ ಎನ್ನುವುದು ನಿಮಗೆ ಗೊತ್ತಿದ್ದರೆ ನೀವು ಕೆಲಸವನ್ನಾ ರಂಭಿಸುವ ಒಂದೆರಡು ದಿನಗಳ ಮೊದಲೇ ಅದಕ್ಕೆ ಸಿದ್ಧರಾಗಿರಿ. ಮನೆಯಲ್ಲಿ ರಾತ್ರಿ ಎಚ್ಚರವಿದ್ದು ಏನಾದರೂ ಚಟುವಟಿಕೆಗಳನ್ನು ಮಾಡುವುದರಿಂದ ನಿಮ್ಮ ನಿದ್ರೆಯ ಅಭ್ಯಾಸವೂ ಪರಿವರ್ತನೆಗೆ ಸಜ್ಜಾಗುತ್ತದೆ ಮತ್ತು ನೀವು ನಿಮ್ಮ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಮಹಾನಗರದ ನಿವಾಸಿಯಾಗಿದ್ದರೆ ಸಂಚಾರ ದಟ್ಟಣೆಯಿಂದಾಗಿ ಕಚೇರಿಗೆ ತೆರಳಲು ಬಹುಬೇಗನೆ ಮನೆಯಿಂದ ಹೊರಬೀಳುವುದು ಅನಿವಾರ್ಯವಾಗಿರುತ್ತದೆ. ರಾತ್ರಿಪಾಳಿಯ ಕೆಲಸವು ಸಂಚಾರ ದಟ್ಟಣೆಯಲ್ಲಿ ವ್ಯರ್ಥವಾಗುವ ಸಮಯವನ್ನು ಉಳಿಸುತ್ತದೆ.
► ಚೆನ್ನಾಗಿ ಊಟ ಮಾಡಿ
ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಹೆಚ್ಚಿನವರು ಮಧ್ಯಾಹ್ನದ ಅಥವಾ ರಾತ್ರಿಯ ಊಟವನ್ನು ತಪ್ಪಿಸಿಕೊಳ್ಳುವ ಚಾಳಿಯನ್ನು ಹೊಂದಿರುತ್ತಾರೆ. ಹಾಗೆಂದೂ ಮಾಡಬೇಡಿ. ನೀವು ಯಾವುದೇ ಪಾಳಿಯಲ್ಲಿ ಕೆಲಸ ಮಾಡುತ್ತಿರಿ, ನಿಮ್ಮ ಶರೀರಕ್ಕೆ ಅಷ್ಟೇ ಪೌಷ್ಟಿಕಾಂಶಗಳು ಅಗತ್ಯ ಇವೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಶರೀರಕ್ಕೆ ಅಗತ್ಯ ಆಹಾರ ದೊರೆಯುವಂತೆ ನೋಡಿಕೊಳ್ಳಿ.
► ಚೆನ್ನಾಗಿ ನಿದ್ರೆ ಮಾಡಿ
ವಯಸ್ಕ ವ್ಯಕ್ತಿಗಳಿಗೆ ಪ್ರತಿದಿನ ಎಂಟು ಗಂಟೆಗಳ ನಿದ್ರೆ ಅಗತ್ಯವಾಗಿದೆ. ನಿಮ್ಮ ಎಂಟು ಗಂಟೆಯ ನಿದ್ರೆಯನ್ನು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಮಾಡಿದರೂ ವೈದ್ಯಕೀಯ ದೃಷ್ಟಿಯಿಂದ ಯಾವದೇ ವ್ಯತ್ಯಾಸವಾಗು ವುದಿಲ್ಲ. ನೀವು ನಿಮ್ಮ ನಿದ್ರೆಯ ಅವಧಿಯನ್ನು ವಿಭಜಿಸಲೂಬಹುದು, ಆದರೆ ಒಟ್ಟಾರೆ ನಿದ್ರೆಯ ಅವಧಿ ಎಂಟು ಗಂಟೆಗಳದ್ದಾಗಿರಬೇಕು ಅಷ್ಟೇ. ಈಗೇ ನೀವು ಏನನ್ನೇ ಮಾಡುತ್ತಿದ್ದರೂ ನಿಮ್ಮ ಶರೀರಕ್ಕೆ ಪ್ರತಿದಿನ ಎಂಟು ಗಂಟೆಗಳ ನಿದ್ರೆ ದೊರೆಯುವಂತೆ ನೋಡಿಕೊಳ್ಳಿ.
► ದೈಹಿಕ ವ್ಯಾಯಾಮಗಳಿಗೆ ಸಮಯವಿರಲಿ
ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರು ತಮಗೆ ವ್ಯಾಯಾಮ ಮಾಡಲು ಸಾಕಷ್ಟು ಸಮಯ ದೊರೆಯುವುದಿಲ್ಲ ಎಂದು ದೂರಿಕೊಳ್ಳುತ್ತಿರುತ್ತಾರೆ. ಆದರೆ ಇದೊಂದು ನೆಪ ಮಾತ್ರವಾಗಿದೆ. ನೀವು ಹಗಲು ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೋಲಿಸಿದರೆ ಅಷ್ಟೇ ಗಂಟೆಗಳ ಕಾಲ ಕೆಲಸ ಮಾಡುತ್ತೀರಿ, ಅಷ್ಟೇ ಗಂಟೆಗಳ ಕಾಲ ನಿದ್ರೆ ಮಾಡುತ್ತೀರಿ ಮತ್ತು ಸಂಚಾರದ ಸಮಯದಲ್ಲಿ ಉಳಿತಾಯದ ಲಾಭವೂ ನಿಮಗಿದೆ ಎನ್ನುವುದನ್ನು ಪರಿಗಣಿಸಿದಾಗ ಇದೊಂದು ಸಮಸ್ಯೇ ಆಗಲೇಬಾರದು. ಸೂಕ್ತ ವ್ಯಾಯಾಮವು ಒಳ್ಳೆಯ ಆರೋಗ್ಯದ ಮಂತ್ರವಾಗಿದೆ ಎನ್ನುವುದನ್ನು ಮರೆಯಬೇಡಿ. ರಾತ್ರಿಪಾಳಿಯಲ್ಲಿ ದುಡಿಯುವವರ ಪಾಲಿಗಂತೂ ಇದು ಶೇ.100ರಷ್ಟು ನಿಜವಾಗಿದೆ.
► ಕೆಫೀನ್ ಸೇವನೆಯ ಮೇಲೆ ನಿಯಂತ್ರಣವಿರಲಿ
ದುಡಿಯುವ ಸಮಯದಲ್ಲಿ ರಾತ್ರಿಯಿಡೀ ಕಾಫಿಯನ್ನು ಗುಟುಕರಿಸುತ್ತಿರಬೇಕು ಎಂಬ ತುಡಿತ ಸಾಮಾನ್ಯ. ಆದರೆ ಆರೋಗ್ಯಕರ ಪದ್ಧತಿಯಾಗಿ ಈ ತುಡಿತ ನಿಯಂತ್ರಣದಲ್ಲಿರಲಿ. ನೀವು ರಾತ್ರಿವೇಳೆ ಸೇವಿಸುವ ಕಪ್ಗಟ್ಟಲೆ ಕಾಫಿ ನಿಮ್ಮ ಹಗಲಿನ ನಿದ್ರೆಯನ್ನು ಹಾಳು ಮಾಡಬಹುದು ಮತ್ತು ಇದು ಆರೋಗ್ಯದ ಮೇಲೆ ದುಷ್ಪರಿಣಾಮ ವನ್ನು ಬೀರುತ್ತದೆ.
► ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿಯಿರಲಿ
ವಾರಾಂತ್ಯದಲ್ಲಿ ಮತ್ತು ಸಮಯ ಸಿಕ್ಕಾಗಲೆಲ್ಲ ನಿಮ್ಮ ಬಂಧುಗಳು ಮತ್ತು ಸ್ನೇಹಿತರನ್ನು ಭೇಟಿಯಾಗುವುದನ್ನು ರೂಢಿಸಿಕೊಳ್ಳಿ. ಅವರನ್ನು ಮುಖತಃ ಭೇಟಿಯಾಗಲು ಸಾಧ್ಯವಾಗದಿದ್ದರೆ ಎಸ್ಎಂಎಸ್ ಅಥವಾ ನೇರಕರೆಯ ಮೂಲಕ ಆಗಾಗ್ಗೆ ಸಂಪರ್ಕಿಸುತ್ತಿರಿ. ಇದರಿಂದ ನೀವು ಸಾಮಾಜಿಕವಾಗಿ ಜನರ ಸಂಪರ್ಕದಲ್ಲಿರುತ್ತೀರಿ ಮತ್ತು ನೀವು ಮಾನಸಿಕವಾಗಿ ಸ್ವಸ್ಥರಾಗಿರುತ್ತೀರಿ.
► ದಪ್ಪ ಪರದೆಗಳನ್ನು ಬಳಸಿ
ಹಗಲಿನಲ್ಲಿ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ ಎಂದು ರಾತ್ರಿಪಾಳಿಗಳಲ್ಲಿ ದುಡಿಯುತ್ತಿರುವ ಹೆಚ್ಚಿನವರು ದೂರಿಕೊಳ್ಳುತ್ತಿ ರುತ್ತಾರೆ. ಸೂರ್ಯನ ಬೆಳಕು ಇದಕ್ಕೆ ಸಂಭಾವ್ಯ ಕಾರಣಗಳ ಲ್ಲೊಂದಾಗಿರಬಹುದು. ಈ ಸಮಸ್ಯೆಯಿಂದ ಪಾರಾಗಲು ನಿಮ್ಮ ಮಲಗುವ ಕೋಣೆಯ ಕಿಟಕಿಗಳಿಗೆ ದಪ್ಪನೆಯ ಪರದೆಗಳು ಅಥವಾ ಬ್ಲೆಂಡ್ಗಳನ್ನು ಬಳಸಿ ಹೆಚ್ಚು ಕತ್ತಲಿರುವಂತೆ ನೋಡಿಕೊಳ್ಳಿ. ನೀವು ಐ ಮಾಸ್ಕ್ಗಳನ್ನೂ ಬಳಸಬಹುದಾಗಿದೆ.
► ದೀರ್ಘ ಪ್ರಯಾಣವನ್ನು ನಿವಾರಿಸಿ
ನಿಮ್ಮ ಮನೆ ಮತ್ತು ಕೆಲಸದ ಸ್ಥಳದ ನಡುವಿನ ದೂರವನ್ನು ಸಾಧ್ಯವಾ ದಷ್ಟು ಕಡಿಮೆಗೊಳಿಸಲು ಪ್ರಯತ್ನಿಸಿ. ಇದರಿದಾಗಿ ನೀವು ಪ್ರಯಾಣ ಕ್ಕಾಗಿ ಕಳೆಯುವ ಸಮಯ ಕಡಿಮೆಯಾಗಿ ವಿಶ್ರಾಂತಿಗೆ ಹೆಚ್ಚಿನ ಕಾಲಾವಕಾಶ ಲಭಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.
► ಆಗಾಗ್ಗೆ ಪಾಳಿಗಳ ಬದಲಾವಣೆಯನ್ನು ತಪ್ಪಿಸಿ
ಆಗಾಗ್ಗೆ ನಿಮ್ಮ ಕೆಲಸದ ಪಾಳಿಗಳನ್ನು ಬದಲಿಸಿಕೊಳ್ಳುವುದು ಒಳ್ಳೆಯದಲ್ಲ. ಆದರೆ ನಿಮ್ಮ ಕೆಲಸದಲ್ಲಿ ಬದಲಾವಣೆ ಅಗತ್ಯ ವೆಂದಾದರೆ ಅದನ್ನು ಸಂಜೆಯಿಂದ ರಾತ್ರಿಯವರೆಗಿನ ಪಾಳಿಗೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಶರೀರದ ಜೈವಿಕ ಗಡಿಯಾರ ಈ ಬದಲಾವಣೆಗೆ ತನ್ನಿಂತಾನೇ ಹೊಂದಿಕೊಳ್ಳುತ್ತದೆ ಮತ್ತು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳುಂಟಾಗುವುದಿಲ್ಲ.
► ನಿಮಗಾಗಿ ಸಮಯವಿರಲಿ
ನೀವು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದರೆ ನೀವು ಇಷ್ಟಪಟ್ಟಿದ್ದನ್ನು ನಿಲ್ಲಿಸಬೇಕೆಂದು ಅರ್ಥವಲ್ಲ. ನಿಮ್ಮ ಹವ್ಯಾಸಗಳನ್ನು ಉಳಿಸಿಕೊಳ್ಳಿ ಮತ್ತು ಅವುಗಳಿಗಾಗಿ ನಿಮ್ಮ ದಿನಚರಿಯಲ್ಲಿ ಸಮಯ ದೊರಕುವಂತೆ ನೋಡಿಕೊಳ್ಳಿ. ಇದು ಆರೋಗ್ಯಪೂರ್ಣ ಜೀವನಕ್ಕೆ ಅಗತ್ಯವಾದ ಮನಃಶಾಂತಿಯನ್ನು ನಿಮಗೆ ನೀಡುತ್ತದೆ.