ಜಿಗ್ನೇಶ್ ಶಾ ವಿರುದ್ಧ ಸಿಬಿಐನಿಂದ ಹೊಸ ಪ್ರಕರಣ ದಾಖಲು
ಹೊಸದಿಲ್ಲಿ,ಮಾ.23: ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಿಗದಿತ ಮಾನದಂಡವನ್ನು ಪೂರೈಸಿರದಿದ್ದರೂ ಅದಕ್ಕೆ ರಾಷ್ಟ್ರವ್ಯಾಪಿ ವಿನಿಮಯ ಕೇಂದ್ರದ ಸ್ಥಾನಮಾನವನ್ನು ಪಡೆದುಕೊಳ್ಳುವಲ್ಲಿ ಶಾಮೀಲಾಗಿದ್ದಕ್ಕಾಗಿ ಎಂಸಿಎಕ್ಸ್ನ ಮಾಜಿ ಎಮ್ಡಿ ಜಿಗ್ನೇಶ ಶಾ, ಫಾರ್ವರ್ಡ್ ಮಾರ್ಕೆಟ್ ಕಮಿಷನ್ನ ನಾಲ್ವರು ಮಾಜಿ ಅಧ್ಯಕ್ಷರು ಮತ್ತು ಇತರರ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿದೆ.
ಮುಂಬೈ, ಗ್ವಾಲಿಯರ್ ಮತ್ತು ಶಿಮ್ಲಾಗಳಲ್ಲಿಯ ಒಂಭತ್ತು ಸ್ಥಳಗಳಲ್ಲಿಯ ಶಾ ಮತ್ತು ಇತರರ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.
ಇತರ ಆರು ಜನರ ವಿರುದ್ಧವೂ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಶಾ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ.
Next Story