ಭಾಂಬ್ರಿ ಎರಡನೇ ಸುತ್ತಿಗೆ ಲಗ್ಗೆ
ಮಿಯಾಮಿ ಮಾಸ್ಟರ್ಸ್
ಮಿಯಾಮಿ, ಮಾ.23: ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಭಾರತದ ಟೆನಿಸ್ ತಾರೆ ಯೂಕಿ ಭಾಂಬ್ರಿ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದಿಲ್ಲಿ ಆಟಗಾರ ಭಾಂಬ್ರಿ ಬೋಸ್ನಿಯಾದ ಮಿರ್ಝಾ ಬಾಸಿಕ್ರನ್ನು 7-5, 6-3 ನೇರ ಸೆಟ್ಗಳಿಂದ ಮಣಿಸಿದರು. 25ರ ಹರೆಯದ ಭಾಂಬ್ರಿ ಹಾಗೂ ವಿಶ್ವದ ನಂ.75ನೇ ಆಟಗಾರ ಬಾಸಿಕ್ ಎರಡನೇ ಬಾರಿ ಮುಖಾಮುಖಿಯಾದರು. 2016ರಲ್ಲಿ ಬಾಸಿಕ್ ಅವರು ಯೂಕಿಯನ್ನು ಸೋಲಿಸಿದ್ದರು. ಭಾರತದ ಡೇವಿಸ್ ಕಪ್ ಆಟಗಾರ ಭಾಂಬ್ರಿ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.11ನೇ ಅಮೆರಿಕ ಆಟಗಾರ ಜಾಕ್ ಸಾಕ್ರನ್ನು ಎದುರಿಸಲಿದ್ದಾರೆ.
Next Story