ಹಜ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು 37 ಮಹಿಳೆಯರಿಂದ ಅರ್ಜಿ
ಕೊಂಡೊಟ್ಟಿ, ಮಾ. 24: ಹಜ್ ಸಂದರ್ಭದಲ್ಲಿ ಹಜ್ ಯಾತ್ರಿಕರ ಸೇವೆ ಸಲ್ಲಿಸಲು ಸ್ವಯಂ ಸೇವಕಿಯರಾಗಿ (ಖಾದಿಮುಲ್ ಹಜ್ಜಾಜ್) ಸೇವೆ ಸಲ್ಲಿಸಲು 37 ಮಹಿಳೆಯರು ಕೇರಳದಿಂದ ಅರ್ಜಿ ಸಲ್ಲಿಸಿದ್ದಾರೆ. ಇದೇ ಮೊದಲ ಸಲ ಹಜ್ ಯಾತ್ರಿಕರ ಸೇವೆಗೆ ಮಹಿಳೆಯರು ಇರಲಿದ್ದಾರೆ. ಶೇ. 2ರಷ್ಟು ಮಹಿಳಾ ಸ್ವಯಂಸೇವಕಿಯರಿಗೆ ಅವಕಾಶ ಇದೆ.
ಸ್ವಯಂಸೇವಕರ ಅರ್ಜಿ ಸಲ್ಲಿಸುವ ಅವಧಿ ಶನಿವಾರಕ್ಕೆ ಮುಗಿಯುತ್ತಿದ್ದಂತೆ ಕೇರಳ ಹಜ್ ಸಮಿತಿಯಲ್ಲಿ ಕಚೇರಿಗೆ 209 ಅರ್ಜಿಗಳು ಬಂದಿವೆ. ಹಜ್ ಉಮ್ರಾ ಮತ್ತು ಇತರ ನಿಗದಿಗೊಳಿಸಿದ ಅರ್ಹತೆ ಇರುವವರು ಶನಿವಾರ ಸಂಜೆ ಐದುಗಂಟೆಯ ಮೊದಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 200 ಹಜ್ ಯಾತ್ರಿಕರಿಗೆ ತಲಾ ಓರ್ವ ಸ್ವಯಂ ಸೇವಕರಿರುತ್ತಾರೆ.
Next Story