ಮಾ.25:ಹೂಡೆಯಲ್ಲಿ ಸಾಮಾಜಿಕ ಕೆಡುಕಿನ ವಿರುದ್ಧ ಜಾಗೃತಿ
ಉಡುಪಿ, ಮಾ.24: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಮಾರ್ಗ ದರ್ಶನದಲ್ಲಿ ಇಸ್ಲಾಮಿಕ್ ದಾವಾ ಸೆಂಟರ್ ಹೂಡೆ ವತಿಯಿಂದ ಮದ್ಯ ವ್ಯಸನ, ಧೂಮಪಾನ ವಿರುದ್ಧ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಮಾ.25ರಂದು ಹಮ್ಮಿಕೊಳ್ಳಲಾಗಿದೆ.
ಹೂಡೆಯ ಮಸ್ಜೀದ್ ಎ ಮುಆವಿಯಾ ಬಿನ್ ಅಬೀ ಸುಫಿಯಾನ್(ರ)ನಲ್ಲಿ ಮಗ್ರೀಬ್ ನಮಾಝ್ನಿಂದ ಈಶಾ ನಮಾಝ್ವರೆಗೆ ನಡೆಯುವ ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಶೇಕ್ ಸನಾವುಲ್ಲಾಹ್ ಉಮ್ರಿ ನಝೀರಿ ಹಾಗೂ ಡಾ.ಮುಹಮ್ಮದ್ ರಫೀಕ್ ಹೂಡೆ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story