Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ವಾರದ ವ್ಯಕ್ತಿ
  4. ರಾಮೇಶ್ವರದಿಂದ ರಾಜ್ಯಸಭೆಗೆ ಎಲ್‌ಎಚ್

ರಾಮೇಶ್ವರದಿಂದ ರಾಜ್ಯಸಭೆಗೆ ಎಲ್‌ಎಚ್

ವಾರದ ವ್ಯಕ್ತಿ

-ಬಸು ಮೇಗಲಕೇರಿ-ಬಸು ಮೇಗಲಕೇರಿ25 March 2018 12:04 AM IST
share
ರಾಮೇಶ್ವರದಿಂದ ರಾಜ್ಯಸಭೆಗೆ ಎಲ್‌ಎಚ್

ಡಾ.ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಅಭಿನಂದಿಸೋಣ. ಹಾಗೆಯೇ ಹನುಮಂತಯ್ಯನವರನ್ನು ಗುರುತಿಸಿ, ಗೆಲ್ಲಿಸಿ, ರಾಜ್ಯಸಭೆಗೆ ಕಳುಹಿಸಿದ ಕಾಂಗ್ರೆಸ್ ಪಕ್ಷಕ್ಕೂ ಅಭಿನಂದನೆ ಸಲ್ಲಿಸೋಣ. ರಾಜ್ಯಸಭೆ, ದೇಶದ ಆಗುಹೋಗುಗಳನ್ನು ಆರೋಗ್ಯಕರ ವಾಗಿ ಚರ್ಚಿಸುವ, ದೇಶದ ಸಮಗ್ರತೆಯನ್ನು, ಒಕ್ಕೂಟ ವ್ಯವಸ್ಥೆಯನ್ನು, ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ, ಸಮಕಾಲೀನ ಸಂದರ್ಭಕ್ಕೆ ತಕ್ಕ ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರತಿಷ್ಠಿತ ಸದನ ನೀತಿ ನಿರೂಪಣೆಗಳು ಜಾರಿಯಾಗುವ ಜಾಗ. ಹಾಗಾಗಿ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡೆ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆ ಹಾಗೂ ನಾಮಕರಣ ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಎಲ್ಲ ಪಕ್ಷಗಳಲ್ಲೂ ಪ್ರಬಲ ಮತ್ತು ಪ್ರಭಾವಿ ಜಾತಿ-ಜನಗಳಿಗೇ ಮಣೆ-ಮನ್ನಣೆ ನೀಡುವ ಪರಿಪಾಠ ಬೆಳೆದುಬಂದಿದೆ. ಕೆಲವು ಸಲ ಸಾಧಕರು, ಚಿಂತಕರು, ಮೇಧಾವಿಗಳು, ಬುದ್ಧಿಜೀವಿಗಳು ಆಯ್ಕೆಯಾದರೆ; ಹಲವು ಸಲ ಹಣವಂತರು, ಸಿನೆಮಾ ತಾರೆಯರು, ಉದ್ಯಮಿಗಳು, ಅನರ್ಹರು ರಾಜ್ಯಸಭೆಗೆ ಹೋದ ಉದಾಹರಣೆಗಳಿವೆ. ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿಯವರನ್ನು ಸೋಲಿಸಿ, ಉದ್ಯಮಿ ರಾಜೀವ್ ಚಂದ್ರಶೇಖರ್ ಗೆಲ್ಲಿಸಿದ ಹಾಗೂ ಹಿರಿಯ ಸಾಹಿತಿ, ಚಿಂತಕ ಕೆ.ಮರುಳಸಿದ್ದಪ್ಪನವರನ್ನು ಸೋಲಿಸಿ ಸಿನೆಮಾ ತಾರೆ ಹೇಮಾಮಾಲಿನಿಯವರನ್ನು ಗೆಲ್ಲಿಸಿ ರಾಜ್ಯಸಭೆಗೆ ಕಳುಹಿಸಿದ ನಾಡಿನ ರಾಜಕಾರಣಿಗಳ ‘ಕಾಳಜಿ ಕಳಕಳಿ’ಯೂ ನಮ್ಮ ಕಣ್ಣಮುಂದೆಯೇ ಇದೆ. ಹಾಗೆಯೇ ಗೆದ್ದವರು ಸದಸ್ಯ ಸ್ಥಾನವನ್ನು ವ್ಯಾಪಾರ ವಿಸ್ತರಣೆಗೆ ಬಳಸಿಕೊಂಡಿದ್ದೂ ಗೊತ್ತಿದೆ.
 


ಇವುಗಳ ನಡುವೆಯೇ, ಅಪರೂಪಕ್ಕೆಂಬಂತೆ, ಈ ಸಲ ಕಾಂಗ್ರೆಸ್ ರಾಜ್ಯಸಭೆಯ ಪ್ರತಿಷ್ಠಿತ ಸ್ಥಾನಕ್ಕೆ ತಳಸಮುದಾಯಕ್ಕೆ ಸೇರಿದ ಸಾಮಾನ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಆ ಪ್ರಕ್ರಿಯೆ ಪ್ರಜಾಪ್ರಭುತ್ವದ ಸೊಗಸನ್ನು ಸಾರುವಂತಿದೆ. ಹಾಗೆ ನೋಡಿದರೆ, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಈ ಬಾರಿ ಹಲವು ಘಟಾನುಘಟಿಗಳ ನಡುವೆ ಭಾರೀ ಪೈಪೋಟಿಯಿತ್ತು. ಅವರಿಗೆ ಅನುಭವ, ಹಿರಿತನ, ಜಾತಿ, ಪ್ರಾದೇಶಿಕತೆ ಎಲ್ಲವೂ ಜೊತೆಯಾಗಿತ್ತು. ಪ್ರಭಾವ, ದಿಲ್ಲಿ ಮಟ್ಟದ ಆಶೀರ್ವಾದವೂ ಇತ್ತು. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಆಯ್ಕೆಯೇ ಬೇರೆ ಇತ್ತು. ಊಹೆಗೂ ನಿಲುಕದ ಹೆಸರುಗಳು- ಹನುಮಂತಯ್ಯ, ನಸೀರ್ ಹುಸೈನ್, ಚಂದ್ರಶೇಖರ್- ಕಾಂಗ್ರೆಸ್ ಆಯ್ಕೆಯಾಗಿತ್ತು. ಆಶ್ಚರ್ಯವೆಂದರೆ, ಹನುಮಂತಯ್ಯನವರ ಹೆಸರು ಮೊದಲನೆಯದಾಗಿತ್ತು. ಇದು ಸಹಜವಾಗಿಯೇ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಹನುಮಂತಯ್ಯನವರ ಜೊತೆಗೆ ನಸೀರ್ ಹುಸೈನ್ ಎಂಬ ಮುಸ್ಲಿಂ ಅಭ್ಯರ್ಥಿಯ ಹೆಸರೂ ಜೊತೆಗೂಡಿದ್ದು ರಾಜಕೀಯ ರಂಗದಲ್ಲಿ ಚರ್ಚೆಯ ವಿಷಯವಾಗಿತ್ತು. ಈ ಇಬ್ಬರ ಆಯ್ಕೆಯನ್ನು, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು, ಅದನ್ನು ಪಾಲಿಸಿಕೊಂಡು ಬಂದವರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಆದರೆ ರಾಜಕೀಯ ವಲಯದಲ್ಲಿ ದಲಿತರು ಮತ್ತು ಮುಸ್ಲಿಮರ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ತಂತ್ರಕ್ಕೆ ಕೈಹಾಕಿದೆ ಎನ್ನುವ ಟೀಕೆಗೆ ಗುರಿಯಾಯಿತು. ಟೀಕೆ, ಲೆಕ್ಕಾಚಾರ, ಚುನಾವಣೆ- ಏನೇ ಇರಲಿ, ಕಾಂಗ್ರೆಸ್‌ನ ಈ ನಡೆ ಪಕ್ಷಕ್ಕೆ ಮತ್ತು ನಾಡಿಗೆ ಹೆಮ್ಮೆ ತರುವಂಥಾದ್ದು. ಕವಿ, ಲೇಖಕ, ಬ್ಯಾಂಕ್ ಉದ್ಯೊಗಿ, ಉಪನ್ಯಾಸಕ, ಶಿಕ್ಷಣ ಸಂಸ್ಥೆ ಸ್ಥಾಪಕ, ವಿಧಾನ ಪರಿಷತ್ ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕೆಪಿಸಿಸಿ ಉಪಾಧ್ಯಕ್ಷ- ಹೀಗೆ ಹಲವು ಕ್ಷೇತ್ರಗಳ ಅಪಾರ ಅನುಭವವನ್ನು ಗಳಿಸಿರುವ ಹನುಮಂತಯ್ಯನವರು, ರಾಜ್ಯಸಭೆ ಎಂಬ ಚಿಂತಕರ ಚಾವಡಿಯಲ್ಲಿರಬೇಕಾದ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹನುಮಂತಯ್ಯ ಜನಿಸಿದ್ದು ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಎಂಬ ಪುಟ್ಟ ಹಳ್ಳಿಯ ಮಾದಿಗರ ಹಟ್ಟಿಯಲ್ಲಿ. ಸುಮಾರು ಮೂವತ್ತು ಮನೆಗಳಿರುವ ಈ ಅಸ್ಪಶ್ಯರ ಕೇರಿಯ ಕರೆ ಹನುಮ(ಹನುಮಂತಯ್ಯನವರ ತಾತ)ನ ಕೆಲಸ ಗೌಡರ ಮನೆಯಲ್ಲಿ ಜೀತಗಾರಿಕೆ. ಜೊತೆಗೆ ಸತ್ತ ಹಸು, ಎಮ್ಮೆ ಎತ್ತಿ ಊರಾಚೆ ಹಾಕುವ, ಊರಲ್ಲಿ ಯಾರಾದರೂ ಸತ್ತರೆ ಸುದ್ದಿ ಮುಟ್ಟಿಸಿ ಬರುವ ತಳವಾರಿಕೆ. ಸತ್ತ ಎಮ್ಮೆಯ ಮಾಂಸವೇ ಅವರ ಪೌಷ್ಟಿಕ ಆಹಾರ ಹಾಗೂ ಚರ್ಮ ಮಾರಿ ಬರುವ ಚಿಲ್ಲರೆ ಕಾಸೇ- ಸಾರಾಯಿ ಕುಡಿದು ಕಷ್ಟ ಮರೆತು ಮಲಗುವ ಮಾರ್ಗ. ‘‘ಹೊಟ್ಟೆ ತುಂಬಬೇಕಾದರೆ ಒಂದು ಸಾವಿನಿಂದ ಇನ್ನೊಂದು ಸಾವಿಗೆ ಕಾಯಬೇಕು’’ ಎನ್ನುವ ಕಾಲವನ್ನು, ಕಷ್ಟವನ್ನು ಹನುಮಂತಯ್ಯನವರು ಕಂಡಿದ್ದಾರೆ, ದಾಟಿ ಬಂದಿದ್ದಾರೆ.

ಹನುಮಂತಯ್ಯನವರ ತಂದೆ ಲೆಂಕಪ್ಪಮತ್ತು ತಾಯಿ ಚೆನ್ನಮ್ಮ, ಕಾಲಕ್ಕೆ ತಕ್ಕಂತೆ ತಳವಾರಿಕೆ ಬಿಟ್ಟು ಕೃಷಿ ಕಾರ್ಮಿಕರಾದರೂ, ಹಸಿವು, ಅವಮಾನಗಳನ್ನು ಬೆನ್ನಿಗಿಟ್ಟುಕೊಂಡು ಬಂದವರು. ಸೋಲು ಮತ್ತು ಶರಣಾಗತಿ ಯನ್ನು ಬದುಕಿನ ಭಾಗವೆಂದು ಭಾವಿಸಿ ಬದುಕಿದವರು. ಆದರೆ ಇವರ ಮಗನಾದ ಹನುಮಂತಯ್ಯನವರಿಗೆ ಈ ಎಲ್ಲ ಬೆನ್ನಿಗಿದ್ದರೂ, ತಾತ ಮತ್ತು ತಂದೆಯನ್ನು ತಟ್ಟಿ, ತಿದ್ದಿ, ಜಗತ್ತನ್ನು ತೋರದ ಅಕ್ಷರಲೋಕ, ಹನುಮಂತಯ್ಯನವರ ಕಾಲಕ್ಕೆ ಅವರ ಕೈ ಹಿಡಿದು ನಡೆಸಿದೆ. ತಮ್ಮ ಹಿರಿಯರು ಅನುಭವಿಸಿದ ಕಷ್ಟಕೋಟಲೆಗಳಿಂದ ಪಾರು ಮಾಡಿದೆ. ಹೊಸ ಜಗತ್ತಿಗೆ ಪರಿಚಯಿಸಿದೆ. ಆರ್ಥಿಕವಾಗಿ, ಸಾಮಾಜಿಕ ವಾಗಿ ಮೇಲೆತ್ತಿದೆ. ಹಾಗಂತ ಹನುಮಂತಯ್ಯನವರ ಬಾಲ್ಯ, ಓದು, ಯೌವನದ ದಿನಗಳು ಸುಗಮ ಸುಭಿಕ್ಷವಾಗೇನೂ ಇರಲಿಲ್ಲ. ಪೋಷಕರು ಕೂಲಿ ಮಾಡಿದರೆ ಅವತ್ತಿನ ಊಟ, ಇಲ್ಲದಿದ್ದರೆ ಉಪವಾಸ. ಬರಿಗಾಲಲ್ಲಿ, ಹಸಿದ ಹೊಟ್ಟೆಯಲ್ಲಿ ಸ್ಕೂಲಿಗೆ ಹೋಗುತ್ತಿದ್ದುದರ ಗುಟ್ಟು, ಸಿಗುತ್ತಿದ್ದ ಉಪ್ಪಿಟ್ಟಿನಲ್ಲಿತ್ತು. ರಜಾ ದಿನಗಳಲ್ಲಿ ದನ ಎಮ್ಮೆ ಕಾಯುವುದು, ಹೊಂಗೆಬೀಜ ಮಾರುವುದು ಪುಡಿಗಾಸಿನ ಆದಾಯದ ಮೂಲವಾಗಿತ್ತು. ವರ್ಷಕ್ಕೆ ಎರಡು ದಿನ- ಉಗಾದಿ, ಮಾರ್ನಮಿ ಹಬ್ಬದ ದಿನ- ಮಾತ್ರ ಮನೆಯಲ್ಲಿ ಅನ್ನ ಮಾಡುವ ಪರಿಪಾಠವಿತ್ತು. ಬಾಲ್ಯದಲ್ಲಿಯೇ ನಾಟಕಗಳಲ್ಲಿ ಅಭಿನಯಿಸುವ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿ ಬೆಳೆಸಿಕೊಂಡಿದ್ದ ಹನುಮಂತಯ್ಯನವರು, ಮುಂದೆ ಬೆಂಗಳೂರಿಗೆ ಬಿದ್ದು, ಕಾಲೇಜು ಸೇರಿ, ಹಾಸ್ಟೆಲ್ ವಾಸಿಯಾದಾಗ- ಹೊಸ ಲೋಕವೇ ತೆರೆದುಕೊಂಡಿತ್ತು. ಉತ್ತಮ ಉಪನ್ಯಾಸಕರ ಸಹಕಾರ, ಮಾನವಂತರ ಮಮಕಾರ, ಬಸವಲಿಂಗಪ್ಪನವರ ಭಾಷಣ, ಕಾನ್ಶೀರಾಂ ಸಂಗ ಬುದ್ಧಿಗೆ ಸಾಣೆ ಹಿಡಿದಿತ್ತು. ವಿಜ್ಞಾನ ಪದವಿ ಮುಗಿಸುವಷ್ಟರಲ್ಲಿ ಬ್ಯಾಂಕ್ ಕೆಲಸ ದೊರಕಿ ಅತಂತ್ರ ಬದುಕಿಗೊಂದು ನೆಲೆ ಸಿಕ್ಕಿತ್ತು. ಕಾಲೇಜು ದಿನಗಳಲ್ಲಿರುವಾಗಲೇ ಎಸ್‌ಎಫ್‌ಐ ಹೋರಾಟ, ಬಂಡಾಯ ಸಾಹಿತಿಗಳ ಸಹವಾಸ, ದಲಿತ ಸಂಘರ್ಷ ಸಮಿತಿಯ ಒಡನಾಟವೂ ಕೂಡಿ ಬಂದಿತ್ತು. ಕಾನೂನು ಪದವಿಯಲ್ಲಿ ರೈತನಾಯಕ ಪ್ರೊ.ನಂಜುಂಡ ಸ್ವಾಮಿಯವರ ಬೋಧನೆಯೂ ಸಿಕ್ಕಿತ್ತು. ಆಳವಾದ ಓದು ಅಧ್ಯಯನ ಗಾಂಧಿವಾದಿಯನ್ನಾಗಿಸಿತ್ತು. ಕನ್ನಡ ಎಂ.ಎ. ಮಾಡುವ ಕಾಲಕ್ಕೆ ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್, ಕೆ.ವಿ.ನಾರಾಯಣ, ಅಗ್ರಹಾರ ಕೃಷ್ಣಮೂರ್ತಿ, ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣರ ಮೂಲಕ ಕನ್ನಡ ಸಾಹಿತ್ಯಲೋಕದ ಪರಿಚಯವಾಗಿತ್ತು. ಒಡಲೊಳಗಿನ ಕುದಿ ಕಾವ್ಯಕ್ಕೆ ಪ್ರೇರೇಪಿಸಿತ್ತು. ಗುರು ಕಿರಂ ಅವರ ಪ್ರೋತ್ಸಾಹದ ಫಲವಾಗಿ ‘ಕಪ್ಪು ಕಣ್ಣಿನ ಹುಡುಗಿ’ ಕವನ ಸಂಕಲನ ಪ್ರಕಟಿಸುವ ಧೈರ್ಯ ತಂದುಕೊಟ್ಟಿತು. ರಂಗಕರ್ಮಿ ಸಿಜಿಕೆಯವರ ಒತ್ತಡ ಮತ್ತು ಒತ್ತಾಸೆಯಿಂದಾಗಿ ನಾಟಕಕಾರರಾಗಿದ್ದೂ ಆಯಿತು. ಕಪ್ಪುಕಣ್ಣಿನ ಹುಡುಗಿ, ಅವ್ವ ಅವ್ವನ ಕವಿತೆ, ಹರಿಗೋಲು, ಬೂದಿ ಮುಚ್ಚಿದ ಕೆಂಡ, ಒಂಟಿ ಕಾಲಿನ ನಡಿಗೆ, ಅಂಬೇಡ್ಕರ್ ಕವಿತೆಗಳು, ದಲಿತ ಕತೆಗಳು, ದಲಿತ ಲೋಕದ ಒಳಗೆ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡುವಂತಾಗಿತ್ತು. ಬ್ಯಾಂಕ್ ಉದ್ಯೋಗಿಯಾಗಿರುವಾಗಲೇ ಕವಿ ಎಂದು ಗುರುತಿಸಿಕೊಂಡ ಹನುಮಂತಯ್ಯನವರು, ಅಪ್ಪ-ಅಮ್ಮರನ್ನು ಹಳ್ಳಿ ಬಿಡಿಸಿ ಬೆಂಗಳೂರಿಗೆ ಕರೆತಂದರು. ಮನೆ ಮಾಡುವಾಗ ಜಾತಿ ತಾರತಮ್ಯ ಅನುಭವಿಸಿದರು. ಬ್ರಾಹ್ಮಣ ಜಾತಿಯ ವಾಣಿಯವರನ್ನು ವಿವಾಹವಾದರು. ಬ್ಯಾಂಕ್ ಕೆಲಸ ಬಿಟ್ಟು ಉಪನ್ಯಾಸಕರಾಗಬೇಕೆಂಬ ಆಸೆಗೆ ಬಿದ್ದು ಕಷ್ಟಕೋಟಲೆಗೆ ಈಡಾದರು. ತಮ್ಮದೇ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ದಲಿತ ಚಳವಳಿ, ಮಾರ್ಕ್ಸ್‌ವಾದ ಮತ್ತು ಲೋಹಿಯಾವಾದಗಳನ್ನು ಅರಿತು ಅರಗಿಸಿಕೊಂಡಿದ್ದ, ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ, ಸೈದ್ಧಾಂತಿಕ-ವೈಚಾರಿಕ ನಿಲುವುಗಳಿಗೆ ಬದ್ಧರಾಗಿದ್ದ ಹನುಮಂತಯ್ಯನವರು, ತಮ್ಮ ಕ್ರಾಂತಿಕಾರಿಯಲ್ಲದ ವ್ಯಕ್ತಿತ್ವಕ್ಕೆ ಒಗ್ಗುವ ಕಾಂಗ್ರೆಸ್ ಪಕ್ಷ ಸೇರಿ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಕೆಪಿಸಿಸಿ ಉಪಾಧ್ಯಕ್ಷರವರೆಗೆ ಹಂತ ಹಂತವಾಗಿ ಬೆಳೆದು ಬದುಕೆಂಬ ದಡ ಸೇರಿದರು. ಹನುಮಂತಯ್ಯನವರ ವಿದ್ವತ್ತಿಗೆ, ಪಕ್ಷ ನಿಷ್ಠೆಗೆ ಕಾಂಗ್ರೆಸ್ ಮನ್ನಣೆ ನೀಡಿ ವಿಧಾನ ಪರಿಷತ್ತಿನ ಸದಸ್ಯರನ್ನಾಗಿಸಿತು. ಮುಂದುವರಿದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿಸಿತು. ಈಗ ಪ್ರತಿಷ್ಠಿತ ರಾಜ್ಯಸಭಾ ಸದಸ್ಯ ಸ್ಥಾನ ನೀಡಿ ಗೌರವಿಸಿದೆ. ಅರವತ್ತರ ಗಡಿ ದಾಟಿರುವ ಹನುಮಂತಯ್ಯನವರು, ತಮ್ಮ ಊರಿನ ಹಟ್ಟಿಯ ದಿಕ್ಕೆಟ್ಟ ಬದುಕನ್ನು ಖುದ್ದು ಕಂಡವರು; ದಲಿತ ಸಮುದಾಯದ ಸಂಕಟ, ಶೋಷಣೆಯನ್ನು ಬಲ್ಲವರು; ದಲಿತ ಸಂಘಟನೆಗಳು, ನಾಯಕರ ಹೋರಾಟ-ಹಾರಾಟಗಳನ್ನು ಹತ್ತಿರದಿಂದ ನೋಡಿದವರು; ಅಕ್ಷರಲೋಕದ ಅನ್ಯಾಯಗಳನ್ನು ಅರ್ಥಮಾಡಿಕೊಂಡವರು; ಸಂವಿಧಾನದ ಆಶೋತ್ತರಗಳನ್ನು ಅರಿತವರು- ಇವೆಲ್ಲವನ್ನೂ ಬಳಸಿಕೊಂಡು ರಾಜಕೀಯ ಅಧಿಕಾರವನ್ನು ಪಡೆದವರು. ಅಧಿಕಾರದ ಕುರ್ಚಿಯಲ್ಲಿ ಕೂತ ಹನುಮಂತಯ್ಯನವರು ‘ಮಾಡಿದ್ದೇನು’ ಎನ್ನುವುದು ನಾಡಿನ ಜನರ ನೆನಪಿನಲ್ಲಿದೆ.
ಈಗ ಮತ್ತೊಂದು ಮಹತ್ವದ ಸ್ಥಾನಕ್ಕೆ ಏರುತ್ತಿರುವ ಈ ಗಳಿಗೆಯಲ್ಲಿ, ದೇಶದಲ್ಲಿ ಬಿಜೆಪಿಯ ಧರ್ಮ ರಾಜಕಾರಣ ಸದ್ದು ಮಾಡುತ್ತಿದೆ. ಮೋದಿಯ ಆರ್ಭಟ ಜೋರಾಗಿದೆ. ಮೋದಿಯ ಬೆನ್ನಿಗಿರುವ ಸಂಘಪರಿವಾರ ಹಿಂದುತ್ವದ ತ್ರಿಶೂಲ ಹಿಂದುಗಳನ್ನೇ ತಿವಿಯುತ್ತಿದೆ. ಗೋಹತ್ಯೆ ರಾಜಕಾರಣ ತಾರಕಕ್ಕೇರಿ ದಲಿತರ-ಮುಸ್ಲಿಮರ ಹತ್ಯೆಯಾಗುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಹನುಮಂತಯ್ಯನವರು, ನಾಡಿನ ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೆ, ತಮ್ಮ ಬುದ್ಧಿ ಮತ್ತು ಅಧಿಕಾರವನ್ನು ನಿಕಷಕ್ಕೆ ಒಡ್ಡಬೇಕಿದೆ. ತಮ್ಮ ಇತಿ-ಮಿತಿಗಳ ನಡುವೆಯೇ ದಲಿತರ ದೃಢ ದನಿಯೊಂದು ರಾಜ್ಯಸಭೆಯಲ್ಲಿ ಮೊಳಗುವಂತೆ ಮಾಡಬೇಕಾಗಿದೆ. ಜೊತೆಗೆ ನಾಡಿನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ, ನೆಲ, ಜಲ, ಭಾಷೆಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹನುಮಂತಯ್ಯನವರ ಮೇಲಿದೆ.

share
-ಬಸು ಮೇಗಲಕೇರಿ
-ಬಸು ಮೇಗಲಕೇರಿ
Next Story
X