ಕಾರು-ಲಾರಿ-ಬೈಕ್ ನಡುವೆ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು
![ಕಾರು-ಲಾರಿ-ಬೈಕ್ ನಡುವೆ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು ಕಾರು-ಲಾರಿ-ಬೈಕ್ ನಡುವೆ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು](https://www.varthabharati.in/sites/default/files/images/articles/2018/03/25/davan.jpg)
ದಾವಣಗೆರೆ, ಮಾ. 25: ಎರಡು ಕಾರು, ಲಾರಿ, ಬೈಕ್ ನಡುವೆ ರವಿವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಾವಣಗೆರೆ ತಾಲ್ಲೂಕಿನ ಕೊಗ್ಗನೂರು ಗ್ರಾಮದ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story