ಮಾದಕ ದ್ರವ್ಯ ಅಪರಾಧಗಳು ಮತ್ತು ಕ್ರಿಮಿನಲ್ಗಳ ಬಗ್ಗೆ ದತ್ತಾಂಶ ಕೋಶ: ರಾಜನಾಥ್ ಸಿಂಗ್
ಹೊಸದಿಲ್ಲಿ,ಮಾ.25: ಎಲ್ಲ ಮಾದಕ ದ್ರವ್ಯ ಸಂಬಂಧಿತ ಅಪರಾಧಗಳು ಮತ್ತು ಕ್ರಿಮಿನಲ್ಗಳ ಕುರಿತ ರಾಷ್ಟ್ರೀಯ ದತ್ತಾಂಶ ಕೋಶವೊಂದನ್ನು ಭಾರತವು ಶೀಘ್ರದಲ್ಲಿಯೇ ಹೊಂದಲಿದೆ ಮತ್ತು ಮಾದಕ ದ್ರವ್ಯ ಪಿಡುಗನ್ನು ಹತ್ತಿಕ್ಕುವ ಹೊಣೆ ಹೊತ್ತಿರುವ ರಾಜ್ಯ ಪೊಲೀಸ್ ಇಲಾಖೆಗಳಿಂದ ಹಿಡಿದು ಜಿಲ್ಲಾ ಮಟ್ಟದಲ್ಲಿಯ ಏಜೆನ್ಸಿಗಳು ಸೇರಿದಂತೆ ಎಲ್ಲ ಜಾರಿ ಸಂಸ್ಥೆಗಳು ಈ ದತ್ತಾಂಶ ಕೋಶದಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದರು.
ಶನಿವಾರ ಇಲ್ಲಿ ‘ಮಾದಕ ದ್ರವ್ಯ ಕಾನೂನು ಜಾರಿ’ ಕುರಿತ ಎರಡು ದಿನಗಳ ಸಮಾವೇಶದ ಸಮಾರೋಪದಲ್ಲಿ ಮಾತನಾ ಡಿದ ಅವರು, ದತ್ತಾಂಶ ಕೋಶವನ್ನು ಅಭಿವೃದ್ಧಿಗೊಳಿಸಲು ತನ್ನ ಸಚಿವಾಲಯವು ಮಾದಕ ದ್ರವ್ಯ ನಿಯಂತ್ರಣ ಘಟಕ(ಎನ್ಸಿಬಿ)ಕ್ಕೆ ಅಗತ್ಯ ಹಣಕಾಸನ್ನು ಮಂಜೂರು ಮಾಡಿದೆ ಎಂದರು.
ಸರಕಾರವು ಕಳೆದ ವರ್ಷ ದೇಶದಲ್ಲಿ ಮಾದಕ ದ್ರವ್ಯ ಪಿಡುಗು ಹೆಚ್ಚುತ್ತಿರುವುದನ್ನು ಗಮನಿಸಿ ಏಳು ಹೊಸ ಪದಾರ್ಥಗಳನ್ನು ಮಾದಕ ದ್ರವ್ಯಗಳ ಪಟ್ಟಿಯಲ್ಲಿ ಸೇರಿಸಿದೆ ಎಂದು ಅವರು ತಿಳಿಸಿದರು.
Next Story