Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ26 March 2018 12:12 AM IST
share
ಓ ಮೆಣಸೇ..

ನಾವು ಮೋದಿ ಮುಕ್ತ ಭಾರತ ನೋಡುವ ಕನಸು ಕಾಣುತ್ತಿದ್ದೇವೆ - ರಾಜ್ ಠಾಕ್ರೆ, ಎಂ.ಎನ್.ಎಸ್.ನಾಯಕ್

ಬಿಜೆಪಿಯೊಳಗೂ ಇದೇ ಕನಸು ಕಾಣುತ್ತಿರುವ ಹಲವರಿದ್ದಾರೆ. 

---------------------

ಮಹಾತ್ಮಾಗಾಂಧಿ ಕಟ್ಟಾ ಹಿಂದೂ ಆಗಿದ್ದರು - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಅದಕ್ಕಾಗಿಯೇ ತಾನೆ ಅವರನ್ನು ಕೊಂದಿರುವುದು.

---------------------

ವೀರಶೈವರು, ಲಿಂಗಾಯತರು ಹಿಂದೂ ಧರ್ಮದಿಂದ ಹೊರ ಹೋಗುವುದರಲ್ಲಿ ಅರ್ಥವಿಲ್ಲ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಬ್ರಾಹ್ಮಣ ಧರ್ಮ ಹೊರಗೆ ಹೋಗುವುದಾದರೆ ನಾವು ಒಳಗುಳಿಯುತ್ತೇವೆ ಎನ್ನುವುದು ಅವರ ವಾದ.

---------------------

ಜೆಡಿಎಸ್‌ಗೆ ಅಧಿಕಾರ ನೀಡಿದರೆ ವಿಧಾನಸೌಧವನ್ನೇ ನಿಮ್ಮ ಮನೆಬಾಗಿಲಿಗೆ ತರುತ್ತೇನೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮ ಮನೆ ಬಾಗಿಲಿಗೆ?

 ---------------------

ಜಾತಿ ಜಗಳ ಹೆಚ್ಚಿಸುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ - ಡಿ.ವಿ.ಸದಾನಂದ ಗೌಡ,

ಕೇಂದ್ರ ಸಚಿವ ಯಡಿಯೂರಪ್ಪ-ಈಶ್ವರಪ್ಪರ ಜಗಳ ಯಾರು ಹುಟ್ಟಿಸಿ ಹಾಕಿದ್ದು?

---------------------

ಮಂಡ್ಯದಲ್ಲಿ ಕಾಂಗ್ರೆಸ್‌ಗೆ ನನ್ನಂತಹ ಲೀಡರ್ ಸಿಗ್ತಾರಾ? - ಅಂಬರೀಷ್, ಶಾಸಕ 

ಕಾಂಗ್ರೆಸ್‌ನ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ ನೀವು.

---------------------

ಬಿಜೆಪಿಯ ಷಡ್ಯಂತ್ರದಿಂದಾಗಿ ನಾನು 16ದಿನ ಜೈಲಿನಲ್ಲಿರಬೇಕಾಯಿತು - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಮುಖಂಡ

ಜೀವನಪೂರ್ತಿ ಜೈಲಲ್ಲಿರಬೇಕಾಗಿತ್ತು ನೀವು. ನಿಜಕ್ಕೂ ಬಿಜೆಪಿಯದು ಷಡ್ಯಂತರವೇ ಸರಿ.

---------------------

ಕಾಂಗ್ರೆಸ್‌ಗೆ ಹಿಂದಿನಿಂದ ಚೂರಿಹಾಕಿದವರು ಯಾರೂ ಯಶಸ್ಸು ಕಂಡಿಲ್ಲ - ಅಭಯಚಂದ್ರ ಜೈನ್, ಶಾಸಕ

ಮುಂದಿನಿಂದಲೇ ಚೂರಿ ಹಾಕಿ ಎಂದು ಸಲಹೆಯೆ?

--------------------

ತಂದೆ, ಚಿಕ್ಕಪ್ಪ ಸೇರಿ ನನ್ನ ಪೂರ್ವಜರು ಮೂಲತಃ ಕಾಂಗ್ರೆಸಿಗರು - ಅಶೋಕ್ ಖೇಣಿ, ಶಾಸಕ

ಮನುಷ್ಯರ ಪೂರ್ವಜರ ಬಗ್ಗೆ ಡಾರ್ವಿನ್ ಬೇರೆಯೇ ತರ್ಕವನ್ನು ಹೊಂದಿದ್ದಾನೆ.

---------------------

ನನ್ನ ಹಿಂದಿರುವುದು ದೇವರು ಮತ್ತು ಜನರೇ ಹೊರತು ಬಿಜೆಪಿ ಅಲ್ಲ - ರಜನಿಕಾಂತ್, ನಟ 

ನಿಮ್ಮ ಮುಂದೆ ಇರುವುದರ ಕುರಿತಂತೆ ಜನರಿಗೆ ಅನುಮಾನವಿದೆ.

---------------------

ಶಿರೂರು ಸ್ವಾಮೀಜಿ ಮಾತುಗಳು ಸಂಶಯಾಸ್ಪದ -ರಘುಪತಿ ಭಟ್, ಮಾಜಿ ಶಾಸಕ

ಏನಿದ್ದೂ ಪದ್ಮಪ್ರಿಯ ಸಾವಿನಷ್ಟು ಅಲ್ಲ.

---------------------

ನಮೋ ಎಂದರೆ ನಮಗೇ ಮೋಸ - ಪ್ರಮೋದ್ ಮಧ್ವರಾಜ್, ಸಚಿವ

ಅಗತ್ಯ ಬಿದ್ದರೆ ಕಾಂಗ್ರೆಸ್‌ಗೆ ಮೋಸ. 

---------------------

ರಾಜಕಾರಣಿಗಳಿಗೆ ಧಾರ್ಮಿಕ ವಿಚಾರಗಳನ್ನು ಬಗೆಹರಿಸುವ ಯೋಗ್ಯತೆ ಇನ್ನೂ ಬಂದಿಲ್ಲ - ಸಿ.ಟಿ.ರವಿ, ಶಾಸಕ 

ಧಾರ್ಮಿಕ ವಿಚಾರಗಳನ್ನು ರಾಜಕೀಯಗೊಳಿಸುವ ಯೋಗ್ಯತೆಯಷ್ಟೇ ಅವರದು.

---------------------

ದೇಶಕ್ಕಾಗಿ ಸಾಯುವುದಲ್ಲ, ದೇಶಕ್ಕಾಗಿ ಬದುಕಬೇಕು ಎಂದು ಆರೆಸ್ಸೆಸ್ ನಮಗೆ ಹೇಳಿಕೊಟ್ಟಿದೆ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಪ್ರಮುಖ್

ಇತರರನ್ನು ಸಾಯಿಸಿ ನೀವೊಬ್ಬರೇ ಬದುಕುವುದೇ?

---------------------

ಬಿಜೆಪಿಯಲ್ಲಿ ಜೈಲಿಗೆ ಹೋಗದೇ ಇದ್ದವರು ಯಾರಾದರೂ ಇದ್ದರೆ ಕಾಂಗ್ರೆಸ್‌ಗೆ ಬರಲಿ - ಶಾಮನೂರು ಶಿವಶಂಕರಪ್ಪ, ಶಾಸಕ 

ಮುಂದಿನ ಬಾರಿ ಬಿಜೆಪಿಯ ಶಾಸಕಾಂಗ ಸಭೆ ಜೈಲಿನಲ್ಲೇ ಹಮ್ಮಿಕೊಳ್ಳುತ್ತಾರಂತೆ.

---------------------

ಬಿಜೆಪಿ ಕೌರವರ ಪಕ್ಷ, ಕಾಂಗ್ರೆಸ್ ಪಾಂಡವರು - ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಸೀರೆ ಎಳೆಸಿಕೊಳ್ಳುವವರು ಯಾರು?

---------------------

ಬ್ರಾಹ್ಮಣರೂ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದರೆ ತಪ್ಪೇನಿಲ್ಲ - ಎಂ.ಬಿ.ಪಾಟೀಲ್, ಸಚಿವ

ದೇಶದ ಸರ್ವ ಸಾಮಾಜಿಕ ಸಮಸ್ಯೆಗಳಿಗೆ ಅದುವೇ ಪರಿಹಾರ.

---------------------

ನನ್ನ ರಾಜಕೀಯ ಏಳಿಗೆಗೆ ಸಂಘ ಪರಿವಾರದ ರೀತಿ ಯಡಿಯೂರಪ್ಪರೂ ಕಾರಣ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅದಕ್ಕಾಗಿ ಅವರಿಬ್ಬರೂ ಈಗ ಪರಿತಪಿಸುತ್ತಿದ್ದಾರೆ.

share
ಪಿ.ಎ.ರೈ
ಪಿ.ಎ.ರೈ
Next Story
X