Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಲೆನಾಡ ಕಾಫಿ ತೋಟಗಳಲ್ಲೀಗ ಕಾಫಿ ಹೂಗಳ...

ಮಲೆನಾಡ ಕಾಫಿ ತೋಟಗಳಲ್ಲೀಗ ಕಾಫಿ ಹೂಗಳ ಕಂಪು

►ತೋಟಗಳಿಗೆ ಜೀವಕಳೆ ನೀಡಿದ ರೇವತಿ ಮಳೆ ►ಬಂಪರ್ ಬೆಳೆ ನಿರೀಕ್ಷೆಯಲ್ಲಿ ಬೆಳೆಗಾರರು

ಕೆ.ಎಲ್.ಶಿವುಕೆ.ಎಲ್.ಶಿವು26 March 2018 12:22 AM IST
share
ಮಲೆನಾಡ ಕಾಫಿ ತೋಟಗಳಲ್ಲೀಗ ಕಾಫಿ ಹೂಗಳ ಕಂಪು

ಚಿಕ್ಕಮಗಳೂರು, ಮಾ.25: ಮಲೆನಾಡು ಎಂದರೆ ತಕ್ಷಣ ನೆನಪಾಗುವುದು ಕಾಫಿ ತೋಟಗಳು. ಅದರಲ್ಲೂ ಚಿಕ್ಕಮಗಳೂರಿಗೆ ಕಾಫಿನಾಡು ಎಂಬ ಅನ್ವರ್ಥನಾಮವೂ ಇದೆ. ಈ ಕಾಫಿನಾಡಿನ ಕಾಫಿ ತೋಟಗಳು ಇದೀಗ ಹೂಗಳ ಕಂಪು ಬೀರುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಲೆನಾಡಿನಲ್ಲಿ ಇತ್ತೀಚೆಗೆ ಸುರಿದ ರೇವತಿ ಮಳೆ ಕಾಫಿ ತೋಟಗಳಿಗೆ ಜೀವಕಳೆ ನೀಡಿದ್ದು, ಇದರಿಂದಾಗಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ಬೆಳೆಗಾರರ ಮುಖದಲ್ಲೂ ಮಂದಹಾಸ ಮೂಡಿದೆ.

ಇಲ್ಲಿನ ಕಣಿವೆ ಪ್ರದೇಶಗಳಲ್ಲಿರುವ ಅರೇಬಿಕಾ, ರೊಬಾಸ್ಟಾ ಕಾಫಿ ತೋಟಗಳು ಇದೀಗ ಕಾಫಿ ಹೂನಿಂದಾಗಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಪ್ರತೀ ವರ್ಷ ಮಾರ್ಚ್ ತಿಂಗಳಿನಲ್ಲಿ ರೇವತಿ ಮಳೆಯಾಗುವುದು ವಾಡಿಕೆ. ಕಾಫಿ ಬೆಳೆಗಾರರು ಈ ಮಳೆಗೆ ಹೂಮಳೆ ಎಂದು ಕರೆಯುತ್ತಾರೆ. ಸಕಾಲದಲ್ಲಿ ಹೂ ಮಳೆಯಾದಲ್ಲಿ ಕಾಫಿ ಗಿಡಗಳಲ್ಲಿ ಹೂ ಅರಳಿ ತೋಟಗಳ ಮೇಲೆ ಹಾಲಿನ ಎರಕ ಹೊಯ್ದಂತೆ ಕಾಣುವ ಹೂಗಳು ನೋಡುಗರ ಕಣ್ಣಿಗೆ ಹಬ್ಬ. ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ಅರೇಬಿಕಾ, ರೊಬಾಸ್ಟಾ ಕಾಫಿ ತೋಟಗಳು ಹೂ ನಗು ಬೀರುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಶ್ವೇತ ವರ್ಣದ ಹೂವಿನ ಹೊದಿಕೆ ಹೊದ್ದು ಮಲಗಿರುವಂತೆ ಭಾಸವಾಗುವ ಕಾಫಿ ತೋಟಗಳನ್ನು ನೋಡಲು ಪ್ರವಾಸಿಗರು ದಿಂಡಿಯಾಗಿ ಬರುತ್ತಿದ್ದಾರೆ. ಜಿಲ್ಲೆಗೆ ರಜಾ ದಿನಗಳಲ್ಲಿ ಪ್ರವಾಸಕ್ಕೆ ಬರುವ ದೂರದ ಪ್ರವಾಸಿಗರು ರಸ್ತೆ ಬದಿಗಳಲ್ಲಿರುವ ಕಾಫಿ ತೋಟಗಳ ಹೂ ಹಾಗೂ ಹೂವಿನ ಕಂಪಿಗೆ ಬೆರಗಾಗಿ ಫೋಟೊ, ಸೆಲ್ಫಿ ಕ್ಲಿಕ್ಕಿಸುವುದು ಸಾಮಾನ್ಯವಾಗಿದೆ.

ಕಾಫಿಯನ್ನೇ ಅವಲಂಬಿಸಿ ಲಕ್ಷಾಂತರ ಜನರು ಜೀವನ ನಡೆಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಇಳುವರಿ,ಧಾರಣೆ ಕುಸಿತದಂತಹ ಸಮಸ್ಯೆಗಳನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಈ ಮಧ್ಯೆ ಸಕಾಲದಲ್ಲಿ ಮಳೆಯಾಗದಿರುವುದರಿಂದ ಕಾಫಿ ಬೆಳೆಗಾರರು ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಸಕಾಲದಲ್ಲಿ ನೀರು ಪೂರೈಕೆಯಾಗದಿದ್ದಲ್ಲಿ ಕಾಫಿ ಗಿಡಗಳಲ್ಲಿ ಹೂ ಅರಳದೇ ಕಾಯಿ ಕಟ್ಟುವುದಿಲ್ಲ. ಈ ಕಾರಣಕ್ಕೆ ಲಭ್ಯವಿರುವ ಬಾವಿ, ನದಿಗಳಿಂದ ಸಕಾಲದಲ್ಲಿ ನೀರು ಪೂರೈಸಲು ಲಕ್ಷಾಂತರ ಹಣ ವ್ಯಯಿಸಿ ಡೀಸೆಲ್, ವಿದ್ಯುತ್ ಪಂಪ್‌ಸೆಟ್‌ಗಳ ಮೂಲಕ ತೋಟಗಳಿಗೆ ನೀರು ಪೂರೈಸಲು ಪರದಾಡುವುದು ಸಾಮಾನ್ಯವಾಗಿದೆ. ಈ ಬಾರಿ ರೇವತಿ ಮಳೆ ಸಕಾಲದಲ್ಲಿ ಸುರಿದಿರುವುದರಿಂದ ಬೆಳೆಗಾರರ ಈ ಖರ್ಚು ಉಳಿದಿದೆ. ಕಾಫಿ ಗಿಡಗಳಲ್ಲಿ ಹೂ ಅರಳಿ ನಿಂತಿದ್ದು, ಮೊಗ್ಗು ಮೂಡುತ್ತಿರುವುದರಿಂದ ಈ ಬಾರಿ ಉತ್ತಮ ಉಳುವರಿಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಅರೇಬಿಕಾ, ರೋಬಾಸ್ಟಾ ಕಾಫಿಗೆ ಉತ್ತಮ ಧಾರಣೆ ಇರುವುದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವ ಕಾಳು ಮೆಣಸು ಧಾರಣೆ ಕುಸಿದು ಬೆಳೆಗಾರರು ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಕಾಫಿ ಇಳುವರಿಯನ್ನು ಹೆಚ್ಚಿಸುವ ಹೂ ಮಳೆ ಸಕಾಲದಲ್ಲಿ ಬೆಳೆಗಾರರ ಮುಖದಲ್ಲಿ ಹಾಗೂ ಕಾಫಿನಾಡಿನ ಕಳೆಯನ್ನೂ ಹೆಚ್ಚಿಸಿವೆ.

ರೇವತಿ ಮಳೆ ಸಕಾಲದಲ್ಲಿ ಸುರಿದಿರುವುದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕಾಫಿ ಗಿಡಗಳಲ್ಲಿ ಅರಳಿದ ಹೂಗಳು ಮೊಗ್ಗಾಗಿ ಕಾಯಿಯಾಗಿ ಬಲಿತುಕೊಳ್ಳಲು ಇನ್ನೂ ಒಂದೆಡರೆಡು ಮಳೆಯ ಅಗತ್ಯವಿದೆ. ಈ ಮಳೆಯಾಗದಿದ್ದಲ್ಲಿ ಹೂಗಳು ಬಿಸಿಲಿಗೆ ಒಣಗಿ ಹೋಗಿ ಕಾಯಿಗಳು ಗಿಡಗಳಲ್ಲಿ ನಿಲ್ಲುವುದಿಲ್ಲ. ಉತ್ತಮ ಮಳೆಯಾದಲ್ಲಿ ಈ ಬಾರಿ ಬಂಪರ್ ಬೆಳೆ ನಿರೀಕ್ಷಿಸಬಹುದು. ಕಾಫಿ ಕಳೆದ ಕೆಲ ವರ್ಷಗಳಿಂದ ಸ್ಥಿರ ಬೆಲೆ ಇದೆ. ಉತ್ತಮ ಬೆಳೆಯಾದಲ್ಲಿ ಕಾಳು ಮೆಣಸು ಬೆಲೆ ಕುಸಿತ ನೀಡಿರುವ ಅಘಾತದಿಂದ ಬೆಳೆಗಾರರು ಕೊಂಚವಾದರೂ ಸುಧಾರಿಸಿಕೊಳ್ಳಲು ಸಾಧ್ಯವಾಗಲಿದೆ.
-ರವಿಕುಮಾರ್, ಕಾಫಿ ಬೆಳೆಗಾರ, ಆಲ್ದೂರು.

share
ಕೆ.ಎಲ್.ಶಿವು
ಕೆ.ಎಲ್.ಶಿವು
Next Story
X