ರಾಮ ನವಮಿ ಆಚರಣೆಯಲ್ಲಿ ತ್ರಿಶೂಲ ಪ್ರದರ್ಶಿಸಿದ ಬಿಜೆಪಿ ನಾಯಕಿ ವಿರುದ್ಧ ಎಫ್ ಐಆರ್ ದಾಖಲು
ಪಶ್ಚಿಮ ಬಂಗಾಳ, ಮಾ.26: ರಾಮ ನವಮಿಯ ಸಂದರ್ಭ ತ್ರಿಶೂಲ ಹಿಡಿದು ರ್ಯಾಲಿ ನಡೆಸಿದ ಬಿಜೆಪಿ ನಾಯಕಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ರಾಮ್ ಪುರ್ಹತ್ ನಲ್ಲಿ ನಡೆದ ರಾಮನವಮಿ ಆಚರಣೆಯಲ್ಲಿ ಬಂಗಾಳದ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ತ್ರಿಶೂಲವನ್ನು ಹಿಡಿದಿದ್ದರು ಎಂದು ಆರೋಪಿಸಲಾಗಿದೆ.
ಇಷ್ಟೇ ಅಲ್ಲದೆ, “ರಾಮನವಮಿ ಆಚರಣೆಗಾಗಿ ನಾನು ರಾಮ್ ಪುರ್ಹತ್ ನಲ್ಲಿದ್ದೇನೆ. ನಾನು ಆಚರಣೆಯಲ್ಲಿ ಭಾಗವಹಿಸದಂತೆ ತಡೆಯಲು ಮಮತಾರ ಗೂಂಡಾಗಳಿಗೆ ಸಾಧ್ಯವಿಲ್ಲ. ಟಿಎಂಸಿಯ ಶಾಂತಿಬಾಹಿನಿ ಪೊಲೀಸರೊಂದಿಗೆ ಸೇರಿ ದೌರ್ಜನ್ಯ ನಡೆಸುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದರು.
Next Story