ಪಾಕ್‌ನ 7 ಕಂಪೆನಿಗಳ ವಿರುದ್ಧ ಅಮೆರಿಕ ದಿಗ್ಬಂಧನ

ಇಸ್ಲಾಮಾಬಾದ್, ಮಾ. 26: ಪರಮಾಣು ವ್ಯಾಪಾರದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಪಾಕಿಸ್ತಾನದ 7 ಕಂಪೆನಿಗಳ ವಿರುದ್ಧ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿದೆ. ಇದು ಪ್ರತಿಷ್ಠಿತ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಸೇರ್ಪಡೆಯಾಗುವ ಪಾಕಿಸ್ತಾನಕ್ಕೆ ಮಹತ್ವಾಕಾಂಕ್ಷೆಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.
ಅಮೆರಿಕ ಉದ್ಯಮ ಮತ್ತು ಭದ್ರತೆ ಹಾಗೂ ವಾಣಿಜ್ಯ ಬ್ಯೂರೊ ಪಾಕಿಸ್ತಾನಿ ಕಂಪೆನಿಗಳ ವಿರುದ್ಧ ಮಾರ್ಚ್ 22ರಂದು ದಿಗ್ಬಂಧನಗಳನ್ನು ವಿಧಿಸಿದೆ.
ಈ ಕಂಪೆನಿಗಳು ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ವಿದೇಶ ನೀತಿ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿವೆ ಎಂಬ ನಿರ್ಧಾರಕ್ಕೆ ಅಮೆರಿಕ ಬಂದಿದೆ ಎಂದು ಅಮೆರಿಕ ಸರಕಾರದ ವೆಬ್‌ಸೈಟ್‌ನಲ್ಲಿ ಹಾಕಿದ ವರದಿಯೊಂದರಲ್ಲಿ ಬ್ಯೂರೊ ಹೇಳಿದೆ.
Next Story





