ಸ್ವಾಗತಾರ್ಹ ತೀರ್ಪು
ಮಾನ್ಯರೇ,
ಜಾರ್ಖಂಡ್‌ನ ರಾಮ್‌ಗರ್ ಜಿಲ್ಲೆಯ ತ್ವರಿತಗತಿ ನ್ಯಾಯಾಲಯವು ಗೋರಕ್ಷಣೆ ಹೆಸರಿನಲ್ಲಿ ನಡೆದ ಗುಂಪು ಹತ್ಯೆ ಮಾಡಿದ 11 ಜನ ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೊದಲ ಐತಿಹಾಸಿಕ ತೀರ್ಪು ಇದಾಗಿದೆ. ಗೋರಕ್ಷಣೆ ನೆಪದಲ್ಲಿ ನಡೆದ ಹತ್ಯೆಯ ವಿರುದ್ಧ ಅಪರಾಧಿಗಳಿಗೆ ಪ್ರಕಟಿಸಿದ ಶಿಕ್ಷೆಯು ಸತ್ಯಕ್ಕೆ ಸಂದ ಜಯವಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಹಾಗೂ ಅಂತಹವರನ್ನು ಪರೋಕ್ಷವಾಗಿ ಬೆಂಬಲಿಸುವ ಪಕ್ಷ, ಸಂಘ ಸಂಸ್ಥೆಗಳಿಗೆ ನ್ಯಾಯಾಲಯವು ಕಠಿಣ ಸಂದೇಶ ರವಾನಿಸಿದೆ. 2014ರಿಂದ ಆರಂಭವಾದ ಸರಣಿ ಗುಂಪು ಹತ್ಯೆಗಳ ಮೇಲೆ ಸರಕಾರ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ಹಾಗಾಗಿಯೇ ಸರಣಿ ಗುಂಪು ಹತ್ಯೆಗಳ ಘಟನೆಗಳು ನಡೆದವು. ಅದರೆ ನ್ಯಾಯಾಲಯ ಪ್ರಕಟಿಸಿದ ತೀರ್ಪು ನಿಜಕ್ಕೂ ಶ್ಲಾಘನೀಯ ಹಾಗೂ ಸಮಯೋಚಿತವಾಗಿದೆ. ಮುಂಬರುವ ದಿನಗಳಲ್ಲಿ ಗುಂಪು ಹತ್ಯೆಗಳನ್ನು ತಡೆಯುವಲ್ಲಿ ಈ ತೀರ್ಪು ಸಹಕಾರಿಯಾಗಲಿದೆ ಎನ್ನಬಹುದು. ರಾಜಕೀಯ ಉದ್ದೇಶಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳು ಬಳಕೆಯಾಗುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ನ್ಯಾಯಾಂಗದ ಈ ತೀರ್ಪು ಜನರಲ್ಲಿ ವಿಶ್ವಾಸ ಮೂಡಿಸಿವೆ.





