Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆಧಾರ್ ಬಗೆಗಿನ ನಿಲೇಕಣಿ ಹೇಳಿಕೆ ಅತಂಕ...

ಆಧಾರ್ ಬಗೆಗಿನ ನಿಲೇಕಣಿ ಹೇಳಿಕೆ ಅತಂಕ ಮೂಡಿಸಿರುವುದೇಕೆ?

ದೇವದಾನ ಚೌಧರಿದೇವದಾನ ಚೌಧರಿ26 March 2018 11:59 PM IST
share
ಆಧಾರ್ ಬಗೆಗಿನ ನಿಲೇಕಣಿ ಹೇಳಿಕೆ ಅತಂಕ ಮೂಡಿಸಿರುವುದೇಕೆ?

ನಿಲೇಕಣಿ ಹೇಳುವ ಮಾತಿನ ಅರ್ಥ- ‘‘ಭಾರತೀಯರು ಖಾಸಗಿಯವರ ಮೂಲಕ ಲಾಭಕ್ಕಾಗಿ ಬೇರೆಯವರ ಕಿಡ್ನಿ ಮಾರಾಟ ಮಾಡಬಹುದು. ಕಿಡ್ನಿ ಹೊಂದಿದ ವ್ಯಕ್ತಿಗೆ ಅದು ತಿಳಿಯಬೇಕಾಗಿಲ್ಲ ಹಾಗೂ ಆತನ ಒಪ್ಪಿಗೆಯೂ ಬೇಕಿಲ್ಲ.’’


 ‘‘ಆಧಾರ್ ಭಾರತೀಯರು ಮಾರಾಟ ಮಾಡಬಹುದಾದ ಅಥವಾ ಲಾಭಕ್ಕಾಗಿ ವಿನಿಮಯ ಮಾಡಿಕೊಳ್ಳಬಹುದಾದ ಡಾಟಾ ಸೃಷ್ಟಿಸುತ್ತಿದೆ’’

ಇದು, ಐಟಿ ಕಂಪೆನಿ ಹಾಗೂ ಉದ್ಯಮ ವಲಯದಲ್ಲಿ ಕೇರಳವನ್ನು ಪ್ರಚುರಪಡಿಸುವ ಉದ್ದೇಶದಿಂದ ಸರಕಾರ ಹಮ್ಮಿಕೊಂಡಿದ್ದ ಫ್ಯೂಚರ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಇನ್ಫೋಸಿಸ್ ಸಹಸಂಸ್ಥಾಪಕ ಮತ್ತು ಯುನೀಕ್ ಐಡೆಂಟಿಫಿಕಶನ್ ಅಥಾರಿಟಿ ಆಫ್ ಇಂಡಿಯಾದ ಮಾಜಿ ನಿರ್ದೇಶಕ ನಂದನ್ ನಿಲೇಕಣಿ ಅವರ ಸ್ಪಷ್ಟ ನುಡಿ.

‘‘ತಮ್ಮದೇ ಡಾಟಾ ಮಾರಾಟ ಮಾಡುವ ಮೂಲಕ ಬಡ ಭಾರತೀಯರಿಗೆ ತಮ್ಮ ಜೀವನ ಸುಧಾರಿಸಿಕೊಳ್ಳಲು, ಸಣ್ಣ ವ್ಯಾಪಾರ ಕೈಗೊಳ್ಳಲು ಮತ್ತು ಸಾಲ ಲಭ್ಯತೆಗೆ ಅನುಕೂಲವಾಗಲಿದೆ. ಇದರ ಉದ್ದೇಶವೆಂದರೆ ಡಿಜಿಟಲ್ ಐಡಿ ಸಂಖ್ಯೆ, ಸಂವಹನಕ್ಕೆ ಸಾಧನ ಮತ್ತು ಬ್ಯಾಂಕ್‌ಖಾತೆಯನ್ನು ಒಳಗೊಂಡ ಮೂಲಭೂತ ಡಿಜಿಟಲ್ ಮೂಲಸೌಕರ್ಯದ ಮೂಲಕ ಡಾಟಾ ಸಬಲೀಕರಣ ವಾಸ್ತುಶಿಲ್ಪವನ್ನು ಸೃಷ್ಟಿಸುವುದು’’ ಎಂದು ಅವರು ವಿವರಿಸಿದರು.

ಮೇಲಿನ ಈ ಹೇಳಿಕೆಗಳು ನೋಟು ರದ್ದತಿಯನ್ನು ಬೆಂಬಲಿಸುವಂಥ ಹೇಳಿಕೆಗಳು. ಈ ಸಮರ್ಥನೆಗಳಿಗೆ ಯಾವುದೇ ತಾರ್ಕಿಕ ಹಿನ್ನೆಲೆ ಇಲ್ಲ. ಈಗಾಗಲೇ ತಪ್ಪುಮಾಹಿತಿ ಹೊಂದಿರುವ ಸಾರ್ವಜನಿಕರಿಗೆ ಅಸಂಬದ್ಧ ಯೋಚನೆಯನ್ನು ಮಾರುವ ಹುನ್ನಾರ.

ನಮಗೆಲ್ಲ ತಿಳಿದಿರುವಂತೆ ನಂದನ್ ನಿಲೇಕಣಿ, ಬ್ಯಾಂಕರ್‌ಗಳು, ಕಾರ್ಪೊರೇಟ್ ಮುಖ್ಯಸ್ಥರು, ಚಿಂತಕರು ಮತ್ತು ರಾಜಕಾರಣಿಗಳನ್ನು ಒಳಗೊಂಡ ‘ಡಾಟಾ ಹೊಸ ತೈಲ’ ಎಂದು ಪ್ರತಿಪಾದಿಸುವ ಬ್ರಿಗೇಡ್‌ನ ಅವಿಭಾಜ್ಯ ಅಂಗ. ನಾಗರಿಕರನ್ನು ಅಬಲರಾಗಿಸುವ, ಅವರ ಖಾಸಗಿತನ, ಒಪ್ಪಿಗೆ ಹಾಗೂ ಸ್ವಾತಂತ್ರ್ಯವನ್ನು ಕೊಳ್ಳೆ ಹೊಡೆಯುವ, ಕಾರ್ಪೊರೇಟ್ ರಣಹದ್ದುಗಳು, ಸರಕಾರಿ ಯಂತ್ರ ಹಾಗೂ ಗುಪ್ತಚರ ಏಜೆನ್ಸಿಗಳ ಶೋಷಣೆಗೆ ಒಳಗಾಗುವಂತೆ ಮಾಡುವ ನಿರಂಕುಶವಾದಿ ತಂತ್ರಜ್ಞ ವ್ಯವಸ್ಥೆಯ ಪರವಾಗಿ ಒಲವು ಸೃಷ್ಟಿಸುವ ಕೂಟ ಇದು.

ಅಧಿಕಾರ ಹಾಗೂ ಲಾಭಕ್ಕಾಗಿ ದೊಡ್ಡ ಪ್ರಮಾಣದ ಕಣ್ಗಾವಲು, ಡಾಟಾ ಸಂಗ್ರಹ, ಸಂಸ್ಕರಣೆ, ವಿಶ್ಲೇಷಣೆ ಮತ್ತು ಮಾರಾಟ ದಂಧೆಯನ್ನು ಹಾರ್ವರ್ಡ್ ಶಿಕ್ಷಣ ತಜ್ಞ ಶೊಶಾನಾ ಜುಜೋಫ್ 2015ರಲ್ಲಿ ‘‘ಕಣ್ಗಾವಲು ಬಂಡವಾಳಶಾಹಿ’’ ಎಂದು ಬಣ್ಣಿಸಿದ್ದರು.

ನಿರ್ದಿಷ್ಟ ಅಪೇಕ್ಷಿತ ಫಲಿತಾಂಶಕ್ಕಾಗಿ ಮನುಷ್ಯರ ನಡವಳಿಕೆಯನ್ನು ಮಾರ್ಪಡಿಸಲು ಮತ್ತು ಯೋಚನಾ ಲಹರಿಯ ಮೇಲೆ ಪ್ರಭಾವ ಬೀರಲು ಡಾಟಾಗಳನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಇತ್ತೀಚಿನ ಕೇಂಬ್ರಿಡ್ಜ್ ಅನಲಿಟಿಕಾ- ಫೇಸ್‌ಬುಕ್ ಹಗರಣ ಜಗಜ್ಜಾಹೀರುಗೊಳಿಸಿದೆ.

ಕೇಂದ್ರೀಯ ತನಿಖಾ ಸಂಸ್ಥೆ (ಸಿಐಎ) ಕೂಡಾ ಆಧಾರ್ ಮಾಹಿತಿಯನ್ನು ಪಡೆಯಲು ಶಕ್ತ ಎನ್ನುವುದನ್ನು ಗ್ರೇಟ್ ಗೇಮ್ ಇಂಡಿಯಾನ್ಯೂಸ್ (ಜಿಜಿಐ ನ್ಯೂಸ್) ವರದಿಯನ್ನು ಆಧರಿಸಿ ವಿಕಿಲೀಕ್ಸ್ ಹೇಳಿದೆ.

ಎಡ್ವರ್ಡ್ ಸ್ನೋಡೆನ್ ಜನವರಿ 9ರಂದು ಟ್ವೀಟ್ ಮಾಡಿ, ‘‘ಆಧಾರ್ ಉಲ್ಲಂಘನೆಯನ್ನು ಬಯಲಿಗೆಳೆದ ಪತ್ರಕರ್ತರನ್ನು ತನಿಖೆಗೆ ಒಳಪಡಿಸುವ ಬದಲು ಅವರಿಗೆ ಪ್ರಶಸ್ತಿ ನೀಡಬೇಕಿತ್ತು. ಸರಕಾರ ನೈಜವಾಗಿ ನ್ಯಾಯದ ಬಗ್ಗೆ ಕಳಕಳಿ ಹೊಂದಿದ್ದರೆ, ಕೋಟ್ಯಂತರ ಭಾರತೀಯರ ಖಾಸಗಿತನವನ್ನು ಧ್ವಂಸಗೊಳಿಸುವ ನೀತಿಗಳಲ್ಲಿ ಸುಧಾರಣೆ ತರಬೇಕಿತ್ತು’’ ಎಂದು ಅಭಿಪ್ರಾಯಪಟ್ಟಿದ್ದರು.

ಈ ಬಗ್ಗೆ ಎಚ್ಚರಿಕೆಯ ಗಂಟೆ ಮೊಳಗಿವೆ ಹಾಗೂ ಹಲವು ಮಂದಿ ಈ ಬಗ್ಗೆ ಮಾತನಾಡಿದ್ದಾರೆ. ಆದರೂ ಸರಕಾರ ಮಾತ್ರ ಜನ ಇಚ್ಛಿಸದ ಆಧಾರ್ ವ್ಯವಸ್ಥೆಯನ್ನು ನಾಗರಿಕರ ಗಂಟಲಿಗೆ ತಳ್ಳುತ್ತಿದೆ. ನಾಗರಿಕರ ಬಗ್ಗೆ ಕಾಳಜಿ ಇರುವ ಯಾವುದೇ ಸರಕಾರ, ತನ್ನ ಪ್ರಜೆಗಳ ವೈಯಕ್ತಿಕ ಮಾಹಿತಿಯನ್ನು ವಿದೇಶಿ ಬೇಹುಗಾರಿಕೆ ಏಜೆನ್ಸಿಗಳಿಗೆ ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸುತ್ತಿತ್ತು. ಆದರೆ ನಮ್ಮ ‘ರಾಷ್ಟ್ರೀಯವಾದಿ’ ಸರಕಾರದ ಯೋಚನೆ ಭಿನ್ನ.

ಈಗ ಇದಕ್ಕೆ ಪರಿಹಾರ ಹಾಗೂ ನ್ಯಾಯದ ನಿರೀಕ್ಷೆ ಸುಪ್ರೀಂಕೋರ್ಟ್ ತೀರ್ಮಾನವನ್ನು ಅವಲಂಬಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ಆಧಾರ್ ಸಾಂವಿಧಾನಿಕ ಕ್ರಮಬದ್ಧತೆ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಹೋರಾಟಗಾರರು ಆಧಾರ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ ಮತ್ತು ಸಂಗ್ರಹಿಸಿದ ಮಾಹಿತಿಗಳನ್ನು ನಾಶಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಬಗೆಗಿನ ಸುಪ್ರೀಂಕೋರ್ಟ್ ನಿರ್ಧಾರ ಈ ವರ್ಷ ತಿಳಿಯಬಹುದು. ಆದರೆ ನಿಲೇಕಣಿ ಚಿಂತನೆ ಮಾತ್ರ ಈಗಾಗಲೇ ನಮಗೆ ಗೊತ್ತಿದೆ.

‘‘ಆಧಾರ್ ಮಾಹಿತಿ ಸಂಗ್ರಹ ಜನರ ಬದುಕನ್ನು ಬೆಳೆಸುವ ಸಾಧನ’’ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಇಡೀ ವ್ಯವಸ್ಥೆಯನ್ನು ಅವರು ‘‘ಡೊಡ್ಡಣ್ಣ ನಿಮ್ಮನ್ನು ಗಮನಿಸುತ್ತಿದ್ದಾನೆ’’ ಎಂದು ಬಣ್ಣಿಸುತ್ತಾರೆ. ಇದರ ಮುಖ್ಯ ಉದ್ದೇಶವೆಂದರೆ ಸಾಮಾಜಿಕ ಜಾಲತಾಣ, ಗೂಗಲ್, ಅಮೆಝಾನ್, ಯೂಟ್ಯೂಬ್ ಸೇರಿದಂತೆ ಮೊಬೈಲ್ ಫೋನ್ ಬಳಕೆಯಿಂದ ಸಂಗ್ರಹಿಸುವ ಡಾಟಾ, ಹಕ್ಕುಗಳನ್ನು ಪಡೆಯುವ, ಸೇವೆ ಹಾಗೂ ಪ್ರಯೋಜನಗಳನ್ನು ಪಡೆಯಲು ಪೂರಕವಾಗುವ ಆಧಾರ್ ಐಡಿ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿ ಸೇರಿದಂತೆ ಬ್ಯಾಂಕಿಂಗ್ ಮಾಹಿತಿಗಳನ್ನು ಸುಲಲಿತವಾಗಿ ಸಮನ್ವಯಗೊಳಿಸುವುದು.

ಮೂರೂ ಮೂಲಗಳಿಂದ ಪಡೆದ ಡಾಟಾವನ್ನು ಕೇಂದ್ರೀಕೃತ ವ್ಯವಸ್ಥೆ ಮೂಲಕ ಒಗ್ಗೂಡಿಸಿ ಇಲ್ಲಿಂದ ಸರಕಾರ, ಗುಪ್ತಚರ ಸಂಸ್ಥೆಗಳು ಮತ್ತು ಖಾಸಗಿಯವರು ಪಡೆದು ತಮಗೆ ಬೇಕಾದಂತೆ ಅದನ್ನು ಬಳಸಿಕೊಳ್ಳಬಹುದು. ಈ ಮೂಲಕ ಹಲವು ಮಂದಿ ನಾಗರಿಕರು ಅವ್ಯವಹಾರ, ಕಿರುಕುಳ, ಅನಗತ್ಯ ನಿಯಂತ್ರಣ ಹಾಗೂ ಶೋಷಣೆಗೆ ಈಡಾಗುವ ಸಾಧ್ಯತೆ ಇದೆ.

ಈ 24/7 ವ್ಯವಸ್ಥೆಯು ಅಧಿಕಾರದಲ್ಲಿರುವ ಸರಕಾರ ಹಾಗೂ ರಾಜಕಾರಣಿಗಳಿಗೆ ಮತ್ತು ಖಾಸಗಿಯವರಿಗೆ ಪ್ರಜೆಗಳ ಮೇಲೆ ನಿಯಂತ್ರಣ ಹೊಂದಲು ಅನುವು ಮಾಡಿಕೊಡುತ್ತದೆ. ಆದ್ದರಿಂದಲೇ ಆಧಾರ್ ಮೂಲಭೂತವಾಗಿ, ಫ್ಯಾಶಿಸ್ಟರ ಕನಸು ಹಾಗೂ ಪ್ರಜಾಪ್ರಭುತ್ವವಾದಿಗಳಿಗೆ ದುಃಸ್ವಪ್ನ.

ಪ್ರಜಾಪ್ರಭುತ್ವದಲ್ಲಿ ಇಂಥ ನಿರಂಕುಶವಾದಿ ವ್ಯವಸ್ಥೆ ಹಣ ಮತ್ತು ಅಧಿಕಾರವನ್ನು ಬಳಸಿಕೊಂಡು ಇನ್ನಷ್ಟು ಹಣ ಮತ್ತು ಅಧಿಕಾರ ಗಳಿಸುವ ಸಾಧನವಾಗಬಲ್ಲದು.
ನಿಲೇಕಣಿಯವರ ನವಉದಾರೀಕರಣದ ಚಿಂತನೆ ಜನರನ್ನು ಸರಕಾರದ ಸ್ವತ್ತಾಗಿ ಅಮಾನವೀಯಗೊಳಿಸುತ್ತದೆ ಹಾಗೂ ಜನರು ಕೂಡಾ ಆರ್ಥಿಕ ಸರಕು ಎಂದಷ್ಟೇ ಪರಿಗಣಿಸುತ್ತದೆ. ಇಂಥ ಅಸಮಂಜಸ ಯೋಚನೆಗಳು ಮನುಷ್ಯರನ್ನು ತಿದ್ದಬಹುದಾದ ವ್ಯವಸ್ಥೆಯಾಗಿ ಸಾಂಸ್ಥೀಕರಣಗೊಳಿಸುತ್ತವೆ. ಆದರೆ ಸಮಾಜಘಾತುಕ ಕಲ್ಪನೆಗಳು ಸರಕಾರದ ಭಾಗವಾಗುತ್ತಿವೆ.

ನಿಲೇಕಣಿಯಂಥ ಸ್ವಹಿತಾಸಕ್ತಿಯ ಯಾಂತ್ರಿಕ ಮನೋಭಾವ ತಂತ್ರಜ್ಞರು, ಸ್ವಾತಂತ್ರ ಹಾಗೂ ವಿಮೋಚನೆಯಂಥ ಪ್ರಮುಖ ಯೋಚನೆಗಳನ್ನು ಅರ್ಥ ಮಾಡಿಕೊಳ್ಳಲಾರರು. ಆದರೆ ಸರಕಾರ ತನ್ನ ನೈತಿಕ ಅಧಿಕಾರವನ್ನು ಕಳೆದುಕೊಂಡು ಉದಾತ್ತ ಚಿಂತನೆಗಳನ್ನು ಮರೆತಾಗ ಅದು ಜನರನ್ನು ಹಾಗೂ ಮಾಹಿತಿಗಳನ್ನು ಕಾರ್ಪೊರೇಟ್ ಲಾಭಕ್ಕಾಗಿ ಬಳಸುವ, ಪ್ರಜಾಸತ್ತಾತ್ಮಕ ಹುಸಿವಾದ ಹಾಗೂ ಕ್ರೋಡೀಕೃತ ನಿಯಂತ್ರಣದ ಯುಗವನ್ನು ಸಂಕೇತಿಸುತ್ತದೆ.

‘‘ಆಧಾರ್ ಭಾರತೀಯರು ಮಾರಾಟ ಮಾಡಬಹುದಾದ ಅಥವಾ ಲಾಭಕ್ಕಾಗಿ ವಿನಿಮಯ ಮಾಡಿಕೊಳ್ಳಬಹುದಾದ ಡಾಟಾ ಸೃಷ್ಟಿಸುತ್ತಿದೆ’’ ಎನ್ನುವ ನಿಲೇಕಣಿ ವಾದ ವಂಚನೆಯಲ್ಲದೇ ಬೇರೇನೂ ಅಲ್ಲ. ಏಕೆಂದರೆ ನಾವು ಸೃಷ್ಟಿಸಿದ ಡಾಟಾವನ್ನು ನಾವು ಹೊಂದಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ನಿರ್ದಿಷ್ಟ ವ್ಯಕ್ತಿಗಳಿಂದ ಸಂಗ್ರಹಿಸಿದ ಡಾಟಾವನ್ನು ಯುಐಎಡಿಐ ನಮಗೆ ಹಸ್ತಾಂತರಿಸುತ್ತದೆಯೇ? ನಿರ್ದಿಷ್ಟ ಅವಧಿಯ ಎಲ್ಲ ಡಾಟಾವನ್ನು ಪೆನ್‌ಡ್ರೈವ್ ಮೂಲಕ ನಾಗರಿಕರಿಗೆ ನೀಡುತ್ತದೆಯೇ? ಇದಕ್ಕೆ ಉತ್ತರ ‘ಇಲ್ಲ’.

ಅಗತ್ಯವಿರುವ ವ್ಯಕ್ತಿ ತನ್ನ ಕಿಡ್ನಿ ಮಾರಾಟ ಮಾಡಬಹುದು; ಆದರೆ ತನ್ನ ಡಾಟಾ ಮಾರಾಟ ಮಾಡಲಾರ. ಈ ಡಾಟಾ ಯುಐಡಿಎಐಗೆ ಹಾಗೂ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಮತ್ತು ಬೇಹುಗಾರಿಕೆ ಏಜೆನ್ಸಿಗಳಿಗೆ ಸೇರಿದ್ದು. ಇದನ್ನು ನಾವು ನಮ್ಮ ಮನಸ್ಸಿಗೆ ಬಂದಂತೆ ಸಂಸ್ಕರಿಸಿ, ಮಾರಾಟ ಮಾಡಲಾಗದು.
ಅಂದರೆ ನಿಲೇಕಣಿ ಹೇಳುವ ಮಾತಿನ ಅರ್ಥ- ‘‘ಭಾರತೀಯರು ಖಾಸಗಿಯವರ ಮೂಲಕ ಲಾಭಕ್ಕಾಗಿ ಬೇರೆಯವರ ಕಿಡ್ನಿ ಮಾರಾಟ ಮಾಡಬಹುದು. ಕಿಡ್ನಿ ಹೊಂದಿದ ವ್ಯಕ್ತಿಗೆ ಅದು ತಿಳಿಯಬೇಕಾಗಿಲ್ಲ ಹಾಗೂ ಆತನ ಒಪ್ಪಿಗೆಯೂ ಬೇಕಿಲ್ಲ.’’

ಯುಐಡಿಎಐ ವಿರುದ್ಧದ ಯಾವುದೇ ದೂರನ್ನು ಯುಐಡಿಎಐಗೆ ಕಳುಹಿಸಲಾಗುತ್ತದೆ ಹಾಗೂ ಯಾವುದೇ ಎಫ್‌ಐಆರ್ ದಾಖಲಿಸುವಂತಿಲ್ಲ ಎಂಬ ಕಾನೂನನ್ನು ಸರಕಾರ ಜಾರಿಗೆ ತಂದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಆದ್ದರಿಂದ ಯುಐಡಿಎಐ ಒಂದು ಸಂವಿಧಾನಾತೀತ ಸಂಸ್ಥೆಯಾಗಿದ್ದು, ಅದು ಭಾರತೀಯ ಕಾನೂನಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆಧಾರ್ ದುಃಸ್ವಪ್ನ ಇದಕ್ಕಿಂತ ನಿರಂಕುಶವಾಗಲು ಹೇಗೆ ಸಾಧ್ಯ?

ನಮ್ಮ ಮುಂದೆ ಈಗಾಗಲೇ ದಯನೀಯ ಚಿತ್ರಣ ಇದೆ: ಡಿಜಿಟಲ್ ಜೀತದ ಜಗತ್ತಿನಲ್ಲಿ ಡಾಟಾ ಎನ್ನುವುದು ಹೊಸ ಜೈಲು. ಯುಐಡಿಎಐ ನ್ಯಾಯಾಧೀಶ, ನ್ಯಾಯವ್ಯವಸ್ಥೆ, ಜೈಲರ್ ಮತ್ತು ಮರಣದಂಡನೆ ವಿಧಿಸುವ ವ್ಯಕ್ತಿ.

ಕೃಪೆ: dailyo.in

share
ದೇವದಾನ ಚೌಧರಿ
ದೇವದಾನ ಚೌಧರಿ
Next Story
X