Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈಯಲ್ಲಿ ತೆರೆದಿದೆ ಪ್ರಪ್ರಥಮ...

ದುಬೈಯಲ್ಲಿ ತೆರೆದಿದೆ ಪ್ರಪ್ರಥಮ ಸಿಬ್ಬಂದಿ ರಹಿತ ಪುಸ್ತಕ ಮಳಿಗೆ

ವಾರ್ತಾಭಾರತಿವಾರ್ತಾಭಾರತಿ27 March 2018 4:31 PM IST
share
ದುಬೈಯಲ್ಲಿ ತೆರೆದಿದೆ ಪ್ರಪ್ರಥಮ ಸಿಬ್ಬಂದಿ ರಹಿತ ಪುಸ್ತಕ ಮಳಿಗೆ

ದುಬೈ,ಮಾ.27 : ನೀವು ಪುಸ್ತಕ ಪ್ರಿಯರೆಂದಾದರೆ, ದುಬೈಗೆ ಭೇಟಿ ನೀಡಿದಾಗ ಅಲ್ಲಿನ ವಿನೂತನ ಪುಸ್ತಕ ಮಳಿಗೆ 'ಬುಕ್ ಹೀರೋ'ಗೆ ಭೇಟಿ ನೀಡಲೇ ಬೇಕು. ದಿನದ 24 ಗಂಟೆಯೂ ಕಾರ್ಯಾಚರಿಸುವ ಈ ಪುಸ್ತಕ ಮಳಿಗೆ ಗ್ರಾಹಕರ ಮೇಲಿನ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯ ಆಧಾರದಲ್ಲಿಯೇ ಕಾರ್ಯಾಚರಿಸುತ್ತಿದೆ.

ದುಬೈ ಮರೀನಾದಲ್ಲಿರುವ ಮರೀನಾ ವಾಕ್ ಪಕ್ಕದಲ್ಲಿರುವ ಈ ಪುಸ್ತಕ ಮಳಿಗೆಯಲ್ಲಿ ಯಾರೂ ಸಿಬ್ಬಂದಿಗಳಿಲ್ಲ. ಗ್ರಾಹಕರು ನೇರವಾಗಿ ಅಂಗಡಿ ಹೊಕ್ಕು, ತಮಗೆ ಬೇಕಿದ್ದಂತಹ ಪುಸ್ತಕಗಳನ್ನು ಖರೀದಿಸಿ ಅಲ್ಲಿರುವ ಡ್ರಾಪ್ ಬಾಕ್ಸ್ ಅಥವಾ ಪೆಟ್ಟಿಗೆಯೊಳಗೆ ಹಣ ಹಾಕಿ ನಂತರ ಪುಸ್ತಕದೊಂದಿಗೆ ಹೊರನಡೆದರಷ್ಟೇ ಸಾಕು. ಈ ಹಣ ಪಾವತಿ ಪೆಟ್ಟಿಗೆಯನ್ನು 'ಟ್ರಸ್ಟ್ ಬಾಕ್ಸ್' ಅಥವಾ ನಂಬಿಕೆಯ ಬಾಕ್ಸ್ ಎಂದು ಹೆಸರಿಸಲಾಗಿದೆ.

ಈ ಪುಸ್ತಕ ಮಳಿಗೆಯ ಮಾಲಕ ಮೊಂಟಸೆರ್ರಟ್ ಮಾರ್ಟಿನ್ ಎಂಬವರಾಗಿದ್ದು ಅವರು  ಎಮಿರೇಟ್ಸ್ ಉದ್ಯಮಿ ಮುಹಮ್ಮದ್ ಅಬ್ದುಲ್ಲಾ ಅಲ್ ಖುಬೈಸಿ ಅವರ ಜತೆ ಸೇರಿ ಇದನ್ನು ಮುನ್ನಡೆಸುತ್ತಿದ್ದಾರೆ.

ಗ್ರಾಹಕರು ಒಂದು ವೇಳೆ ಪುಸ್ತಕಗಳನ್ನು ಖರೀದಿಸಿ ಹಣ ನೀಡದೇ ಮರಳಿದರೆ ? ಪುಸ್ತಕ ಮಳಿಗೆ ಮಾಲಕರಿಗೆ ಈ ಬಗ್ಗೆ ಚಿಂತೆಯಿಲ್ಲ. ಹಾಗೇನಾದರೂ ಆದರೂ ನಾನು ಕೇವಲ 300 ದಿರ್ಹಂ ಕಳೆದುಕೊಳ್ಳಬಹುದು. ಸಿಬ್ಬಂದಿಗಳನ್ನು ನೇಮಿಸಿದಲ್ಲಿ ಅವರ  ವೇತನ, ವಿಮೆ ಮತ್ತಿತರ ಖರ್ಚು ಇದಕ್ಕಿಂತಲೂ ಅಧಿಕವಾಗುವುದು ಎಂದು ಅವರು ಹೇಳುತ್ತಾರೆ.

ಮಳಿಗೆಯಲ್ಲಿನ ಪುಸ್ತಕಗಳ ಬೆಲೆ 10ರಿಂದ 20 ದಿರ್ಹಂ ತನಕ ಇದೆ. ಮಳಿಗೆಯಲ್ಲಿ 20,000ಕ್ಕೂ ಅಧಿಕ ಕಾದಂಬರಿಗಳಿವೆ. ಇಂಗ್ಲಿಷ್ ಹಾಗೂ ಅರಬಿಕ್ ಭಾಷೆಯ ಪುಸ್ತಕಗಳ ಹೊರತಾಗಿ ಇಲ್ಲಿ ಫ್ರೆಂಚ್, ಸ್ಪಾನಿಷ್, ರಷ್ಯನ್ ಹಾಗೂ ಸ್ಪೇನ್ ಭಾಷೆಗಳ ಕೃತಿಗಳೂ ಇವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X