ಮಾ.31: ‘ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್’ ದಶವಾರ್ಷಿಕ ಸಮ್ಮೇಳನ
ಕುಂದಾಪುರ, ಮಾ.27: ಕೋಟೇಶ್ವರ ಅಸ್ಸಯಿದ್ ಜಅ್ಫರ್ ಅಸ್ಸಖಾಫ್ ತಂಙಳ್ ನೇತೃತ್ವದ ಇಮಾಮ್ ಬೂಸೂರಿ ತಝ್‌ಕೀಯ ಗಾರ್ಡನ್ ಸಂಸ್ಥೆಯ ವತಿಯಿಂದ ‘ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್’ ಇದರ ದಶವಾರ್ಷಿಕ ಬೃಹತ್ ಸಮ್ಮೇಳನವನ್ನು ಮಾ.31ರಂದು ಸಂಜೆ 5ಗಂಟೆಗೆ ಹಂಗಳೂರು ಮಸೀದಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಸಮ್ಮೇಳನವನ್ನು ರಾಜ್ಯ ಸುನ್ನೀ ವಿದ್ವಾಂಸ ಒಕ್ಕೂಟದ ಅಧ್ಯಕ್ಷರು, ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಬೇಕಲ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಲಿರುವರು. ಅಖಿಲ ಭಾರತ ಸುನ್ನೀ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿ ಯಾರ್ ಕಾಂತಪುರಂ ಮುಖ್ಯ ಭಾಷಣ ಮಾಡಲಿರುವರೆಂದು ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಸ್ಸಯ್ಯಿದ್ ಸಈದುದ್ದೀನ್ ತಂಙಳ್, ಶಿವಮೊಗ್ಗ ಅಸ್ಸಯ್ಯಿದ್ ಅಲವಿ ತಂಙಳ್ ಕರ್ಕಿ, ಹೊನ್ನಾವರ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ತಂಙಳ್, ತೀರ್ಥಹಳ್ಳಿ ಅಸ್ಸಯ್ಯಿದ್ ಹಾಮೀಂ ಸಖಾಫಿ ತಂಙಳ್, ಮೂಡಿಗೆರೆ ಅಸ್ಸಯ್ಯಿದ್ ಹಾರೂನ್ ತಂಙಳ್, ಮೌಲಾನ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಎಎಸ್‌ಎ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು, ಅಲ್‌ಹಾಜ್ ಸಲೀಂ ಮದನಿ ಎಲ್ಲೂರು ಭಾಗವಹಿಸಲಿರುವರು.
ಬುರ್ದಾ ಆಲಾಪಣೆಗೆ ಆರಿಫ್ ಸಅದಿ, ಅಪ್ಜಲ್ ಕಣ್ಣೂರು, ಸಿನಾನ್ ಕಾಸರಗೋಡು ನೇತೃತ್ವ ನೀಡಿದರೆ, ಜಾಫರ್ ಇರಿಕೂರು ಖವಾಲಿ ನಡೆಸಿ ಕೊಡಲಿರುವರು. ಹಾಡುಗಾರ ನಬೀಲ್ ಬೆಂಗಳೂರು ನಅತೇ ಶರೀಫ್ ಹಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ಸಂಘಟನೆಯ ಅಧ್ಯಕ್ಷ ಕೋಟೇಶ್ವರ ಅಸ್ಸಯಿದ್ ಜಅ್ಫರ್ ಅಸ್ಸಖಾಫ್ ತಂಙಳ್, ಎಸ್ಸೆಸ್ಸೆಫ್ ಪ್ರಧಾನ ಕಾರ್ಯ ದರ್ಶಿ ಇಲ್ಯಾಸ್ ನಾವುಂದ, ಸುನ್ನೀ ಮದರಸ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಲತ್ೀ, ನಿರ್ವಹಣಾ ಸಮಿತಿಯ ಮುಹಮ್ಮದ್ ಅಲಿ, ಬಿ.ಎಂ. ನಾಸೀರ್ ಉಪಸ್ಥಿತರಿದ್ದರು.







