ಉಡುಪಿ: ಅಂಬಿಗರ ಚೌಡಯ್ಯನ ವಚನಗಳ ಕುರಿತ ಉಪನ್ಯಾಸ

ಉಡುಪಿ, ಮಾ.27: ಮಂಗಳೂರು ವಿವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಚನ ಚಳುವಳಿ ಮತ್ತು ಅಂಬಿಗರ ಚೌಡಯ್ಯನ ವಚನಗಳ ಪ್ರಸ್ತುತತೆಯ ಅನುಸಂಧಾನ ಎಂಬ ಪ್ರಸರಣೋಪ ನ್ಯಾಸ ಮಾಲಿಕೆಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸಭಾಭವನದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ನಿಕೇತನ, ಅಂಬಿಗರ ಚೌಡಯ್ಯರ ವೈಚಾರಿಕತೆ ಹಾಗೂ ಇಂದು ಅದರ ಪ್ರಸ್ತುತತೆಯ ಬಗ್ಗೆ ಮಾತನಾಡಿದರು. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ.ನಾಗಪ್ಪಗೌಡ ಆರ್. ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿ ದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ರವಿರಾಜ ಶೆಟ್ಟಿ ಸ್ವಾಗತಿಸಿದರು. ರೇವತಿ ವಂದಿಸಿದರು. ಕನ್ನಡ ವಿಬಾಗದ ಸಹ ಪ್ರಾಧ್ಯಾಪಕಿ ಸೌ್ಯುಲತಾ ಕಾರ್ಯಕ್ರಮ ನಿರೂಪಿಸಿದರು.
Next Story





