ಉಡುಪಿ: ಮಾದಕ ದ್ರವ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮ

ಉಡುಪಿ, ಮಾ.27: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಅಧೀನ ದಲ್ಲಿ ಹೂಡೆ ಇಸ್ಲಾಮಿಕ್ ದಾವಾ ಸೆಂಟರ್ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹೂಡೆಯ ಮಸ್ಜೀದ್ ಎ ಮುಆವಿಯಾ ಬಿನ್ ಅಬಿ ಸುಫಿಯಾನ್‌ನಲ್ಲಿ ರವಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಶೇಕ್ ಸನಾವುಲ್ಲಾಹ್ ಉಮ್ರಿ ನಝೀರಿ ಮಾತ ನಾಡಿ, ಇಸ್ಲಾಮಿನಲ್ಲಿ ನಶೆ ಭರಿಸುವ ಪ್ರತಿಯೊಂದು ವಸ್ತು ನಿಷಿದ್ಧವಾಗಿದ್ದು, ಪ್ರತಿಯೊಬ್ಬರು ಅದರಿಂದ ದೂರ ಇರಬೇಕು ಎಂದು ಹೇಳಿದರು.
ಡಾ.ಮುಹಮ್ಮದ್ ರಫೀಕ್ ಹೂಡೆ ಮದ್ಯ ವ್ಯಸನಿ ಯರನ್ನು ಹೇಗೆ ಅದರ ದಾಸತ್ವದಿಂದ ಮುಕ್ತಗೊಳಿಸಬಹುದು ಎಂಬ ವಿಷಯದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಹೂಡೆ ಇಸ್ಲಾಮಿಕ್ ದಾವಾ ಸೆಂಟರ್‌ನ ಅಧ್ಯಕ್ಷ ಕುದೂರ್ ಸೈಫುಲ್ಲಾ ವಹಿಸಿದ್ದರು. ಫೈಸಲ್ ಸುಲೈಮಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





