ಪ್ರಸ್ತಾವಿತ ರಾಯಚೂರು ವಿವಿಗೆ ವಿಶೇಷಾಧಿಕಾರಿಯಾಗಿ ಪ್ರೊ. ಮುಝಫರ್ ಅಸ್ಸಾದಿ

ಬೆಂಗಳೂರು, ಮಾ. 27: ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ವಿಭಜಿಸಿ ಹೊಸದಾಗಿ ಆರಂಭಿಸಲು ಪ್ರಸ್ತಾಪಿಸಲಾಗಿರುವ ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ಪ್ರೊ. ಮುಝಫರ್ ಅಸ್ಸಾದಿ ಅವರನ್ನು ನೇಮಿಸಲಾಗಿದೆ. ಅವರು ಪ್ರಸ್ತುತ ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರಾಗಿದ್ದಾರೆ.
ನೂತನ ರಾಯಚೂರು ವಿವಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸುವ ಉದ್ದೇಶದಿಂದ ವಿವಿ ಧನಸಹಾಯ ಆಯೋಗದ ಅರ್ಹತೆ ಮತ್ತು ಸೂಕ್ತತೆಯ ಮಾನ ದಂಡಗಳನ್ವಯ ಹಾಗು ಪ್ರಸ್ತಾವಿತ ವಿವಿಯ ಕಾರ್ಯಚಟುವಟಿಕೆಗಳ ಸಮನ್ವಯವನ್ನು ಸರ್ಕಾರದ ಹಂತದಲ್ಲಿ ಮತ್ತು ಇತರೆ ಪ್ರಾಧಿಕಾರಿಗಳ ಜೊತೆ ಸಾಧಿಸಲು ಅನುಕೂಲವಾಗುವಂತೆ ಈ ನೇಮಕ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
Next Story





