ಫೇಕ್ ನ್ಯೂಸ್ ವಿರುದ್ಧ ಸಮರ ಸಾರಿದ ಮಲೇಶ್ಯ
ಸುಳ್ಳು ಸುದ್ದಿಕೋರರಿಗೆ ಕಾದಿದೆ ಭಾರೀ ಶಿಕ್ಷೆ

ಕೌಲಾಲಂಪುರ, ಮಾ. 27: ಮಲೇಶ್ಯದ ಪ್ರಧಾನಿ ನಜೀಬ್ ರಝಾಕ್‌ರ ಸರಕಾರವು ಸೋಮವಾರ ‘ಸುಳ್ಳು ಸುದ್ದಿ’ಯನ್ನು ನಿಷೇಧಿಸುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಿದೆ.
ಸುಳ್ಳು ಸುದ್ದಿ ನಿಗ್ರಹ 2018 ಮಸೂದೆಯ ಪ್ರಕಾರ, ಯಾರಾದರೂ ಸುಳ್ಳು ಸುದ್ದಿ ಪ್ರಸಾರ ಮಾಡಿದರೆ ಅವರಿಗೆ 5 ಲಕ್ಷ ರಿಂಗಿಟ್ (ಸುಮಾರು 83 ಲಕ್ಷ ರೂಪಾಯಿ)ವರೆಗೆ ದಂಡ ಅಥವಾ 10 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಇವರೆಡನ್ನೂ ವಿಧಿಸಬಹುದಾಗಿದೆ.
ಬೃಹತ್ ಪ್ರಮಾಣದ ಭ್ರಷ್ಟಾಚಾರ ಹಗರಣವೊಂದರಲ್ಲಿ ಪ್ರಧಾನಿ ನಜೀಬ್ ಶಾಮೀಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ, ನೂತನ ಮಸೂದೆಯು ಪತ್ರಿಕಾ ಸ್ವಾತಂತ್ರದ ಬಗ್ಗೆ ಹೆಚ್ಚಿನ ಕಳವಳ ಹುಟ್ಟುಹಾಕಿದೆ.
ಇನ್ನು ಕೆಲವೇ ವಾರಗಳಲ್ಲಿ ಸಂಸತ್ತಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವ ಪಡೆದುಕೊಂಡಿದೆ.
Next Story





