ಬೆಂಗಳೂರು: ಯುವಕನಿಗೆ ಚಾಕುವಿನಿಂದ ಇರಿತ

ಬೆಂಗಳೂರು,ಮಾ.27: ಯುವತಿಯೊಬ್ಬಳನ್ನು ಪ್ರೀತಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಮಾಗಡಿ ರಸ್ತೆಯ ದಾಸರಹಳ್ಳಿ ಬಸ್‌ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ಗೋವಿಂದರಾಜ ನಗರದ ಅಕ್ಬರ್ ಅಲಿ ಎಂಬಾತನಿಗೆ ಚಾಕುವಿನಿಂದ ಇರಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆತನ ಸಹಚರರು ಮುಖಕ್ಕೆ ಪೆಪ್ಪರ್ ಸ್ಪ್ರೈ ಹಾಕಿ ಹಲ್ಲೆ ನಡೆಸಿ, ಮನಬಂದಂತೆ ಚುಚ್ಚಿ ಪರಾರಿಯಾಗಿದ್ದಾರೆ.
ಕಾರು ಚಾಲಕನಾಗಿದ್ದ ಅಕ್ಬರ್ ಅಲಿ ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರವಾಗಿ ಮತ್ತು ಬೈಕ್ ವೀಲಿಂಗ್ ವಿಚಾರವಾಗಿ ಗುಂಡ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಅದೇ ದ್ವೇಷದಲ್ಲಿ ಗುಂಡ ಗುಂಪು ಕಟ್ಟಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Next Story





