ಕಾವ್ಯಗಳಿಂದ ಮನುಷ್ಯ ಪ್ರೀತಿ ನೆಲೆಸಲಿ: ರೇಖಾ ಬನ್ನಾಡಿ

ಉಡುಪಿ, ಮಾ.27: ಕಾವ್ಯಗಳು ಸಮಾಜದಲ್ಲಿನ ತಲ್ಲಣಗಳನ್ನು ದೂರ ಮಾಡಿ ಸೌಹಾರ್ದತೆ ಹಾಗೂ ಮನುಷ್ಯ ಪ್ರೀತಿಯನ್ನು ಸ್ಥಾಪಿಸುವ ಕೆಲಸ ಮಾಡ ಬೇಕು ಎಂದು ಸಾಹಿತಿ ರೇಖಾ ಬನ್ನಾಡಿ ಹೇಳಿದ್ದಾರೆ.
ಉಡುಪಿ ರಂಗಭೂಮಿ, ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಅವರು ಕೃತಿ ಪರಿಚಯ ಮಾಡಿದರು.
ಸಮಾಜಮುಖಿ ಚಿಂತನೆ ಮಾಡುವ ಕವಿಗೆ ಕಾವ್ಯ ರಚನೆಗೆ ವಸ್ತು ಮುಖ್ಯ ವಾಗುವುದಿಲ್ಲ. ಸಂಕೀರ್ಣ ಸಮಾಜವನ್ನು ಬಿಂಬಿಸಲು ಕಾವ್ಯದ ಶಕ್ತಿ ಜೊತೆ ಪದ ಸಂಪತ್ತು ಕೂಡ ಮುಖ್ಯವಾಗುತ್ತದೆ. ಅನುಭವ ಸಜೀವ ಆಗಿರಬೇಕು. ಆಗ ಮಾತ್ರ ಕವಿತೆಗೆ ಶಕ್ತಿ ಬಂದು ಶಕ್ತವಾಗಲು ಸಾಧ್ಯ. ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ರಂಗ ಕಲಾವಿದ ಅರಸೀಕೆರೆ ಚಾಂದ್‌ಬಾಷಾ ಅವರ ಚಿತ್ತ ಚಿತ್ತಾರ ಮತ್ತು ಬಹುರೂಪಿ ಪ್ರೀತಿ ಕವನ ಸಂಕಲನಗಳನ್ನು ರಂಗಭೂಮಿ ಗೌರವಾಧ್ಯಕ್ಷ ಡಾ. ಎಚ್.ಶಾಂತಾರಾಮ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹಿರಿಯ ರಂಗನಟ, ನಿರ್ದೇಶಕ ಲಕ್ಷ್ಮೀನಾರಾಯಣ ಭಟ್‌ರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು, ಕಾಲೇಜಿನ ಪ್ರಾಂಶುಪಾಲ ಸಂಧ್ಯಾ ನಂಬಿಯಾರ್, ಕೃತಿಕಾರ ಅರಸೀ ಕೆರೆ ಚಾಂದ್ ಬಾಷಾ ಉಪಸ್ಥಿತರಿದ್ದರು.
ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಪಾಧ್ಯಕ್ಷ ನಂದಕುಮಾರ್ ಸ್ವಾಗತಿಸಿದರು. ವಿವೇಕಾ ನಂದ ರಂಗಭೂಮಿ ಸಂದೇಶ ವಾಚಿಸಿದರು. ಮೇಟಿ ಮುದಿಯಪ್ಪ ಕೃತಿಕಾರರ ಪರಿಚಯ ಮಾಡಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಬೆಂಗಳೂರು ಮನೋರಂಗದಿಂದ ‘ಎಚ್ಚರಿಕೆ’ ನಾಟಕ ಪ್ರದರ್ಶನ ಗೊಂಡಿತು.







