ಸಿದ್ದರಾಮಯ್ಯರ ಮೇಲಾಣೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಸಂಸದ ಪ್ರಹ್ಲಾದ್ ಜೋಷಿ

ಶಿವಮೊಗ್ಗ, ಮಾ. 27: ಸಿಎಂ ಸಿದ್ದರಾಮಯ್ಯರವರ ಮೇಲಾಣೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ ಸಿದ್ದರಾಮಯ್ಯ ಅವರ ಹಾಗೆ ತಾನು ಮರ್ಯಾದೆ ಬಿಟ್ಟು ಮಾತನಾಡುವುದಿಲ್ಲ. ಇನ್ನೊಬ್ಬರ ತಂದೆ, ಮತ್ತೋರ್ವರ ಮೇಲೆ ಆಣೆ-ಪ್ರಮಾಣ ಮಾಡುವ ಜಾಯಮಾನದವರಲ್ಲ. ಆದರೆ ಒಂದಂತೂ ಸತ್ಯ. ಸಿದ್ದರಾಮಯ್ಯ ಅವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಅಮಿತ್ ಶಾರವರ ನೇತೃತ್ವದಲ್ಲಿ ಬಿಜೆಪಿ ದೇಶಾದ್ಯಂತ ದಿಗ್ವಿಜಯ ಯಾತ್ರೆ ನಡೆಸುತ್ತಿದೆ. ಎಲ್ಲಾ ರಾಜ್ಯದಲ್ಲೂ ಬಿಜೆಪಿ ಆಡಳಿತ ಗದ್ದುಗೆ ಏರುತ್ತಿದೆ. ಈ ಯಾತ್ರೆ ಕರ್ನಾಟಕದಲ್ಲೂ ಮುಂದುವರೆಯಲಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ ಎಂದರು.
Next Story





