ಅಕ್ರಮ ಮರಳುಗಾರಿಕೆ: ಜೆಸಿಬಿ ಚಾಲಕ ಬಂಧನ
ಬ್ರಹ್ಮಾವರ, ಮಾ.27: ಹಲುವಳ್ಳಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಮಾ.26ರಂದು ರಾತ್ರಿ 9.20ರ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಜೆಸಿಬಿ ಚಾಲಕ ಸೇರಿ ದಂತೆ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಭೂ ವಿಜ್ಞಾನಿ ಮಹೇಶ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾ ಚರಣೆ ನಡೆಸಿ ಮರಳುಗಾರಿಕೆಗೆ ಬಳಸುವ ಯಾಂತ್ರೀಕೃತ ದೋಣಿ ಸೇರಿದಂತೆ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಜೆಸಿಬಿ ಚಾಲಕ ವಿಜಯ ರಾಥೋಡ್ ಎಂಬಾತನನ್ನು ಬಂಧಿಸಿದ್ದಾರೆ. ಸೊತ್ತುಗಳ ಒಟ್ಟು ವೌಲ್ಯ 19,84,600ರೂ. ಎಂದು ಅಂದಾಜಿಸಲಾಗಿದೆ.
ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ರಾಮದಾಸ ಪೈ, ಸುಜಿತ್ ಹೆಗ್ಡೆ, ದಿನೇಶ್ ಹೆಗ್ಡೆ, ಧರ್ಮ, ಕೃಷ್ಣ ಕುಲಾಲ್, ಉದಯ ಕುಮಾರ್ ಎಂಬವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





