ಮಾ.30: ಎಣ್ಮೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿ ನೇಮೋತ್ಸವ
ಮಂಗಳೂರು, ಮಾ. 27: ಸುಮಾರು 5 ಶತಮಾನಗಳ ಇತಿಹಾಸರುವ ಎಣ್ಮೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿಯ ನೇಮೋತ್ಸವವು ಪ್ರತಿ ವರ್ಷದಂತೆ ಈ ಬಾರಿ ಮಾ.30ರಂದು ನಡೆಯಲಿದೆ.
ಅಜಿಪತ್ತಾಜಿ ಗರಡಿ ಮುಪ್ಪತ್ತಮೂಜಿ ತಾವು ಮೇಲಾಯಿ ಗರಡಿ ಎಣ್ಮೂರು ಗರಡಿ (ಆರುವತ್ತಾರು ಗರಡಿ ಮೂವತ್ತ ಮೂರು ಕಡೆ ನೆಲೆ ಊರಿದ ) ಎಂಬ ನುಡಿಗಟ್ಟಿನಂತೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನೆಲೆಯೂರಿದ ಆದಿ ಸ್ಥಳ - ಆದಿ ಗರಡಿ ಎಣ್ಮೂರು ಇತಿಹಾಸ ಪ್ರಸಿದ್ಧವಾಗಿದೆ.
ಅಂದು ಬೆಳಗ್ಗೆ 8 ಗಂಟೆಗೆ ನಾಗ ತಂಬಿಲ, 9 ಗಂಟೆಗೆ ಮುಹೂರ್ತ ತೋರಣ, ಮಧ್ಯಾಹ್ನ 1 ಗಂಟೆಗೆ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಡುವುದು, ರಾತ್ರಿ 8 ಗಂಟೆಗೆ ಬೈದೇರುಗಳು ಗರಡಿ ಇಳಿಯುವುದು. ರಾತ್ರಿ 2:30ಕ್ಕೆ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ, ಬೆಳಗ್ಗೆ 4 ಗಂಟೆಗೆ ಎಣ್ಮೂರು ಕಟ್ಟ ಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸುವುದು, ಬೆಳಗ್ಗೆ 6 ಗಂಟೆಗೆ ಕೋಟಿ ಚೆನ್ನಯ ದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





