ಮಾದಕ ದ್ರವ್ಯ ಕಳ್ಳಸಾಗಣೆ: 3 ಭಾರತೀಯರಿಗೆ ಜೈಲು

ಲಂಡನ್, ಮಾ. 27: ಪಾಕಿಸ್ತಾನ, ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ಸುಮಾರು 10 ಮಿಲಿಯ ಪೌಂಡ್ (ಸುಮಾರು 90 ಕೋಟಿ ರೂಪಾಯಿ) ಬೆಲೆಯ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿ ಬ್ರಿಟನ್‌ನಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಮೂವರು ಭಾರತೀಯರು ಸೇರಿದಂತೆ ಐವರಿಗೆ ಒಟ್ಟು 95 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಈ ವ್ಯಕ್ತಿಗಳು ಲೀಸೆಸ್ಟರ್‌ನಲ್ಲಿರುವ ಸಂಘಟಿತ ಅಪರಾಧ ಗುಂಪೊಂದಕ್ಕೆ ಸೇರಿದವರಾಗಿದ್ದಾರೆ. ಅವರು ಪೀಠೋಪಕರಣಗಳು, ಕೈಗಾರಿಕಾ ಬೋಲ್ಟ್‌ಗಳು ಮತ್ತು ಬಟ್ಟೆಗಳಲ್ಲಿ ಅಡಗಿಸಿ ಹೆರಾಯಿನ್ ಮತ್ತು ಕೊಕೇನ್‌ಗಳನ್ನು ಈ ಮೂರು ದೇಶಗಳಿಂದ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಅವರ ವೈಯಕ್ತಿಕ ಜೈಲು ಶಿಕ್ಷೆ ಅವಧಿ 18 ವರ್ಷಗಳಿಂದ 25 ವರ್ಷಗಳವರೆಗಿದೆ.
Next Story





