ಝುಕರ್‌ಬರ್ಗ್ ಬ್ರಿಟನ್ ಸಂಸತ್ತಿಗೆ ಹೋಗುವುದಿಲ್ಲ

ಲಂಡನ್, ಮಾ. 27: ಫೇಸ್‌ಬುಕ್ ಮಾಹಿತಿಗಳ ದುರ್ಬಳಕೆಗಾಗಿ ಹಲವಾರು ದೇಶಗಳಲ್ಲಿ ಆಕ್ರೋಶಕ್ಕೆ ತುತ್ತಾಗಿರುವ ಅದರ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್, ಬ್ರಿಟಿಷ್ ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗದಿರಲು ನಿರ್ಧರಿಸಿದ್ದಾರೆ.
ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಪಡೆದು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ, ತನ್ನೆದುರು ಹಾಜರಾಗುವಂತೆ ಬ್ರಿಟಿಷ್ ಸಂಸದೀಯ ಸಮಿತಿಯು ಝುಕರ್‌ಬರ್ಗ್‌ಗೆ ಸಮನ್ಸ್ ನೀಡಿತ್ತು.
ಬದಲಿಗೆ, ತನ್ನ ಇಬ್ಬರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳ ಪೈಕಿ ಒಬ್ಬರನ್ನು ಬ್ರಿಟನ್ ಸಂಸತ್ತಿಗೆ ಕಳುಹಿಸಲು ಅವರು ನಿರ್ಧರಿಸಿದ್ದಾರೆ.
Next Story





