Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಜುಬೈಲ್: ಸಾಬ್ ವಾರಿಯರ್ಸ್ ಮಡಿಲಿಗೆ...

ಜುಬೈಲ್: ಸಾಬ್ ವಾರಿಯರ್ಸ್ ಮಡಿಲಿಗೆ 'ಹಿದಾಯ ಸಾಖೊ ಚಾಂಪಿಯನ್ಸ್ ಟ್ರೋಫಿ 2018'

ವಾರ್ತಾಭಾರತಿವಾರ್ತಾಭಾರತಿ28 March 2018 6:03 PM IST
share
ಜುಬೈಲ್: ಸಾಬ್ ವಾರಿಯರ್ಸ್ ಮಡಿಲಿಗೆ ಹಿದಾಯ ಸಾಖೊ ಚಾಂಪಿಯನ್ಸ್ ಟ್ರೋಫಿ 2018

ಜುಬೈಲ್, ಮಾ. 28: ಹಿದಾಯ ಸಾಖೊ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ನಿರ್ಣಾಯಕ ಪಂದ್ಯವು ಸಾಬ್ ವಾರಿಯರ್ಸ್ ಮತ್ತು ಖೋಬರ್ ಯುನೈಟೆಡ್ ಮಧ್ಯೆ ಶುಕ್ರವಾರ ದೈವಿಡಗ್ ಮೈದಾನದಲ್ಲಿ ನಡೆಯಿತು.

ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಅಹರ್ನಿಶಿ ಪಂದ್ಯವನ್ನು ಸಾವಿರಾರು ಕ್ರಿಕೆಟ್ ಪ್ರೇಮಿಗಳು ಹಾಗೂ ತಂಡಗಳ ಬೆಂಬಲಿಗರು ವೀಕ್ಷಿಸಿದರು. ಕುತೂಹಲ ಕೆರಳಿಸಿದ್ದ ಅಂತಿಮ ಹಣಾಹಣಿಯಲ್ಲಿ ಸಾಬ್ ವಾರಿಯರ್ಸ್ ತಂಡ ಖೋಬರ್ ಯುನೈಟೆಡ್ ತಂಡವನ್ನು ಮಣಿಸುವ ಮೂಲಕ ಚಾಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿತು.

ಹಿದಾಯ ಪ್ರತಿಷ್ಠಾನದ ಮುಖ್ಯಸ್ಥರಾದ ಝಕರಿಯಾ ಜೋಕಟ್ಟೆ, ಮುಖ್ಯ ಪ್ರಾಯೋಜಕರಾದ ಅಲ್ತಾಫ್ ಸಾಖೊ, ಹಿದಾಯ ಮುಖ್ಯ ಕಚೇರಿಯ ತಂಡ, ಅತಿಥಿಗಳು ಮತ್ತು ಪ್ರೇಕ್ಷಕರು ಈ ಸಂದರ್ಭ ಉಪಸ್ಥಿತರಿದ್ದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಾಬ್ ವಾರಿಯರ್ಸ್ ನಿಗದಿತ ಎಂಟು ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 96 ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಖೋಬರ್ ಯುನೈಟೆಡ್ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ  83 ರನ್‌ಗಳನ್ನಷ್ಟೇ ಮಾಡಲು ಶಕ್ತವಾಯಿತು. ಅಂತಿಮವಾಗಿ ಸಾಬ್ ವಾರಿಯರ್ಸ್ 13 ರನ್‌ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಹಿದಾಯ ಸಾಖೊ ಚಾಂಪಿಯನ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವಾರಿಯರ್ಸ್‌ನ ತ್ವಯ್ಯೂಬ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಎರಡು ವಾರಗಳ ಕಾಲ ನಡೆದ ಹಿದಾಯ ಸಾಖೊ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿಗೆ ಸಾಖೊ ಅವರು ಮುಖ್ಯ ಪ್ರಾಯೋಜಕರಾಗಿದ್ದರು. ಇವರ ಜೊತೆಗೆ ಪ್ಲಾಂಟ್ ಸೊಲ್ಯೂಶನ್ಸ್, ಟ್ರೈಡೆಂಟ್, ಸಸ್ಕೊ, ರೂಫ್ ಟೆಕ್, ಸನೈವೇಟ್, ಟೊಕೋಮ್ಸ್, ಎನರ್ಜಿಯಾ, ಎಕ್ಸೆಲೊನ್, ಕೆಎಂಟಿ, ಯುನೈಟೆಡ್ ಟೆಕ್, ಟೇಬಲ್4, ಫಾಬ್ರ್‌ಟೆಕ್, ಅಲ್ಬಟಿನ್, ಕೊಟೆಕ್, ಅರಬ್ ಎನರ್ಜಿ, ಬ್ಲೂಮಾರ್ಟ್, ಸಾಬ್, ಫೇಸ್, ಅಮಾಕೊ, ಸ್ಪಾರ್ಕ್ ಅರೇಬಿಯಾ, ಸ್ಪೆಕ್ಟ್ರಮ್, ಇ ಲಾಂಜ್, ಸಾಮ್ಕೆನ್, ಗಲ್ಫ್ ಏಷ್ಯಾ ಮತ್ತು ಡೀಲ್ ಅರೇಬಿಯಾ ಸಹಪ್ರಾಯೋಜಕರಾಗಿದ್ದರು.

ಎಕ್ಸ್‌ಪರ್ಟೈಸ್, ಅಲ್-ಮುಝೈನ್, ವೈಟ್ ಸ್ಟೋನ್ ಮತ್ತು ರಿಯಲ್ ಟೆಕ್ ಈ ಕ್ರಿಕೆಟ್ ಪಂದ್ಯಾವಳಿ ಜೊತೆ ಕೈಜೋಡಿಸಿದ್ದವು. ಹಿದಾಯ ಯುವ ಜಾಗತಿಕ ಸಮನ್ವಯಕಾರರಾದ ಮಾಸ್ಟರ್ ದಾನಿಶ್ ಮುಹಮ್ಮದ್ ಹನೀಫ್ ಕುರ್ ಆನ್ ಪಠಣ ಮಾಡುವ ಮೂಲಕ ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ನಂತರ ಹಿದಾಯ ಪ್ರತಿಷ್ಠಾನದ ಮುಖ್ಯ ಸಲಹೆಗಾರರಾದ ಆಸಿಫ್ ಡೀಲ್ಸ್, ಪ್ರತಿಷ್ಠಾನದ ಬಗ್ಗೆ ಮಾಹಿತಿ ನೀಡಿದರು ಮತ್ತು ಅತಿಥಿಗಳನ್ನು ವೇದಿಕೆಯ ಮೇಲೆ ಆಹ್ವಾನಿಸಿದರು. ಈ ವೇಳೆ ಹಿದಾಯ ಪ್ರತಿಷ್ಠಾನದ ಸಾಮಾಜಿಕ ಚಟುವಟಿಕೆಗಳ ಕುರಿತ ಸಾಕ್ಷ್ಯ  ಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರತಿಷ್ಠಾನದ ಸ್ಥಾಪಕ ಮುಖ್ಯಸ್ಥ ಖಾಸಿಮ್ ಅಹ್ಮದ್ ಎಚ್.ಕೆ. ವಂದಿಸಿದರು. ಮುಖ್ಯಸ್ಥರಾದ ಝಕರಿಯಾ ಜೋಕಟ್ಟೆ ಆಟಗಾರರನ್ನು ಹುರಿದುಂಬಿಸಿದರು ಮತ್ತು ಈ ಪಂದ್ಯಾವಳಿಯ ಯಶಸ್ಸಿಗಾಗಿ ಶ್ರಮಿಸಿದ ಹಿದಾಯ ಜುಬೈಲ್ ವಿಭಾಗದ ಅಧ್ಯಕ್ಷ ಇಮ್ರಾನ್ ಸೇರಿದಂತೆ ಆಸಿಫ್ ಡೀಲ್ಸ್, ನಝೀರ್, ಶಹಜಹಾನ್, ಸಮೀರ್, ಫಾರೂಕ್, ಖಲೀಲ್, ಬಶೀರ್, ಸತ್ತಾರ್ ಹಾಗೂ  ಹಿದಾಯ ಸಂಸ್ಥೆಗೆ ವಂದಿಸಿದರು.

ಇದೇ ವೇಳೆ ಅರಬ್ ನಾಡಿನಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವ ಭಾರತೀಯರಿಗೆ ನೆರವನ್ನು ನೀಡಿದ ಮತ್ತು ಭಾರತದಲ್ಲಿ ನೆಲೆಸಿರುವ ಬಡಜನರಿಗೆ ಸಹಾಯಹಸ್ತ ಚಾಚಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ದಾಸ್ ಪೂಜಾರಿಯವರನ್ನು ಅಲ್ತಾಫ್ ಸಾಖೊ ಮತ್ತು ಝಕರಿಯಾ ಜೋಕಟ್ಟೆ ಸನ್ಮಾನಿಸಿದರು. ಅಶ್ರಫ್ ಕರ್ನಿರೆ ಎಕ್ಸ್‌ಪರ್ಟೈಸ್ ಅವರನ್ನು ಅಲ್ತಾಫ್ ಸಾಖೊ, ಝಕರಿಯಾ ಜೋಕಟ್ಟೆ, ಖಾಸಿಮ್ ಅಹ್ಮದ್ ಮತ್ತು ಹನೀಫ್ ಹಾಜಿ ಸನ್ಮಾನಿಸಿದರು. ಝಕರಿಯಾ ಜೋಕಟ್ಟೆ ಅವರನ್ನು ಅಶ್ರಫ್ ಕರ್ನಿರೆ ಎಕ್ಸ್‌ಪರ್ಟೈಸ್, ಅಲ್ತಾಫ್ ಸಾಖೊ, ಖಾಸಿಮ್ ಅಹ್ಮದ್ ಮತ್ತು ಹನೀಫ್ ಹಾಜಿ ಸನ್ಮಾನಿಸಿದರು.

ಹನೀಫ್ ಹಾಜಿ ಅವರನ್ನು ಇಮ್ರಾನ್ ಹರ್ಟ್ಸ್, ಝಕರಿಯಾ ಜೋಕಟ್ಟೆ ಮತ್ತು ಖಾಸಿಮ್ ಅಹ್ಮದ್ ಎಚ್.ಕೆ. ಸನ್ಮಾನಿಸಿದರು. ಆಬಿದ್ ಅಸ್ಗರ್ ಅವರನ್ನು ಆಸಿಫ್ ಡೀಲ್ಸ್ ಮತ್ತು ಶಹಜಹಾನ್ ಸನ್ಮಾನಿಸಿದರು. ಹೈದರ್ ಯುನೈಟೆಡ್ ಟೆಕ್, ಆಬಿದ್ ಗಲ್ಫ್ ಕಾಲಮ್, ಅಶ್ಕಫ್ ಪ್ಲಾಂಟ್ ಸೊಲ್ಯೂಶನ್ಸ್, ಶಾಹುಲ್ ಖಾನ್ಬರ್ಗ್, ತಾಹಿರ್ ಕೋಲ್ಟೆಕ್, ಸಲ್ಮಾನ್ ಸಾಬ್, ಹಬೀಬ್ ಸ್ಪಾರ್ಕ್ ಅರೇಬಿಯಾ, ಶಕೀಲ್ ಮಕವಿ, ಅಮ್ಜದ್ ಹಿದಯಾ ದಮ್ಮಾಮ್, ಅನ್ವರ್ ಹಿದಾಯ ದಮ್ಮಾಮ್, ಜಮಿಯಾತುಲ್ ಫಲಾಹ್‌ನ ಫಾರೂಕ್, ನೂರ್ ಮುಹಮ್ಮದ್ ಡಿಕೆಎಸ್‌ಸಿ, ಉಮರ್ ಫಾಬ್ರೊಟೆಕ್, ದಾಸ್ ಪೂಜಾರಿ, ಫಿರೋಝ್ ಜೆದ್ದಾ ರೆಸ್ಟೊರೆಂಟ್, ಸಿದ್ದಿಕ್ ಮಿರ್ಝಾ, ಅಶ್ರಫ್ ಇಂಡಿಯನ್ ಸೋಶಿಯಲ್ ಫಾರಂ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪರವಾಗಿ ಅತಿಥಿಗಳನ್ನು ಹಿದಾಯ ಪ್ರತಿಷ್ಠಾನದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅವರ ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಹಿದಾಯ ಪ್ರತಿಷ್ಠಾನದ ಜುಬೈಲ್ ವಿಭಾಗದ ಕಾರ್ಯಕರ್ತರಾದ ಸತ್ತಾರ್, ಸಮೀರ್ ಹಾಗೂ ಶಕೀರ್ ಅವರನ್ನು ಕೂಡಾ ಗೌರವಿಸಲಾಯಿತು. ಖಲೀಲ್ ಎಂ.ಕೆ., ಸಮೀರ್ ಲಕ್ಕಿಸ್ಟಾರ್ ಹಾಗೂ ಶಹಜಹಾನ್ ಪ್ರಶಸ್ತಿಗಳನ್ನು ವಿತರಿಸಿದರು ಮತ್ತು ರ್ಯಾಫಲ್ ಡ್ರಾ ನೆರವೇರಿಸಿದರು. ಈ ಡ್ರಾದಲ್ಲಿ ಕೇರಳದ ರಾಜೇಶ್, ಮೂಡಿಗೆರೆಯ ಫಾರೂಕ್ ಮತ್ತು ಮಂಗಳೂರಿನ ಅನ್ಸಿಫ್ ಬಹುಮಾನವನ್ನು ಗೆದ್ದುಕೊಂಡರು.

ಪಂದ್ಯಾವಳಿಯ ತೀರ್ಪುಗಾರರು, ವೀಕ್ಷಕ ವಿವರಣೆಗಾರ ಸಫ್ವಾನ್, ಮೈದಾನ ಮತ್ತು ತಂಡಗಳಿಗೆ ಸರಿಯಾದ ವ್ಯವಸ್ಥೆಯನ್ನು ಮಾಡಿದ ನಝೀರ್ ಹರ್ಟ್ಸ್, ಇಬ್ಬ ಬಜ್ಪೆ, ಫಾರೂಕ್ ಮತ್ತು ಸಲೀಮ್ ಉಡುಪಿ, ಸ್ಕೋರ್ ಬೋರ್ಡ್ ನಿಭಾಯಿಸಿದ ಜುನೈದ್, ಜವಾದ್, ಶಕೀರ್, ತಫ್ಸೀರ್ ಹಾಗೂ ಶಹಜಹಾನ್, ಸಾರಿಗೆ ವ್ಯವಸ್ಥೆ ನೋಡಿಕೊಂಡ ಆರಿಫ್ ಸಸ್ಕೊ, ಬಶೀರ್ ಫಲಕ್, ಮುಸ್ತಫಾ ಸಸ್ಕೊ, ಹಾಗೂ ಫಾರೂಕ್ ಅರಬ್ ಎನರ್ಜಿ, ಫೋಟೊಗ್ರಾಫರ್ ನಝೀರ್ ಕಾಲೂರ್, ಮೈದಾನ ಸಿಬ್ಬಂದಿ ರಶೀದ್, ಜೋಗೆಂದರ್, ಯಾದವ್ ಮತ್ತು ಶ್ಯಾಮಪ್ರಸಾದ್, ದೈವಿಡಗ್‌ನ ಭದ್ರತಾ ಸಿಬ್ಬಂದಿ ಇಫ್ತಿಕಾರ್ ಮತ್ತು ಹುಸೈನ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅಮಾಕೊ ತಂಡದ ಸಲೀಮ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಸಾಬ್ ವಾರಿಯರ್ಸ್‌ನ ಅಶ್ಫಕ್-ಉತ್ತಮ ಎಸೆತಗಾರ, ಯುನೈಟೆಡ್ ಖೋಬರ್‌ನ ಅನಿಸ್ ಉತ್ತಮ ದಾಂಡಿಗ, ಸಾಬ್ ವಾರಿಯರ್ಸ್‌ನ ಫೈಝಲ್ ಉತ್ತಮ ಕ್ಷೇತ್ರ ರಕ್ಷಕ ಹಾಗೂ ಸಾಬ್ ವಾರಿಯರ್ಸ್‌ನ ಇಮ್ತಿಯಾಝ್ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X