ರಜಾ ದಿನ: ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನ
ಮಂಗಳೂರು, ಮಾ. 28: ಗುರುವಾರ ಮತ್ತು ಶುಕ್ರವಾರ ಮಹಾವೀರ ಜಯಂತಿ ಮತ್ತು ಗುಡ್‌ಫ್ರೈಡೆ ರಜಾದಿನಗಳಾಗಿರುವುದರಿಂದ ಪಿಲಿಕುಳದ ಸಂದರ್ಶಕರಿಗೆ ಅನುಕೂಲವಾಗುವಂತೆ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
‘ವಿ ಆರ್ ಸ್ಟಾರ್ಸ್’ ಎಂಬ ಪ್ರದರ್ಶನ ಚಾಲ್ತಿಯಲ್ಲಿದ್ದು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಭಿತ್ತರಗೊಳ್ಳುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6:30ಕ್ಕೆ ಪ್ರದರ್ಶನಗಳು ನಡೆಯುತ್ತದೆ. ಸಂದರ್ಶಕರು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





