ಬೇಸಿಗೆ ಚೆಸ್ ತರಬೇತಿ ಶಿಬಿರ
ಉಡುಪಿ, ಮಾ.28: ಮಂಗಳೂರು ಮತ್ತು ಉಡುಪಿಯ ಡೆರಿಕ್ ಚೆಸ್ ಸ್ಕೂಲಿನ ವತಿಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿವೆ.
ಈ ಶಿಬಿರಗಳಲ್ಲಿ ಆರಂಭಿಕ, ಮಾಧ್ಯಮಿಕ ಹಾಗೂ ಪ್ರೌಢ ಹಂತಗಳಲ್ಲಿ ತರಬೇತಿ ಪಡೆಯುವ ಅವಕಾಶವಿದ್ದು, ಎ.2ರಿಂದ ಪ್ರಥಮ ಹಂತದ ಶಿಬಿರ ಪ್ರಾರಂಭ ಗೊಳ್ಳಲಿದೆ. ಮಂಗಳೂರಿನ ಎಂಜಿ ರೋಡ್ (0824-4277273) ಹಾಗೂ ಉಡುಪಿ ಕುಂಜಿಬೆಟ್ಟು (0820-4295749) ಡೆರಿಕ್ ಚೆಸ್ ಸ್ಕೂಲ್ ನಲ್ಲಿ ಆಸಕ್ತರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಡೆರಿಕ್ ಚೆಸ್ ಸ್ಕೂಲ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





