ಗಂಗೊಳ್ಳಿ: ತಾಯಿ ಮಗು ಸಹಿತ ಮೂವರು ನಾಪತ್ತೆ
ಗಂಗೊಳ್ಳಿ, ಮಾ.28: ಬೈಂದೂರು ಪಡುವರಿಯ ಭಾಗೀರಥಿ ಎಂಬವರ ಮಗಳು ಪೂಜಿತಾ (25) ಮಾ.27ರಂದು ಬೆಳಗ್ಗೆ ತನ್ನ ಗಂಡನ ಮನೆಯಾದ ಗಂಗೊಳ್ಳಿಯ ರಾಮ ಮಂದಿರ ಎಂಬಲ್ಲಿಂದ ಮಗ ರತನ್(2) ಜೊತೆ ಬೈಂದೂರಿನಲ್ಲಿರುವ ತನ್ನ ತವರು ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಮಧುಮೇಹ, ರಕ್ತದೊತ್ತಡ ಹಾಗೂ ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದ ಶಿರ್ವ ಗ್ರಾಮದ ಪಂಜಿಮಾರು ಮಾನಡ್ಕದ ನಿವಾಸಿ ಭಾಸ್ಕರ ಹೆಗ್ಡೆ (78) ಎಂಬವರು ಮಾ. 21ರಂದು ಬೆಳಗ್ಗೆ ಕಟಪಾಡಿಗೆ ಔಷಧಿಗೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





