ಬೆಂಗಳೂರು: ಮುಂದುವರೆದ ಭಿತ್ತಿಪತ್ರ, ಬ್ಯಾನರ್ ತೆರವು ಕಾರ್ಯಾಚರಣೆ
ಬೆಂಗಳೂರು, ಮಾ.28: ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣದಿಂದ ನಗರದೆಲ್ಲೆಡೆ ಅಳವಡಿಸಲಾಗಿದ್ದ ವಿವಿಧ ಪಕ್ಷಗಳ ಭಿತ್ತಿ ಪತ್ರ, ಬ್ಯಾನರ್‌ಗಳ ತೆರವು ಕಾರ್ಯಾಚರಣೆ ಇಂದು ಕೂಡಾ ಮುಂದುವರೆಯಿತು.
ನಗರದ ಹಲವಾರು ಕಡೆಗಳಲ್ಲಿ ಭಿತ್ತಿಪತ್ರ, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಬಿಬಿಎಂಪಿ ಸಿಬ್ಬಂದಿ ಎಡಬಿಡದೆ ಬ್ಯಾನರ್‌ಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಈಗಾಗಲೆ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಿದೆ.
ನಗರದ ಸುಮನಹಳ್ಳಿ ಮೇಲ್ಸೇತುವೆಯ ಮೇಲೆ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಪ್ರಯಾಸಪಟ್ಟರು. ಈ ವೇಳೆ ಕಿಲೋಮೀಟರ್ ಗಟ್ಟಲೆ ವಾಹನ ದಟ್ಟಣೆ ಕಂಡು ಬಂತು. ಮೇಲ್ಸೇತುವೆಯ ಮೇಲಿದ್ದ ಯಾವ ಬ್ಯಾನರ್‌ಗಳನ್ನು ಬಿಡದೆ ತೆರವುಗೊಳಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು.
Next Story





