ಶತ್ರುಘ್ನ ಸಿನ್ಹಾ ಬಿಜೆಪಿ ತ್ಯಜಿಸಲಿದ್ದಾರೆಯೇ ?

ಹೊಸದಿಲ್ಲಿ, ಮಾ. 28: ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ರೂಪುಗೊಂಡ ದಿನದಿಂದ ನನ್ನಂತಹ ನಾಯಕರರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯ ಅಸಂತುಷ್ಠ ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿ ತ್ಯಜಿಸುವ ಸೂಚನೆ ನೀಡಿದ್ದಾರೆ.
ಆದರೆ, ತಾನು ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಪಾಟ್ನಾ ಸಾಹಿಬ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘‘ಇತರ ಪಕ್ಷಗಳಿಂದ ನನಗೆ ಆಹ್ವಾನ ಬಂದಿದೆ. ಆದರೆ, ನಾನು ನನ್ನ ಪಕ್ಷ ಅಥವಾ ಇತರ ಪಕ್ಷ ಅಥವಾ ಪಕ್ಷೇತರನಾಗಿ ಸೇವೆ ಸಲ್ಲಿಸುತ್ತೇನೆ. ಅದು ಮುಖ್ಯವಲ್ಲ್ಲ’’ ಎಂದು ಅವರು ಹೇಳಿದ್ದಾರೆ. ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂದು ಈ ಹಿಂದಿನ ಚುನಾವಣೆ ಸಂದರ್ಭ ವದಂತಿ ಹಬ್ಬಿತ್ತು. ಆದರೆ, ನನಗೆ ಟಿಕೆಟ್ ಸಿಕ್ಕಿತ್ತು (2004). ಅದೇ ಸ್ಥಾನಕ್ಕೆ ಕೊನೆ ಘಳಿಗೆಯಲ್ಲಿ ನನ್ನ ಹೆಸರು ಘೋಷಿಸಲಾಗಿತ್ತು. ಈಗ ನಾನು ಮತ್ತೆ ಇದೇ ವದಂತಿ ಕೇಳಬೇಕಾಗಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
Next Story





