ವಿವಿಧೆಡೆ ಪೊಲೀಸ್ ದಾಳಿ: ಆರೋಪಿಗಳ ಬಂಧನ
ಜುಗಾರಿ, ಮಟ್ಕಾ
ಮಂಗಳೂರು, ಮಾ. 28: ಸಿಸಿಬಿ ಪೊಲೀಸ್ ತಂಡ ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ದಾಳಿ ನಡೆಸಿ ಮಟ್ಕಾ ನಿರತನಾಗಿದ್ದ ಆರೋಪಿ ಕಾಸರಗೋಡಿನ ಅಬ್ದುಲ್ ಕರೀಂ (48) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತನಿಂದ 2,780 ನಗದು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಉರ್ವ ಠಾಣಾ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸಂಕೈಗುಡ್ಡೆ ಬಳಿ ದಾಳಿ ನಡೆಸಿ ಅಂದರ್ ಬಾಹರ್ ಆಟವಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 11 ಮೊಬೈಲ್ ಫೋನ್ ಹಾಗೂ 48,000 ರೂ. ನಗದು ವಶಕ್ಕೆ ಪಡೆದಿದ್ದಾರೆ.ನಗರದ ಹೊಟೇಲ್‌ವೊಂದಕ್ಕೆ ದಾಳಿ ನಡೆಸಿದ ಉತ್ತರ ಪೊಲೀಸ್ ಠಾಣಾ ಎಸ್‌ಐ ನೇತೃತ್ವದ ತಂಡ ಹೊಟೇಲ್ ಕೊಠಡಿಯಲ್ಲಿ ಅಂದರ್ ಬಾಹರ್ ಆಟದಲ್ಲಿ ನಿರತರಾಗಿದ್ದ 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 12,600 ನಗದು ವಶಕ್ಕೆ ಪಡೆದಿದ್ದಾರೆ.
Next Story





