ಮಾ. 31: ಬೋಳಂತೂರಿನಲ್ಲಿ ಮಹಿಳಾ ವಿದ್ಯಾಸಂಸ್ಥೆಯ ಶಿಲಾನ್ಯಾಸ

ಬಂಟ್ವಾಳ, ಮಾ. 28: ದಾರುಲ್ ಉಲೂಂ ಎಜುಕೇಶನ್ ಅಕಾಡಮಿ ಕರ್ನಾಟಕ ಇದರ ಧಾರ್ಮಿದ ಹಾಗೂ ಲೌಕಿಕ ಸಮನ್ವಯ ಮಹಿಳಾ ವಿದ್ಯಾಸಂಸ್ಥೆಯ ಶಿಲಾನ್ಯಾಸ ಕಾರ್ಯಕ್ರಮ ಮಾ. 31ರಂದು ಬೆಳಿಗ್ಗೆ 9.30ಕ್ಕೆ ತಾಲೂಕಿನ ಬೋಳಂತೂರು ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಸನ್ನೀ ಸಂದೇಶ ಪತ್ರಿಕೆ ಸಂಪಾದಕ ಕೆ.ಎಸ್.ಹೈದರ್ ದಾರಿಮಿ ಹೇಳಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ, ಉನ್ನತ ವಿದ್ಯಾಭ್ಯಾಸ ಕಲಿಸುವ ಹಾಗೂ ಕಲ್ಲಡ್ಕ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಬೋಳಂತೂರಿನಲ್ಲಿ ದಾರುಲ್ ಉಲೂಂ ಎಜುಕೇಶನ್ ಅಕಾಡೆಮಿಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಶಿಲಾನ್ಯಾಸ ನೇರವೇರಿಸಲಿದ್ದು, ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಅಸ್ಸೈಯದ್ ಝೈನುಲ್ ಆಬಿದೀನ್ ತಂಙಳ್ ದುವಾಃ ನೆರವೇರಿಸುವರು. ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಅಸ್ಸೈಯದ್ ಅಲಿ ತಂಙಳ್ ಕುಂಬೋಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಮಸ್ತ ಇಸ್ಲಾಮಿಕ್ ಶೈಕ್ಷಣಿಕ ಮಂಡಳಿಯ ಕಾರ್ಯದರ್ಶಿ ಶೈಖುನಾ ಖಾಸಿಂ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಲ್. ಉಮರ್ ದಾರಿಮಿ, ಅಕಾಡಮಿಯ ಅಧ್ಯಕ್ಷ ಸುಲೈಮಾನ್ ಹಾಜಿ ಕಲ್ಲಡ್ಕ, ಸದಸ್ಯರಾದ ಹಕೀಂ ಪರ್ತಿಪಾಡಿ, ಮೂಸಾ ಕುದ್ದುಪದವು, ಕಲಂದರ್ ಪರ್ತಿಪಾಡಿ ಉಪಸ್ಥಿತರಿದ್ದರು.







