ಮಾ. 31: ಎಸ್ಸೆಸ್ಸೆಫ್ ಎನ್.ಸಿ ರೋಡ್ ಶಾಖೆಯಲ್ಲಿ ಬದ್ರಿಯಾ ಮಜ್ಲಿಸ್, ರಕ್ತದಾನ ಶಿಬಿರ

ಬಂಟ್ವಾಳ, ಮಾ. 28: ಎಸ್ಸೆಸ್ಸೆಫ್ ಎನ್.ಸಿ. ರೋಡ್ ಶಾಖೆಯ ವತಿಯಿಂದ ಮಾಸಿಕ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್, ಯತೀಂ ಹೆಣ್ಣಿನ ಮದುವೆ ಹಾಗೂ 13ನೆ ರಕ್ತದಾನ ಶಿಬಿರ ಮಾ. 31ರಂದು ಬೆಳಗ್ಗೆ 10ಕ್ಕೆ ಬೋಳಂತೂರಿನ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ಹಾಜಿ ವಗ್ಗ ಹೇಳಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರ ನೇತೃತ್ವದಲ್ಲಿ ನಿಖಾಹ್ ನಡೆಯಲಿದ್ದು, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪಿ.ಎ. ಅಬ್ದುರ್ರಹಿಮಾನ್ ಬಾಖವಿ ಅವರು ದುವಾಃ ನೆರವೇರಿಸಲಿದ್ದು, ಶೈಖುನಾ ಇಬ್ರಾಹಿಂ ಮದನಿ ಉಸ್ತಾದ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಮಲ್ಲೂರು ಮುದರ್ರಿಸ್ ಅಸಾಸ್ ಎಜುಕೇಶನ್ ಸೆಂಟರ್‌ನ ಅಸ್ಸೈಯದ್ ನಿಝಾಮುದೀನ್ ಬಾಫಲೀ ತಂಙಳ್ ಸಖಾಫಿ, ಎಸ್ಸೆಸ್ಸೆಫ್ ಜಿಲ್ಲಾ ಸಿರಾಜುದ್ದೀನ್ ಸಖಾಫಿ ಕನ್ಯಾನ, ಉಸ್ಮಾನ್ ಜೌಹರಿ ಅವರು ಮುಖ್ಯ ಪ್ರಭಾಷಣ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಹಾಬುದ್ದೀನ್ ತಂಙಳ್ ಮದಕ, ಇಬ್ರಾಹಿಂ ಸಖಾಫಿ, ಮಜೀದ್ ಕದ್ಕಾರು, ಫಾರೂಕ್ ಬಿ.ಜಿ. ಉಪಸ್ಥಿತರಿದ್ದರು.





