ಗುಂಡ್ಲುಪೇಟೆ: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿ ಶೀಟರ್ ಗಳ ಪರೇಡ್

ಗುಂಡ್ಲುಪೇಟೆ,ಮಾ.28: ವಿಧಾನ ಸಭೆಯ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಶಾಂತಿಸುವ್ಯವಸ್ಥೆ ಕಾಪಾಡಲು ಪಟ್ಟಣದ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಸಲಾಯಿತು.
ತಾಲೂಕಿನ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುಮಾರು 70ಕ್ಕೂ ಹೆಚ್ಚಿನ ಜನರ ಅಪರಾಧ ಹಿನ್ನೆಲೆ ಹಾಗೂ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ ಸರ್ಕಲ್ ಇನ್ಸ್‍ಪೆಕ್ಟರ್ ಜಗದೀಶ್ ಮಾತನಾಡಿ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಬೆದರಿಕೆ ಹಾಕುವುದು, ಅಶಾಂತಿ ಉಂಟುಮಾಡುವುದು, ಗ್ರಾಮಗಳಲ್ಲಿ ಗಲಭೆಯಲ್ಲಿ ಭಾಗವಹಿಸುವುದು ಹಾಗೂ ರೌಡಿ ಚಟುವಟಿಕೆಗಳನ್ನು ಮುಂದುವರೆಸಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ, ತಮ್ಮ ನಡವಳಿಕೆಗಳನ್ನು ಉತ್ತಮಪಡಿಸಿಕೊಂಡು ಸಮಾಜದಲ್ಲಿ ಸಭ್ಯಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಠಾಣೆಯ ಪಿಎಸ್‍ಐ ಬಿ.ಎಸ್.ಶಿವರುದ್ರ, ತೆರಕಣಾಂಬಿ ಠಾಣೆಯ ಕಿರಣ್ ಕುಮಾರ್ ಹಾಗೂ ಇತರರು ಇದ್ದರು.
Next Story





