Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ...

ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಬದ್ಧತೆ

ಟಿ. ದೇವಿದಾಸ್ಟಿ. ದೇವಿದಾಸ್29 March 2018 12:26 AM IST
share
ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಬದ್ಧತೆ

ಒಂದು ಕಾಲವಿತ್ತು. ಕಡಿಮೆ ವೇತನವಿದ್ದರೂ ಶಿಕ್ಷಕರಲ್ಲಿ ಬದ್ಧತೆಯಿತ್ತು. ವೃತ್ತಿ ಘನತೆ ಮತ್ತು ಗೌರವವಿತ್ತು. ಕಿತ್ತು ತಿನ್ನುವ, ಕಾಡುವ ಬಡತನವಿದ್ದರೂ ಸಮಾಜವೇ ಅವರನ್ನು ಬೆಂಬಲಿಸುತ್ತಿತ್ತು. ಅವರನ್ನು ಉಳಿಸಿಕೊಳ್ಳುವ ಕಾಳಜಿಯನ್ನು ಸಮಾಜ ಅಭಿವ್ಯಕ್ತಿಸಿದ್ದಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಕಷ್ಟು ಸಂಬಳವಿದೆ. ಶಿಕ್ಷಕ ತನ್ನನ್ನು ತಾನೇ ರಕ್ಷಿಸಿಕೊಳ್ಳಬೇಕೆಂಬ ಎಚ್ಚರ ಮತ್ತು ಕೌಟುಂಬಿಕ ಜವಾಬ್ದಾರಿಯ ನಿರ್ವಹಣೆಗಾಗಿ ಎಷ್ಟು ಹಣವನ್ನು ಗಳಿಸಿದರೂ ಸಾಲದಾಗಿ ಟ್ಯೂಷನ್ ತರಗತಿಗಳನ್ನು ಆರಂಭಿಸಬೇಕಾಗಿ ಬಂದು, ವೃತ್ತಿಗಿಂತ ಮುಖ್ಯವಾಗಿ ಅದಕ್ಕೇ ಮಹತ್ವಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇದು ವರ್ತಮಾನದ ಸ್ಥಿತಿ.

 ಈಗ ಶಾಲೆ-ಶಿಕ್ಷಕ -ವಿದ್ಯಾರ್ಥಿ-ಸಮಾಜದ ನಡುವೆ ಭಾವನಾತ್ಮಕ ಸಂಬಂಧ ಮರೆಯಾಗಿದೆ. ಎಲ್ಲವೂ ಶುದ್ಧ ವ್ಯವಹಾರವಾಗಿ ಬಿಟ್ಟಿದೆ. ಬದಲಾದ ಜಾಗತಿಕ ಸ್ಥಿತ್ಯಂತರಗಳು ಶಿಕ್ಷಕರಲ್ಲಿ ವೃತ್ತಿಬದ್ಧತೆಯನ್ನು ಅಪಮೌಲ್ಯಗೊಳಿಸುತ್ತಿದೆ. ವಿದ್ಯಾರ್ಥಿಯ ಮನಸ್ಸನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮುಟ್ಟುವುದಿಲ್ಲ. ಅವನ ಅಂತರಂಗ ಬಹಿರಂಗವನ್ನು ಅನುಸಂಧಿಸುವ ಪ್ರಕ್ರಿಯೆ ತರಗತಿಯಲ್ಲಿ ನಡೆಯುವುದಿಲ್ಲ. ಕೇವಲ ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಬಾಂಧವ್ಯವೂ ಕಾಣುವುದಿಲ್ಲ. ಇದಕ್ಕೆ ಸಮಾಜವೂ ಒಂದು ಕಾರಣವಾದರೆ, ಶಿಕ್ಷಣ ಸಂಸ್ಥೆಗಳ ಧ್ಯೇಯ ಧೋರಣೆಗಳು ಇನ್ನೊಂದು ನೆಲೆಯಲ್ಲಿ ಕಾರಣವಾಗುತ್ತದೆ.

ಯಾವ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವಾಸಕ್ಕಿಂತ ಹೆಚ್ಚಾಗಿ ವ್ಯವಹಾರಮುಖಿ ಸಂಬಂಧಗಳಿರುತ್ತವೆಯೋ ಅಲ್ಲಿ ಆರ್ಥಿಕತೆಯೇ ಪ್ರಧಾನವಾಗುತ್ತಾ ಹೋಗುತ್ತದೆ. ಶಿಕ್ಷಣದ ಉದ್ದೇಶ ಆರ್ಥಿಕತೆಯನ್ನು ಬಲಗೊಳಿಸುವುದು ಹೌದಾದರೂ ತರಗತಿಯಲ್ಲಿ ಅದೊಂದೇ ವಿಚಾರಗಳು ಮಾತ್ರ ಬೋಧಿಸಲ್ಪಡಲಾಗದು. ಅದರಾಚೆಗಿನ ಜೀವನಮೌಲ್ಯಗಳು ಬೋಧಿಸಲ್ಪಡಬೇಕಾಗುತ್ತದೆ. ಆದರೆ ಸಮಾಜ ಇದನ್ನು ಸ್ವೀಕರಿಸಲಾರದಷ್ಟು ಮಟ್ಟಿಗೆ ಶಾಲೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದಕ್ಕೆ ಸರಿಯಾಗಿ ಶೈಕ್ಷಣಿಕಾತ್ಮಕವಾದ ಆಡಳಿತದ ಪರಿಕಲ್ಪನೆಗಳು ಬೆಳೆದುಕೊಂಡಿವೆ. ಶಿಕ್ಷಕರನ್ನೇ ಪ್ರತಿಯೊಂದಕ್ಕೂ ಗುರಿಯಾಗಿಸುವ ಮತ್ತು ಬದುಕಿನ ಅಗತ್ಯಕ್ಕಾಗುವಷ್ಟಾದರೂ ಸಂಬಳ ನೀಡುವುದಿಲ್ಲವಾದರೆ ಯಾವ ಶಿಕ್ಷಕನಲ್ಲಿ ವೃತ್ತಿ ಬದ್ಧತೆ, ಗೌರವ ಹುಟ್ಟಲು ಸಾಧ್ಯ? ಎಲ್ಲವೂ ವ್ಯವಹಾರವಾಗಿ ಬದಲಾದದ್ದು ಇಂತಹ ಸ್ಥಿತಿಯಿಂದ. ನಾವು ಸಂಬಳ ಕೊಡುತ್ತೇವೆ, ನಾವು ಫೀಸು ಕೊಡುತ್ತೇವೆ, ಆದ್ದರಿಂದ ಇಂತಿಷ್ಟು ಅಂಕಗಳು ಬರಲೇಬೇಕು ಎಂಬುದಕ್ಕೆ ಕಲಿಕೆ ಮತ್ತು ಬೋಧನೆ ಸಂತೆಯಲ್ಲಿ ಮಾರಾಟಕ್ಕಿಟ್ಟ ಸರಕುಗಳಲ್ಲವಲ್ಲ!

ಯಾವುದನ್ನು ಸರಕುಗಳನ್ನಾಗಿ ನೋಡಬಾರದಿತ್ತೋ, ಅಥವಾ ಶಿಕ್ಷಕನನ್ನು ಸರಕುಗಳನ್ನು ಮಾರುವ ಮಾಲಕನಂತೆ ಕಾಣಬಾರದಿತ್ತೋ ಅದು ಘಟಿಸಿದ್ದರಿಂದಾಗಿಯೇ ವರ್ತಮಾನದ ಶಿಕ್ಷಣ ವ್ಯವಸ್ಥೆ ಕೊಡು ಕೊಳ್ಳುವಿಕೆಯ ದಾರಿಹಿಡಿದಿದ್ದು. ಕೇವಲ ಅಂಕಗಳಿಕೆಗೆ ಒಟ್ಟು ವ್ಯವಸ್ಥೆಯೇ ಮಹತ್ವ ನೀಡುತ್ತಿರುವುದರಿಂದ ಶಿಕ್ಷಕನಿಗೆ ಬದ್ಧತೆಗಾಗಲೀ, ಸ್ವಾಧ್ಯಾಯಕ್ಕಾಗಲೀ ಅವಕಾಶ ಅಸಾಧ್ಯವಾಗುತ್ತಿದೆ. ವ್ಯವಸ್ಥೆಗೆ ಶಿಕ್ಷಕರು ಹೊಂದಿಕೊಳ್ಳುತ್ತಾ ಶಾಲೆಗಳಲ್ಲಿ ಪ್ರತಿಭೆಗಳನ್ನು ಗುರುತಿಸಲ್ಪಡದೆ ಕೇವಲ ಉತ್ತಮವಾದ ಅಂಕಗಳನ್ನು ಬರುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ. ಹೆತ್ತವರೂ ಶಾಲೆಯವರೂ ತಮ್ಮ ಮಕ್ಕಳು ಹೆಚ್ಚು ಹೆಚ್ಚು ಅಂಕಗಳನ್ನು ಪಡೆದರೆ ಸಾಕೆಂಬ ಮನಸ್ಥಿತಿಯನ್ನು ಹೊಂದಿರುವುದರಿಂದ ಶಿಕ್ಷಕರು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಪಾಠಬೋಧನೆಯನ್ನು ಅಂಕಗಳಿಕೆಯ ಮಾರ್ಗೋಪಾಯವಾಗಿ ಮಾಡಬೇಕಾಗಿದೆ.

ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೂ, ಪ್ರತೀಶಾಲೆಯೂ ಬೋಧನೆ ಮತ್ತು ಕಲಿಕೆಗೆ ಹೆಚ್ಚು ಒತ್ತು ನೀಡುವುದು ಸತ್ಯವಾದರೂ ಹೆಚ್ಚು ಅಂಕಗಳನ್ನೇ ಪಡೆಯುವಂತಾಬೇಕೆಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಪಿಯುಸಿಗೆ ಒಳ್ಳೆಯ ಕಾಲೇಜಿಗೆ (ಹೆಚ್ಚು ಫೀಸು ತಗೊಳ್ಳುವ ಕಾಲೇಜು ಒಳ್ಳೆಯದೆಂಬ ಮನಸ್ಥಿತಿ) ಸೇರಬೇಕಾದರೆ ಉತ್ತಮ ಅಂಕಗಳು ಬೇಕು, ಇಲ್ಲ ಹೆಚ್ಚು ಹಣ ನೀಡಬೇಕು. ಈ ಅನಿವಾರ್ಯತೆಯಿಂದ ಹೆತ್ತವರು ಅಂಕಕ್ಕೇ ಪ್ರಾಧಾನ್ಯ ಕೊಡುವುದರಿಂದ ಶಿಕ್ಷಕರಲ್ಲಿ ಬದ್ಧತೆಯೆಂಬುದು ಸೊರಗುತ್ತಿದೆ. ಬೋಧನೆಗೆ ಹೆಚ್ಚಿನ ಓದು ಅನಗತ್ಯವೆನಿಸಿ ಇರುವ ಜ್ಞಾನದಲ್ಲೇ ಬೋಧಿಸುವ ವಾತಾವರಣ ಬೆಳೆದಿದೆ. ಪುಸ್ತಕಗಳನ್ನು ಓದುವ ಅಭ್ಯಾಸ ಅಥವಾ ಹವ್ಯಾಸ ಶಿಕ್ಷಕರಲ್ಲೂ ವಿದ್ಯಾರ್ಥಿಗಳಲ್ಲೂ ಕಡಿಮೆಯಾಗುತ್ತಿರುವುದು ಈ ಕಾರಣದಿಂದಾಗಿ.

ತರಗತಿಯಲ್ಲಿ ಪಾಠಮಾಡುವ ಶಿಕ್ಷಕನನ್ನು ಯಾವುದೋ ವಿಚಾರಣೆಗೆ ಅಥವಾ ಅನ್ಯಕಾರ್ಯ ನಿಮಿತ್ತ ಹೊರಬರುವಂತೆ ಮಾಡುವ ಮೇಲಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವಂತಹ ಕಾನೂನು ಆ ಶಿಕ್ಷಕನಿಗೆ ಇದ್ದರೆ ಎಷ್ಟೋ ಶಾಲೆಗಳಲ್ಲಿ ಪಾಠಬೋಧನೆ ಸುಗಮವಾಗಬಹುದು. ಶಿಕ್ಷಕರೂ ಈ ಬದ್ಧತೆಯನ್ನು ತರಗತಿಯಲ್ಲಿ ಹೊಂದಿರಬೇಕಾಗುತ್ತದೆ. ತಾನು ಬೋಧಿಸುವ ವಿದ್ಯಾರ್ಥಿ ಯಾವ ಜಾತಿ, ಯಾವ ಮನೆತನದವ, ಇವನ ತಂದೆತಾಯಿಗಳಾರು, ಇವನ ಆರ್ಥಿಕ ಹಿನ್ನೆಲೆಯೇನು ಇಂಥದ್ದರ ಕಡೆಗೆ ಗಮನ ಹರಿಸದೆ ಇವನು ನನ್ನ ವಿದ್ಯಾರ್ಥಿಯೆಂದಷ್ಟೇ ಪರಿಗಣಿಸಬೇಕು. ಬದ್ಧತೆಯನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕಾಗುತ್ತದೆ. ಶಾಲೆಯ ಆಂತರಿಕವಾದ ಶೈಕ್ಷಣಿಕ ಆಡಳಿತ ನೀತಿಯು ಶಿಕ್ಷಕರ ಬದ್ಧತೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ವೇತನ ತಾರತಮ್ಯ, ಕೆಲಸ ಹಂಚುವಿಕೆ, ಜಾತೀಯತೆ, ಸ್ವಜನ ಪಕ್ಷಪಾತ, ಶಿಕ್ಷಕನ ಪ್ರತಿಭೆಯನ್ನು ಗುರುತಿಸದಿರುವುದು, ಸುಳ್ಳು ಅಥವಾ ತಪ್ಪುಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡುವುದು  ಹೀಗಿರುವೆಡೆಯೆಲ್ಲ ಶಿಕ್ಷಕ ತನ್ನ ಬದ್ಧತೆಯನ್ನು ನಾಟಕೀಯವಾಗಿ ತೋರ್ಪಡಿಸುತ್ತಾ ಮೇಲಧಿಕಾರಿಗಳನ್ನು ಓಲೈಸಲು ಮುಂದಾಗುತ್ತಾನೆ. ಇಂಥವು ಖಾಸಗಿ ಶಾಲೆಗಳಲ್ಲಿ ಸಾಮಾನ್ಯವಾಗಿರುತ್ತದೆ.

ಅಲ್ಲಿ ಒಬ್ಬ ಶಿಕ್ಷಕನ ಬದ್ಧತೆಯ ಅಸ್ತಿತ್ವವಿರುವುದು ಪಾಲಕರಿಂದ ಯಾವ ದೂರು ಬರದಂತೆ ಎಚ್ಚರವಹಿಸುವುದರಲ್ಲಿ, ತನ್ನ ವಿದ್ಯಾರ್ಥಿಗಳನ್ನು ಓಲೈಸುವುದರಲ್ಲಿ, ಮ್ಯಾನೇಜ್ಮೆಂಟನ್ನು ಮುಖವಾಡದ ಭಾವದಲ್ಲಿ ತೃಪ್ತಿಗೊಳಿಸುವುದರಲ್ಲಿ. ಲಕ್ಷಗಟ್ಟಲೆ ಸುರಿಯುವ ಹೆತ್ತವರು ಇಂಥ ಕಡೆಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಹೊರಡುವುದು ತಪ್ಪುಅನಿಸಲಾರದಾದರೂ, ಹೆತ್ತವರ ಈ ವರ್ತನೆ ಪರೋಕ್ಷವಾಗಿ ಶಿಕ್ಷಕನ ಬದ್ಧತೆಯನ್ನು ನಾಶಗೊಳಿಸುತ್ತಲೇ ಹೋಗುತ್ತದೆ. ಹಿಂದಿನ ತಲೆಮಾರಿನ ಶಿಕ್ಷಕರಲ್ಲಿ ಬದ್ಧತೆಯೆಂಬುದು ತರಗತಿಯಾಚೆಯೂ ಇತ್ತು. ತನ್ನ ವಿದ್ಯಾರ್ಥಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯಬೇಕೆಂಬ ಬದ್ಧತೆಯನ್ನು ಹಿಂದಿನವರು ಹೊಂದಿರುವುದರಿಂದ ಅಂತಹ ಅಧ್ಯಾಪಕರಲ್ಲಿ ಕಲಿತ ಆ ತಲೆಮಾರಿನ ಜನರಲ್ಲಿ ತಾವೆಷ್ಟೇ ದೊಡ್ಡ ಅಧಿಕಾರದಲ್ಲಿದ್ದರೂ ಇಂದಿಗೂ ತಮ್ಮ ಗುರುಗಳ ಮೇಲಿನ ಭಕ್ತಿ, ಗೌರವ, ಘನತೆ ಕಡಿಮೆ ಯಾಗಲಿಲ್ಲ. ಈಗಲೂ ಅಂಥ ಅಧ್ಯಾಪಕರು ಗುರುಗಳಾಗೇ ಇದ್ದಾರೆ. ಅವರೇನೇ ಅಂದರೂ, ಮಾಡಿದರೂ ಸರಿಯೆಂಬ ಧೋರಣೆ ಈ ಸಮಾಜ ದಲ್ಲಿ ಆಗಲೂ ಇತ್ತು, ಈಗಲೂ ಇದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದಾಗ ಎರಡೆರಡು ಕಾರ್ಯಗಳನ್ನು ಒಬ್ಬನೇ ಶಿಕ್ಷಕ ನಿರ್ವಹಿಸಬೇಕಾಗಿ ಬಂದ ಸಂದರ್ಭಗಳಲ್ಲಿ ಯಾವ ಬದ್ಧತೆಯನ್ನು ಶಿಕ್ಷಕರಿಂದ ನಿರೀಕ್ಷಿಸುವುದು ಸಾಧ್ಯ ? ಖಾಸಗಿ ಶಾಲೆಗಳಲ್ಲಿ ಈ ಸಮಸ್ಯೆ ಇರಲಾರದು. ಇದ್ದರೆ ಪಾಲಕರು ಗಲಾಟೆ ಮಾಡುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರು ಬಡವರಾಗಿರುತ್ತಾರೆ. ಅವರು ಇಂಥ ಗಲಾಟೆಗೆ ಬರುವ ಧೈರ್ಯ ಮಾಡುವುದಿಲ್ಲ. ಸರಕಾರಿ ಶಾಲೆಗಳಲ್ಲಿ ಕೊರತೆ, ಅವ್ಯವಸ್ಥೆ, ಅಧಿಕಾರದ ದರ್ಪ ಕಾಣುತ್ತದಾದರೆ, ಖಾಸಗಿ ಶಾಲೆಗಳಲ್ಲಿ ಬಾಸಿಸಂ ಮತ್ತು ಶೋಷಣೆ ಕಾಣುತ್ತದೆ. ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕನನ್ನು ತಮ್ಮ ಮಕ್ಕಳೆದುರೇ ಏಕವಚನದಲ್ಲಿ ಅಗೌರವದಿಂದ ಪ್ರಶ್ನಿಸುವ ಪಾಲಕರ ಮುಂದೆ ತನ್ನ ವೃತ್ತಿಬದ್ಧತೆಯನ್ನು ಶಿಕ್ಷಕ ಹೇಗೆ ಉಳಿಸಿಕೊಂಡಾನು? ಅವನೂ ಹಣಗಳಿಕೆಯ ಸುಲಭಮಾರ್ಗಕ್ಕೆ ಆತುಕೊಳ್ಳುತ್ತಾನೆ. ಆಗಲೇ ವೃತ್ತಿಬದ್ಧತೆ ಸಂಪೂರ್ಣವಾಗಿ ಸಾಯುವುದು. ಪರೋಕ್ಷವಾಗಿ ಇದು ಪರಿಣಾಮ ಬೀರುವುದು ಕಲಿಕೆಯ ಮೇಲೆ. ಶಾಲೆಯ ಮೇಲೆ. ಶಿಕ್ಷಣವ್ಯವಸ್ಥೆಯ ಮೇಲೆ.

ಯಾವ ಶಿಕ್ಷಕನೂ ವೃತ್ತಿಬದ್ಧತೆಯನ್ನು ಅಷ್ಟು ಸುಲಭವಾಗಿ ಕಳೆದು ಕೊಳ್ಳಲಾರ. ಕಲಿಕೆಯಲ್ಲಿ ಕಳ್ಳಬುದ್ಧಿಯ ವಿದ್ಯಾರ್ಥಿಯಿರುವಂತೆ ಬೋಧನೆ ಯಲ್ಲಿ ಕಳ್ಳಬುದ್ಧಿಯ ಶಿಕ್ಷಕನಿರಲಾರ. ಇದ್ದರೂ ಸಾವಿರಕ್ಕೊಂದಿರಬಹುದಷ್ಟೆ. ಪರಿಸ್ಥಿತಿ, ಸಂದರ್ಭ, ಸನ್ನಿವೇಶಗಳು ಸೃಷ್ಟಿಸುವ ಬಿಕ್ಕಟ್ಟು, ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಆಡಳಿತ ನೀತಿಗಳು, ಶಿಕ್ಷಕರನ್ನು ಸಮಾಜ ನಡೆಸಿ ಕೊಳ್ಳುವ ಬಗೆಯಿಂದಾಗಿ ಶಿಕ್ಷಕನಲ್ಲಿ ವೃತ್ತಿಬದ್ಧತೆ ಮತ್ತು ಗೌರವ ಬಲಹೀನವಾಗು ತ್ತದೆಯೇ ಹೊರತು ಅನ್ಯ ಕಾರಣಗಳಿಂದಲ್ಲ.

share
ಟಿ. ದೇವಿದಾಸ್
ಟಿ. ದೇವಿದಾಸ್
Next Story
X