ಪೈಪ್ ಒಡೆದು ನೀರು ಚಿಮ್ಮಿದ ರಭಸಕ್ಕೆ 10 ಅಡಿ ಎತ್ತರ ಹಾರಿದ ಬೊಲೆರೊ!
ವಿಡಿಯೋ ವೈರಲ್
ಮುಂಬೈ, ಮಾ.29: ನೀರಿನ ಪೈಪ್ ಒಡೆದ ಪರಿಣಾಮ ನೀರು ಚಿಮ್ಮಿದ್ದು, ನೀರಿನ ರಭಸಕ್ಕೆ ಬೊಲೆರೊ ಕಾರೊಂದು ಮೇಲಕ್ಕೆ ಚಿಮ್ಮಿದೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀರಿನ ರಭಸಕ್ಕೆ ಬೊಲೆರೋ ಸುಮಾರು 10 ಅಡಿ ಎತ್ತರಕ್ಕೆ ಹಾರಿದೆ. ಬೊರಿವಲಿಯ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೈಪ್ ಒಡೆದದ್ದರಿಂದ ಮೊಣಕಾಲಿನವರೆಗೆ ನೀರಿದ್ದು, ಜನರು ಅದರ ಮೇಲೆಯೇ ನಡೆದಾಡುತ್ತಿದ್ದರು. ಈ ಸಂದರ್ಭ ಒಡೆದ ಪೈಪ್ ನಿಂದ ನೀರು ರಭಸವಾಗಿ ಹೊರಬಂದಿದ್ದ ಬೊಲೆರೊವೊಂದನ್ನು ಮೇಲಕ್ಕೆ ಎಸೆದಿದೆ.
Next Story