ವೈರಲ್ ವೀಡಿಯೊದ ಮುದ್ದಿನ ಅಜ್ಜಿ ಕಲ್ಯಾಣಿ ಮೂಲ್ಯ ಇನ್ನಿಲ್ಲ

ಬಂಟ್ವಾಳ, ಮಾ. 29: ಐದು ತಲೆಮಾರಿನ ಸಂಸಾರ ಹೊಂದಿದ್ದ ಬಿ.ಸಿ. ರೋಡ್ ಸಮೀಪದ ಅಜ್ಜಿಬೆಟ್ಟು ನಿವಾಸಿ ದಿ. ಶಿವಪ್ಪ ಮೂಲ್ಯ ಅವರ ಧರ್ಮಪತ್ನಿ ಕಲ್ಯಾಣಿ ಮೂಲ್ಯ (85) ಅವರು ಗುರುವಾರ ನಿಧನರಾಗಿದ್ದಾರೆ.
ಯಾರದೇ ಸಹಾಯ ಪಡೆಯದೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿ, ಉತ್ತಮ ಆರೋಗ್ಯದಿಂದ ಜೀವನ ನಡೆಸುತ್ತ ಕುಟುಂಬಕ್ಕೆ ಮಾದರಿ ಯಾಗಿದ್ದರು.
ಒಂದು ತುಂಬಿದ ಕುಟುಂಬಕ್ಕೆ ಮಾದರಿಯಾಗಿದ್ದ ಅಜ್ಜಿಯ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಹಾಗೂ ಗ್ರಾಮದಲ್ಲಿ ಮೌನ ಆವರಿಸಿದೆ.
ಮೃತರು ಪುತ್ರ, ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ಮೊಮ್ಮಗ ಧೀರಜ್ ಅವರು`ಕುಕ್ಕುಡು ಉಂಡರಪ್ಪೆ’ ಎಂದು ತಮಾಷೆಗಾಗಿ ಕೆಣಕಿ ತೆಗೆದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Next Story





