ಕೈರಂಗಳ: ಗೋ ಶಾಲೆಗೆ ನುಗ್ಗಿ ದನ ಕಳವು
ಕೊಣಾಜೆ, ಮಾ. 29: ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಅಮೃತಧಾರ ಗೋಶಾಲೆಯ ದನವನ್ನು ಕಾರಿನಲ್ಲಿ ತುಂಬಿಸಿ ಕಳವುಗೈದಿರುವ ಘಟನೆ ಗುರುವಾರ ಸಂಭವಿಸಿದೆ.
ಗೋ ಶಾಲೆಗೆ ನುಗ್ಗಿದ ದುಷ್ಕರ್ಮಿಗಳು ಗೇಟಿನ ಬೀಗವನ್ನು ಒಡೆದು ಕಟ್ಟಿ ಹಾಕಲಾಗಿದ್ದ ದನವನ್ನು ಕಾರಿನೊಳಗೆ ತುಂಬಿಸಿ, ಮತ್ತೊಂದನ್ನು ತುಂಬಿಸಲಾಗದೆ ಬಿಟ್ಟು ಹೋಗಿದ್ದು, ಅಲ್ಲದೆ ಅಲ್ಲಿದ್ದ ಯುವಕರಿಗೆ ಬೆದರಿಕೆಯೊಡ್ಡಿ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





